Advertisement

ಶಿಂಧೆ ಬಣಕ್ಕೆ ಶಿವಸೇನೆ ಆಸ್ತಿ ವರ್ಗಾಹಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

07:03 PM Apr 28, 2023 | Team Udayavani |

ನವದೆಹಲಿ: ಉದ್ಧವ್ ಠಾಕ್ರೆ ಬಣ ಹೊಂದಿರುವ ಶಿವಸೇನೆ ಪಕ್ಷದ ಎಲ್ಲಾ ಆಸ್ತಿಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ವರ್ಗಾಯಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

Advertisement

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಅರ್ಜಿದಾರ ಆಶೀಷ್‌ ಗಿರಿ ಎಂಬ ವಕೀಲರ ಸ್ಥಾನವನ್ನು ಪ್ರಶ್ನಿಸಿ ಅವರ ಮನವಿಯನ್ನು ವಜಾಗೊಳಿಸಿದೆ. “ನೀವು ಯಾರು? ನಿಮ್ಮ ಸ್ಥಾನ ಏನು,” ಎಂದು ಪೀಠವು ಕೇಳಿತು.

ಉದ್ಧವ್‌ ಠಾಕ್ರೆ ಮತ್ತು ಶಿಂಧೆ ಬಣಗಳ ನಡುವಿನ ವೈಷಮ್ಯಕ್ಕೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳನ್ನು ಆಲಿಸಿದ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಆಶೀಷ್‌ ಗಿರಿ ಹೇಳಿದರು. ಪಕ್ಷದ ಆಸ್ತಿಯನ್ನು ಶಿಂದೆ ಬಣಕ್ಕೆ ಶಿವಸೇನೆ ಪಕ್ಷದ ಆಸ್ತಿಯನ್ನು ವರ್ಗಾಯಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ “ಇದು ಯಾವ ರೀತಿಯ ಅರ್ಜಿ ಮತ್ತು ಪಕ್ಷದಲ್ಲಿ ನೀವು ಏನು?ಈ ರೀತಿಯ ಅರ್ಜಿಯನ್ನು ಪುರಸ್ಕರಿಸಲಾಗುವುದಿಲ್ಲ” ಎಂದು ಪೀಠ ಹೇಳಿ ಅರ್ಜಿಯನ್ನು ವಜಾಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next