Advertisement

Modi: ಆದಿ ಕೈಲಾಸದಲ್ಲಿ ಶಿವಭಕ್ತ ಮೋದಿ- ಉತ್ತರಾಖಂಡದ ಪಿತೋರ್‌ಗಡಕ್ಕೆ ಪ್ರಧಾನಿ ಭೇಟಿ

09:30 PM Oct 12, 2023 | Pranav MS |

ಡೆಹ್ರಾಡೂನ್‌: ಮಹಾನ್‌ ಶಿವಭಕ್ತರಾದ ಪ್ರಧಾನಿ ನರೇಂದ್ರ ಮೋದಿ ಗುರುವಾರ ಉತ್ತರಾಖಂಡಕ್ಕೆ ಭೇಟಿ ನೀಡಿದ್ದು, ಶಿವನ ನಿವಾಸವೆಂದೇ ಪ್ರಸಿದ್ಧವಾದ ಹಿಮಚ್ಛಾದಿತ ಆದಿ ಕೈಲಾಸದ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಪಿತೋರ್‌ಗಡ ಜಿಲ್ಲೆಯ ಜೋಲಿಂಕಾಂಗ್‌ನ ಐಟಿಬಿಪಿ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಅವರನ್ನು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಮಿ ಸ್ವಾಗತಿಸಿದರು.

Advertisement

ಬಳಿಕ ಸ್ಥಳೀಯ ಬುಡಕಟ್ಟು ಸಾಂಪ್ರದಾಯಿಕ ದಿರಿಸಾದ ಬಿಳಿ ಬಣ್ಣದ ಪೇಟ ಮತ್ತು ಮೇಲುಡುಗೆಯನ್ನು ಧರಿಸಿ ಪವಿತ್ರ ಪಾರ್ವತಿ ಕುಂಡದ ಸಮೀಪವಿರುವ ಶಿವ-ಪಾರ್ವತಿಗೆ ಸಮರ್ಪಿತವಾದ ಪುರಾತನ ದೇಗುಲಕ್ಕೆ ಭೇಟಿ ನೀಡಿ, ಮೋದಿ ಆರತಿ ಬೆಳಗಿದ್ದಾರೆ. ಅಲ್ಲದೇ, ಆದಿ ಕೈಲಾಸದೆದುರು ಅಭಿಮುಖರಾಗಿ ಕೆಲಕಾಲ ಪ್ರಧಾನಿ ಧ್ಯಾನವನ್ನೂ ಮಾಡಿದ್ದಾರೆ.

ಬಳಿಕ ಗಡಿಗ್ರಾಮ ಗುಂಜಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಯನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಅದೇ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ವಸ್ತುಗಳ ಪ್ರದರ್ಶನಕ್ಕೂ ತೆರಳಿ, ಜನರ ಕರಕುಶಲತೆಯನ್ನು ಅಭಿನಂದಿಸಿ, ಹುರಿದುಂಬಿಸಿದ್ದಾರೆ. ಇದೇ ವೇಳೆ ಜಾಗೇಶ್ವರ ಧಾಮಕ್ಕೂ ತೆರಳಿ ಶಿವನ ದೇಗುಲ ದರ್ಶನ ಪಡೆದಿದ್ದಾರೆ.

ವಿವಿಧ ಯೋಜನೆಗೆ ಶಿಲಾನ್ಯಾಸ:
ಪಿತೋರ್‌ಗಡದಲ್ಲಿ ಪ್ರಧಾನಿ ಮೋದಿ 4,200 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ, ಬಳಿಕ ಎಸ್‌.ಎಸ್‌. ವಾಲ್ಡಿಯಾ ನ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯಲ್ಲೂ ಭಾಗಿಯಾಗಿದ್ದಾರೆ.

ಭಾರತದ ಧ್ವನಿ ಪ್ರಬಲವಾಗುತ್ತಿದೆ
ಸವಾಲುಗಳಿಂದ ತುಂಬಿಹೋಗಿರುವ ಜಗತ್ತಿನ ನಡುವೆಯೇ ಭಾರತದ ಧ್ವನಿ ಪ್ರಬಲವಾಗುತ್ತಿದೆ. ಜಿ-20 ಶೃಂಗದ ವೇಳೆ ದೇಶದ ಶಕ್ತಿ ಏನೆಂಬುದು ಜಗತ್ತಿಗೇ ಗೊತ್ತಾಗಿದೆ. ದೇಶದ ಹೆಮ್ಮೆಯ ಚಂದ್ರಯಾನ-3 ಯಶಸ್ವಿಯಾಗಿದೆ. ನಮ್ಮ ಸರ್ಕಾರ ಕಳೆದ 3-4 ದಶಕಗಳಿಂದ ಉಳಿದಿದ್ದ ಮಹಿಳಾ ಮೀಸಲಿನಂಥ ಸಮಸ್ಯೆಯನ್ನು ಬಗೆಹರಿಸಿದೆ. ಗಡಿಗ್ರಾಮಗಳನ್ನು ಆದ್ಯತೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next