ಜಲವಳ್ಳಿಯ ಕಲಾಧರ ಯಕ್ಷರಂಗ ಬಳಗ ಹಾಗೂ ಅತಿಥಿ ಕಲಾವಿದರ ಅಪೂರ್ವ ಸಂಗಮದಲ್ಲಿ “ಶಿವ ಶಾಂಭವಿ’ ಯಕ್ಷಗಾನ ಪ್ರದರ್ಶನ ಏರ್ಪಾಡಾಗಿದೆ. ಮನುಷ್ಯ, ತನ್ನ ಜೀವನದಲ್ಲಿ ಅಧಿಕಾರ, ಧನ ಮದದಿಂದ ಅಹಂಕಾರಿಯಾಗಿ ಅದನ್ನು ದುರುಪಯೋಗಪಡಿಸಿಕೊಂಡು ಅಟ್ಟಹಾಸದಿಂದ ಮೆರೆಯುತ್ತಾನೆ. ಮನುಷ್ಯನಿಗೆ ಗೊತ್ತಿಲ್ಲದ ಸಂಗತಿ ಎಂದರೆ ಕಣ್ಣಿಗೆ ಕಾಣದ ಶಕ್ತಿಯೊಂದು ನಮ್ಮನ್ನು ನೋಡುತ್ತಾ ಇರುತ್ತದೆ. ಅವರವರ ಕರ್ಮಕ್ಕೆ ಸರಿಯಾಗಿ ಮನುಷ್ಯ ಪ್ರತಿಫಲ ಪಡೆಯುತ್ತಾನೆ ಎನ್ನುವ ದಿವ್ಯ ಸಂದೇಶ ಹಾಸ್ಯಭರಿತ “ಶಿವ ಶಾಂಭವಿ’ ಯಕ್ಷಗಾನದಲ್ಲಿದೆ.
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ
ಯಾವಾಗ?: ಜೂನ್ 4, ರಾತ್ರಿ 10