Advertisement

Shiva Rajkumar; ಅ.18 ಮಧ್ಯರಾತ್ರಿ ಘೋಸ್ಟ್‌ ಎಂಟ್ರಿ: ಫ್ಯಾನ್‌ ಶೋಗೆ ಭರ್ಜರಿ ತಯಾರಿ

02:28 PM Oct 09, 2023 | Team Udayavani |

ಶಿವರಾಜ್‌ಕುಮಾರ್‌ ನಾಯಕರಾಗಿರುವ “ಘೋಸ್ಟ್‌’ ಚಿತ್ರ ಅ.19ರಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಹಿಟ್‌ಲಿಸ್ಟ್‌ ಸೇರುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಾಗಿದೆ. ಈಗ ಶಿವಣ್ಣ ಅಭಿಮಾನಿಗಳಿಗೆ ಮತ್ತೂಂದು ಗುಡ್‌ನ್ಯೂಸ್‌ ಕೊಟ್ಟಿದೆ ಚಿತ್ರತಂಡ. ಅದು ಸಿನಿಮಾದ ವಿಶೇಷ ಪ್ರದರ್ಶನದ ಕುರಿತು.

Advertisement

ಇದೇ ಮೊದಲ ಬಾರಿಗೆ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಅಕ್ಟೋಬರ್‌ 18ರ ಮಧ್ಯರಾತ್ರಿ 12 ಕ್ಕೆ ಭರ್ಜರಿ ಫ್ಯಾನ್‌ ಶೋ ಆಯೋಜಿಸಲಾಗಿದೆ. ಈ ಚಿತ್ರವನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಅಣಿಯಾಗುತ್ತಿದ್ದಾರೆ. ಶಿವಣ್ಣ ಅಭಿನಯದ ಭಜರಂಗಿ ಚಿತ್ರದ ಪ್ರದರ್ಶನ ಬೆ.6ರಿಂದ ಆರಂಭವಾಗಿತ್ತು.

ಚಿತ್ರದ ಬಗ್ಗೆ ಮಾತನಾಡುವ ಶಿವಣ್ಣ, “ಈ ಸಿನಿಮಾದಲ್ಲಿ ನಾನು 3 ಶೇಡ್‌ನ‌ಲ್ಲಿ ಕಾಣಿಸಿಕೊಳ್ತೀನಿ. ಕಥೆ ಮತ್ತು ಪಾತ್ರಕ್ಕೆ ತಕ್ಕಂತೆ ಸಿನಿಮಾದಲ್ಲಿ 3 ಲುಕ್‌ನಲ್ಲಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅದು ಎಲ್ಲರಿಗೂ ಖುಷಿ ಕೊಡಲಿದೆ ಅಂತ ಭಾವಿಸಿದ್ದೇನೆ. ಇದಕ್ಕಿಂತ ಹೆಚ್ಚಾಗಿ ಈಗಲೇ ನನ್ನ ಪಾತ್ರದ ಬಗ್ಗೆ ಹೆಚ್ಚೇನೂ ಮಾತನಾಡಲಾರೆ. ಆಡಿಯನ್ಸ್‌ ಥಿಯೇಟರ್‌ನಲ್ಲಿ ನೋಡುವಾಗಲೂ ಒಂದಷ್ಟು ಸಸ್ಪೆನ್ಸ್‌-ಥ್ರಿಲ್ಲಿಂಗ್‌ ಇರಲಿ’ ಎನ್ನುವುದು ಶಿವಣ್ಣ ಮಾತು.

ಈ ಚಿತ್ರವನ್ನು ಸಂದೇಶ್‌.ಎನ್‌.ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದೆ. ಶಿವರಾಜಕುರ್ಮಾ, ಅನುಪಮ್‌ ಖೇರ್‌, ಜಯರಾಂ, ಸತ್ಯಪ್ರಕಾಶ್‌, ಪ್ರಶಾಂತ್‌ ನಾರಾಯಣನ್‌, ದತ್ತಣ್ಣ, ಅಭಿಜಿತ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next