Advertisement
ನಿರುಪಂ ಆಕ್ರೋಶ:ರಾಜ್ಯಸಭೆಯ ಮಾಜಿ ಸಂಸದ ಸಂಜಯ್ ನಿರುಪಮ್, ಉದ್ಧವ್ ಬಣವು ಮುಂಬೈನ ಐದೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹೆಸರಿಸಿದೆ. ಈ ಮೂಲಕ ಮುಂಬೈನಲ್ಲಿ ಕಾಂಗ್ರೆಸ್ ಅನ್ನು ಮುಗಿಸುವ ಯೋಜನೆ ಇರುವಂತಿದೆ. ಕೂಡಲೇ ಕಾಂಗ್ರೆಸ್ ವರಿಷ್ಠರು ಮಧ್ಯ ಪ್ರವೇಶಿಸಿ ಮೈತ್ರಿ ಮರಿದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮುಂಬೈ ವಾಯವ್ಯ ಕ್ಷೇತ್ರದ ಅಭ್ಯರ್ಥಿಯನ್ನು ನಿಂದಿಸಿದ್ದೂ ವಿವಾದಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ್ ಆಘಾಡಿ(ವಿಬಿಎ) ಹೊರ ಬಂದಿದೆ. ಚುನಾವಣೆಯಲ್ಲಿ ವಿಬಿಎ ಏಕಾಂಗಿಯಾಗಿ ಸ್ಪರ್ಧಿಸಲಿದೆ. 8 ಕ್ಷೇತ್ರಗಳಿಗಾಗಿ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ ಎಂದು ಅವರು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ವಂಶಾಡಳಿತಕ್ಕಾಗಿ ವಂಚಿತ್ ಬಹುಜನ್ ಅಘಾಡಿಯನ್ನು ಗುರಾಣಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
Related Articles
Advertisement