Advertisement

ಚೀನಾದ ಮೇಲೆ ಇನ್ನೂ ವಿಶ್ವಾಸ? ಕಳಪೆ ಕಿಟ್ಸ್ ಖರೀದಿಸಿದ್ಯಾಕೆ: ಕೇಂದ್ರಕ್ಕೆ ಶಿವಸೇನಾ ತರಾಟೆ

08:06 AM Apr 24, 2020 | Nagendra Trasi |

ಮುಂಬೈ:ಕೋವಿಡ್ 19 ವೈರಸ್ ಸೋಂಕಿತರನ್ನು ಪರೀಕ್ಷಿಸಲು ತುಂಬಾ ದುಬಾರಿ ಹಾಗೂ ಕಳಪೆ ದರ್ಜೆಯ ಟೆಸ್ಟಿಂಗ್ ಕಿಟ್ಸ್ ಗಳನ್ನು ಚೀನಾದಿಂದ ಕೇಂದ್ರ ಸರ್ಕಾರ ಖರೀದಿಸಿದ್ದೇಕೆ ಎಂದು ಶಿವಸೇನಾ ಆಕ್ಷೇಪ ವ್ಯಕ್ತಪಡಿಸಿದೆ.

Advertisement

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾದ ಮುಖವಾಣಿ ಸಾಮ್ನಾದ ಸಂದಾಪಕೀಯದಲ್ಲಿ, ಚೀನಾದಿಂದ ರಾಪಿಡ್ ಟೆಸ್ಟ್ ಕಿಟ್ಸ್ ಅನ್ನು ಕೇಂದ್ರ ಸರ್ಕಾರ ಖರೀದಿಸಿದ್ದನ್ನು ಪ್ರಶ್ನಿಸಿದೆ. ಕಳಪೆ ಗುಣಮಟ್ಟದ ಟೆಸ್ಟಿಂಗ್ ಕಿಟ್ಸ್ ಪಡೆಯಬೇಕಾದ ಅಗತ್ಯ ಏನಿತ್ತು ಎಂದು ಶಿವಸೇನಾ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರ ಚೀನಾದಿಂದ ಮೊದಲ ಹಂತದಲ್ಲಿ 20 ಲಕ್ಷದಷ್ಟು ರಾಪಿಡ್ ಟೆಸ್ಟಿಂಗ್ ಕಿಟ್ಸ್ ಅನ್ನು ಖರೀದಿಸಿದ್ದು ಇದು ದೋಷಪೂರಿತವಾಗಿದ್ದು ಇದರಿಂದ ಯಾವುದೇ ಉಪಯೋಗವಿಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಮೆಡಿಕಲ್ ಕಿಟ್ಸ್ ಮತ್ತು ಇತರ ಮೆಟಿರಿಯಲ್ಸ್ ಖರೀದಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸ್ಪಷ್ಟತೆ ನೀಡಬೇಕು ಎಂದು ಸಂಪಾದಕೀಯದಲ್ಲಿ ಸಲಹೆ ನೀಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಕೋವಿಡ್ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆದಿದ್ದಾರೆ. ಆದರೆ ಭಾರತ ಚೀನಾದ ಮೇಲೆ ವಿಶ್ವಾಸ ಇರಿಸಿ ಟೆಸ್ಟಿಂಗ್ ಕಿಟ್ಸ್ ಖರೀದಿಗೆ ಮುಂದಾಗಿದೆ ಎಂದು ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next