Advertisement

ಮಹಾಬಿಕ್ಕಟ್ಟು: ಸರ್ಕಾರ ರಚಿಸಲು ಮಹಾರಾಷ್ಟ್ರದಲ್ಲಿ ದುಷ್ಯಂತ್ ಇಲ್ಲ: ಸಂಜಯ್ ರಾವತ್

10:15 AM Oct 30, 2019 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಬಹುಮತವಿದ್ದರು ಸರ್ಕಾರ ರಚಿಸಿದೆ ಇರುವ ಬಿಜೆಪಿ –ಶಿವಸೇನೆ ಮೈತ್ರಿಕೂಟದಲ್ಲಿ ಪರೋಕ್ಷವಾಗಿ  ಅಸಮಾಧಾನ ಸ್ಪೋಟಗೊಂಡಿದೆ.  ಈಗಾಗಲೇ ಶಿವ ಸೇನಾ ಅಧಿಕಾರಕ್ಕೇರಲು 50-50 ಸೂತ್ರ ಅನುಸರಿಸಿದ್ದು ಆದರೇ ಬಿಜೆಪಿ ಈ ಸೂತ್ರವನ್ನು ಒಪ್ಪಿಕೊಳ್ಳಲು ತಯಾರಿರದಿರುವುದು ಪಕ್ಷದಲ್ಲೆ  ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಬಹುಮತವಿದ್ದರು ಸರ್ಕಾರ ರಚಿಸಿದೆ ಇರುವುದರ ಕುರಿತು ಪತ್ರಿಕಾಗೋಷ್ಟಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ  ಶಿವಸೇನಾ ಸಂಸದ ಸಂಜಯ್ ರಾವತ್, ಹರಿಯಾಣದ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಅವರನ್ನು ಉಲ್ಲೇಖಸಿ , ಈ ರಾಜ್ಯದಲ್ಲಿ ತಂದೆ ಜೈಲು ಪಾಲಾಗಿರುವ ಯಾವುದೇ ದುಷ್ಯಂತ್ ಇಲ್ಲ. ಇಲ್ಲಿ ಸತ್ಯ ಧರ್ಮದ ಆಧಾರದ ಮೇಲೆ ಮಾತ್ರ ರಾಜಕಾರಣ ಮಾಡುತ್ತೇವೆ. ಆದರೇ ನಮ್ಮ ಪಕ್ಷ ಅಧಿಕಾರಕ್ಕಾಗಿ ಆಸೆ ಪಡುತ್ತಿಲ್ಲ. ಎಂದು ಶರದ್ ಪವರ್ ಅವರನ್ನು ಕೂಡ  ಉಲ್ಲೇಖಿಸಿ ಮಾರ್ಮಿಕವಾಗಿ ಮಾತನಾಡಿದರು.

ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ ಅಧಿಕಾರಕ್ಕೇರಲು ಇತರ ಪಕ್ಷಗಳ ಬೆಂಬಲ ಪಡೆಯಬೇಕಿತ್ತು. ಆ ಹಿನ್ನಲೆ ಹರ್ಯಾಣದಲ್ಲಿ ಬಿಜೆಪಿ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ದುಷ್ಯಂತ್ ಚೌಟಾಲಾ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿತ್ತು.ಅವರ ತಂದೆ ರಾಜಕಾರಣಿ ಅಜಯ್ ಚೌಟಾಲ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿ ಎರಡು ವಾರಗಳ ಬೇಲ್ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next