Advertisement
ಅಗತ್ಯ ವಸ್ತುಗಳ ದರ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮತ್ತಿತರ ವಿಚಾರಗಳನ್ನೆತ್ತಿ ಬಿಜೆಪಿ ವಿರುದ್ಧ ಹರಿಹಾಯುವ ಮೂಲಕ ಶಿವಸೇನೆಯು ಇಂತಹುದೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ಜತೆಗೆ, “ಬಿಜೆಪಿ ಜತೆಗಿನ ಮೈತ್ರಿ ಮುಂದುವರಿ ಸುವುದೋ ಅಥವಾ ಬೆಂಬಲ ವಾಪಸ್ ಪಡೆಯುವುದೋ ಎಂಬ ಕುರಿತು ಸದ್ಯದಲ್ಲೇ ನಿರ್ಧರಿಸಲಾಗುವುದು,’ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಅವರೇ ಹೇಳಿಕೆ ನೀಡಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಬಿಕ್ಕಟ್ಟು ಆರಂಭವಾಗುವ ಮುನ್ಸೂಚನೆ ನೀಡಿದೆ.
Related Articles
ಈ ಕುರಿತು ತನ್ನ ಮುಖವಾಣಿ “ಸಾಮ್ನಾ’ದಲ್ಲಿ ಸಂಪಾದಕೀಯ ಬರೆದಿರುವ ಶಿವಸೇನೆ, “ಕೇಂದ್ರ ಸಂಪುಟದಲ್ಲಿರುವ ನವರತ್ನವು ಇದೀಗ ಪೆಟ್ರೋಲ್-ಡೀಸೆಲ್ ದರ ಏರಿಕೆಯನ್ನು ಸಮರ್ಥಿಸಿ ಕೊಳ್ಳುತ್ತಿದೆ. ಏಕೆಂದರೆ, ಅವರು ಎಂದಿಗೂ ಇಂಧನಕ್ಕೆ ತಮ್ಮ ಕಿಸೆಯಿಂದ ಹಣ ಖರ್ಚು ಮಾಡಿದ್ದೇ ಇಲ್ಲ. ಸಚಿವ ಆಲೊ#àನ್ಸ್ ಕಣ್ಣಂಥಾನನ್ ಅವರ ಹೇಳಿಕೆಯು ಬಡವರ ಮುಖಕ್ಕೆ ಉಗಿದಂತೆ. ಕಾಂಗ್ರೆಸ್ ಆಡಳಿತದಲ್ಲಿರುವಾಗಲೂ ಬಡವರಿಗೆ ಇಂತಹುದೊಂದು ಅವಮಾನ ಆದದ್ದಿಲ್ಲ,’ ಎಂದು ಹೇಳಿದೆ. ಜತೆಗೆ, “ಯೋಗ್ಯತೆ ಇಲ್ಲದವರು ಹಾಗೂ ಜನರೊಂದಿಗೆ ಸಂಪರ್ಕವೇ ಇಲ್ಲದವರು ಅಧಿಕಾರ ಹಿಡಿದರೆ ದೇಶದ ಗತಿ ಏನಾಗುತ್ತದೆ ಎನ್ನುವುದಕ್ಕೆ ಇಂದಿನ ಸ್ಥಿತಿಯೇ ಸಾಕ್ಷಿ’ ಎಂದು ಆರೋಪಿಸಿದೆ ಶಿವಸೇನೆ.
Advertisement
ಆತ್ಮಹತ್ಯೆಗೆ ಇಂಧನ ದರ ಏರಿಕೆ ಕಾರಣದೇಶಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಇಂಧನ ದರದಲ್ಲಾದ ಏರಿಕೆಯೂ ಕಾರಣ. ರೈತರು ನಿರಂತರ ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ, ಅವರು ಕೃಷಿಗೆ ಡೀಸೆಲ್ ಚಾಲಿತ ಜನರೇಟರ್ ಅವಲಂಬಿಸುವಂತಾಗಿದೆ. ಜತೆಗೆ, ತಮ್ಮ ಕೃಷಿ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗೆ ಒಯ್ಯಲೂ ದುಬಾರಿ ಸಾಗಣೆ ವೆಚ್ಚ ಭರಿಸಬೇಕಾಗುತ್ತದೆ. ಈ ಹೊರೆ ತಾಳಲಾರದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.