Advertisement

ನೋಟು ಅಮಾನ್ಯ: ಆರ್‌ಬಿಐ ಮತ್ವಾಲಾ ಬಂದರ್‌ ಎಂದ ಶಿವಸೇನೆ

03:28 PM Aug 31, 2018 | Team Udayavani |

ಮುಂಬಯಿ: ನೋಟು ಅಮಾನ್ಯ ಕುರಿತಾದ ಆರ್‌ಬಿಐ ವರದಿಯನ್ನು ಕಟುವಾಗಿ ಟೀಕಿಸಿರುವ ಶಿವಸೇನೆಯ ಮುಖವಾಣಿ ಸಾಮನಾ, “ನೋಟು ಅಮಾನ್ಯವು ಸರಕಾರದ ಒಂದು ಭಾರೀ ದೊಡ್ಡ  ಸೋಲಿನ ಕ್ರಮವಾಗಿದ್ದು ಆರ್‌ಬಿಐ ತಾನು ಬಯಸಿದ್ದನ್ನು ಮಾಡುವ ಮಂಗನಂತಾಗಿದೆ (ಮತ್ವಾಲಾ ಬಂದರ್‌)’  ಎಂದು ಹೇಳಿದೆ. 

Advertisement

ಆರ್‌ಬಿಐ ತನ್ನ 2017-18ರ ಸಾಲಿನ ವಾರ್ಷಿಕ ವರದಿಯಲ್ಲಿ  ಅಮಾನ್ಯಗೊಳಿಸಲಾದ 500 ಮತ್ತು 1,000 ರೂ. ನೋಟುಗಳ ಶೇ.99.3 ಪ್ರಮಾಣದ ನೋಟುಗಳು ಬ್ಯಾಂಕ್‌ ವ್ಯವಸ್ಥೆಗೆ ಮರಳಿ ಬಂದಿವೆ ಎಂದು ತಿಳಿಸಿತ್ತು. 

ನೋಟು ಅಮಾನ್ಯ ಕ್ರಮವನ್ನು ಭಾರೀ ದೊಡ್ಡ ಸೋಲೆಂದು ಟೀಕಿಸಿದ ಶಿವಸೇನೆ, ದೇಶದ ಆರ್ಥಿಕತೆಯ ಪಾಲಕನಾಗಿರುವ ಹೊರತಾಗಿಯೂ ಆರ್‌ಬಿಐ ನಿರ್ಧಾರಗಳು ಮಂಗನ ನಿರ್ಧಾರದಂತಾಗಿದೆ’ ಎಂದು ವ್ಯಂಗ್ಯವಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next