Advertisement

ನಾಳೆ ಕಲಬುರಗಿಯಲ್ಲಿ ಶಿವಾಚಾರ್ಯರ ಸಮಾವೇಶ

03:19 PM Jan 21, 2021 | Team Udayavani |

ಕಲಬುರಗಿ: ನಗರದ ಸೇಡಂ ರಸ್ತೆಯ ಶ್ರೀ ಹಾರಕೂಡ ಚೆನ್ನಬಸವೇಶ್ವರ ಮಂಗಲ ಮಂಟಪದಲ್ಲಿ ಜ. 22ರಂದು ಬೆಳಗ್ಗೆ 10:30ಕ್ಕೆ ಶಿವಾಚಾರ್ಯರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಆಂಧ್ರ ತೆಲಂಗಾಣ
ಮಹಾರಾಷ್ಟ್ರ, ಕರ್ನಾಟಕದ ಎಲ್ಲ ಭಾಗಗಳಿಂದ ಪಂಚಪೀಠದ ಶಾಖಾ ಮಠಗಳ ಶಿವಾಚಾರ್ಯರು, ಸುಮಾರು 300ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸುವ ನಿರೀಕ್ಷೆಯಿದೆ.

Advertisement

ಧಾರ್ಮಿಕ, ಸಾಮಾಜಿಕ ಪ್ರಸ್ತುತ ಸ್ಥಿತಿಗತಿ ಕುರಿತು ಸಮಾಲೋಚನಾ ಸಭೆ ನಡೆಸಲಾಗುವುದು. ಈ ಹಿಂದೆ ಬೆಂಗಳೂರು ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ಸಭೆಯಲ್ಲಿ ಸುಮಾರು 120ಕ್ಕೂ ಹೆಚ್ಚು ಪಂಚಪೀಠದ ಶಾಖಾಮಠಗಳ ಶಿವಾಚಾರ್ಯರು ಭಾಗವಹಿಸಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನಗಳು ನಮೂದನೆ ಗೊಂಡಿವೆ.

ಅದರಂತೆ ಎರಡನೇ ಸಭೆಯಾಗಿ ಈಗ ಕಲಬರುಗಿ ಮಹಾನಗರದಲ್ಲಿ ಜಿಲ್ಲೆಯ ಎಲ್ಲ ಪಂಚಪೀಠಗಳ ಶಾಖಾಮಠಗಳ ಶಿವಾಚಾರ್ಯರ ಸಮ್ಮುಖದಲ್ಲಿ ಸಭೆ ನಡೆಯುತ್ತಿದೆ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವ ಅಧ್ಯಕ್ಷರಾದ ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು, ಅಧ್ಯಕ್ಷರಾದ ಶಖಾಪುರ ತಪೋವನ ಮಠದ ಸಿದ್ಧರಾಮ ಶಿವಾಚಾರ್ಯರು, ಪ್ರಧಾನ ಕಾರ್ಯ ದರ್ಶಿಯಾಗಿರುವ ಪಾಳಾದ ಗುರುಮೂರ್ತಿ ಶಿವಾಚಾರ್ಯರು ತಿಳಿಸಿದ್ದಾರೆ.

ಶಾಸಕ ತೇಲ್ಕೂರ್‌ ನಿರ್ವಹಣಾ ಜವಾಬ್ದಾರಿ: ನಗರದಲ್ಲಿ ನಡೆಯುವ ಪಂಚಪೀಠಗಳ ಶಾಖಾಮಠದ ಶಿವಾಚಾರ್ಯರ ಸಮಾಲೋಚನಾ ಸಭೆಯ ಸಂಪೂರ್ಣ ವ್ಯವಸ್ಥೆಯನ್ನು ಎನ್‌ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹಾಗೂ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್‌, ರಾಜ್ಯ ಶುಶ್ರೂಷಕ ಪರಿಷತ್ತಿನ ನಾಮನಿರ್ದೇಶನ ಸದಸ್ಯೆ ದಿವ್ಯಾ ರಾಜೇಶ ಹಾಗರಗಿ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆ ಇವರ ಸಹಾಯ-ಸಹಕಾರದೊಂದಿಗೆ
ಸಂಪನ್ನಗೊಳ್ಳುವುದು ಎಂದು ತಿಳಿಸಿದ್ದಾರೆ.

ಸಮಾಲೋಚನಾ ಸಭೆಯಲ್ಲಿ ಸನಾತನ ಪರಂಪರೆ ಮತ್ತು ಆಧುನಿಕ ಶಿಕ್ಷಣವನ್ನು ಒಳಗೊಂಡ ಗುರುಕುಲ ಆರಂಭಿಸುವ ಕುರಿತು ವೀರಶೈವ-ಲಿಂಗಾಯತ ಒಳಪಂಗಡಗಳ ಜೊತೆಗೆ ಶಿವಾಚಾರ್ಯರ ನಡೆಯ ಬಗ್ಗೆ ಚರ್ಚೆ ಕುರಿತು ಮುಂಬರುವ ಜನಗಣತಿಯಲ್ಲಿ ಸಮುದಾಯದವರಿಗೆ ಧರ್ಮದ ಹೆಸರು ನಮೂದಿಸುವ ಬಗ್ಗೆ ಮಹಾರಾಷ್ಟ್ರದ ನಾಗಠಾಣ ಮಠದ ಶಿವಾಚಾರ್ಯರ ಹತ್ಯೆ ಕುರಿತು ಶೀಘ್ರ ತನಿಖೆ ಮಾಡಿ ಅಪರಾಧಿಯನ್ನು ಶಿಕ್ಷಿಸಲು ಒತ್ತಾಯದ ಕುರಿತು, ಬೀದರ್‌ ಜಿಲ್ಲೆಯ ಏತ ನೀರಾವರಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕರ್ನಾಟಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ಹಾಗೂ ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಲಾಗುತ್ತಿದೆ.

Advertisement

ಅಲ್ಲದೇ ಕಲಬುರಗಿ ಮಹಾನಗರದ ವ್ಯಾಪ್ತಿಯಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕಕ್ಕೆ ಸರಕಾರಿ ನಿವೇಶನ ನೀಡುವುದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next