Advertisement
ಅಂದು ಬೆಳಗ್ಗೆ 7ರಿಂದ ಭವ್ಯ ಮೆರವಣಿಗೆಯ ಮೂಲಕ ಉತ್ಸವವು ಪ್ರಾರಂಭವಾಗಿದ್ದು ಸುಮಾರು 3 ಸಾವಿರ ಸುಮಂಗಲೆಯರು ಜಲ ಕುಂಭದೊಂದಿಗೆ ಪಾಲ್ಗೊಂಡಿದ್ದರು. ಮುಂಜಾನೆ ಪಂಚಾಚಾರ್ಯ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌಡಗಾಂವ್‌ನ ಪೂಜ್ಯ ಡಾ| ಜಯಸಿದ್ಧೇಶ್ವರ ಸ್ವಾಮೀಜಿ, ಚಿಟಗುಪ್ಪದ ಗುರಲಿಂಗ ಶ್ರೀಗಳು, ಮಾಗಣ ಕೇರಿಯ ವಿಶ್ವಾರಾಧ್ಯ ಶ್ರೀಗಳು, ನಾಗಣಸೂರದ ಶ್ರೀಕಂಠ ಶ್ರೀಗಳು, ಮಂದ್ರೂಪದ ರೇಣುಕ ಶ್ರೀಗಳು, ಪಾನಮಂಗಳೂರಿನ ಶಿವಯೋಗಿ ಶ್ರೀಗಳ ಸಾನ್ನಿಧ್ಯದಲ್ಲಿ ಧ್ವಜಾರೋಹಣ ನಡೆಯಿತು.
Related Articles
Advertisement
ಮೆರವಣಿಗೆ ಮಂದಿರ ತಲು ಪಿದ ಅನಂತರ ಮಧ್ಯಾಹ್ನ 1008 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಮೊದಲಿಗೆ ಮೇಯರ್ ಶೋಭಾ ಬನಶೆಟ್ಟಿ ಅವರಿಗೆ ಉಡಿತುಂಬಿಸುವ ಭಾಗ್ಯ ಒಲಿದು ಬಂದಿತ್ತು. ಬೆಳಗ್ಗೆಯಿಂದ ಸಾಯಂಕಾಲದವರೆಗೂ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿತ್ತು. ಈ ಸಂಕಲ್ಪಸಿದ್ಧಿ ಮಹೋತ್ಸವದಲ್ಲಿ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ಹಾಗೂ ಆಂಧ್ರದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮೆರವಣಿಗೆ ಮಾರ್ಗದ ರಸ್ತೆ ಯಲ್ಲಿ ಬಣ್ಣ-ಬಣ್ಣದ ರಂಗೋಲಿ ಹಾಕಲಾಗಿತ್ತು. ಅಲ್ಲಲ್ಲಿ ಮೆರವಣಿಗೆಗೆ ಪುಷ್ಪವೃಷ್ಟಿಗೈಯುವ ಮೂಲಕ ಮೆರವಣಿಗೆಗೆ ಸ್ವಾಗತ ಕೋರಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಣ್ಣು ಮತ್ತು ನೀರು ವಿತರಣೆಗೈದರು. 10 ಕುದುರೆಗಳು, ಎತ್ತಿನ ಬಂಡಿ, ಎರಡು ರಥ, ತೆರೆದ ವಾಹನ ದಲ್ಲಿ ಪರಮಪೂಜ್ಯ ಲಿಂಗೈಕ್ಯ ಷ. ಬ್ರ. ತಪೋರತ್ನಂ ಯೋಗಿ ರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಅವರ ಮೂರ್ತಿ ಮೆರವಣಿಗೆ ನೆರವೇರಿತು. ಆಳಂದ ಶಾಸಕ ಬಿ. ಆರ್. ಪಾಟೀಲ್ ಮತ್ತು ಸೋಮನಾಥ ರಗಬಲೆ ಇವರು ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಿದರು.