Advertisement
ಉಡುಪಿ ಜಿ.ಪಂ. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ನಿರ್ಲಕ್ಷéದಿಂದಾಗಿ ಘನತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಕಸ ನಿರ್ವಹಣೆ ಹಾಗೂ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿತ್ತು. ಗ್ರಾ.ಪಂ. ಆಡಳಿತ ಸಮಸ್ಯೆ ನಿವಾರಣೆಗಾಗಿ ಕಸ ವಿಲೇವಾರಿ ಘಟಕದ ಕಟ್ಟಡ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಿದ್ದರೂ,ಕಟ್ಟಡ ಪೂರ್ತಿಗೊಳಿಸದೆ ಇಲಾಖೆ ಮೀನ ಮೇಷ ಎಣಿಸಿತ್ತು.
ಉಡುಪಿ ಜಿ.ಪಂ., ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ನನೆಗುದಿಗೆ ಬಿದ್ದ ಶಿರ್ವ ಗ್ರಾ. ಪಂ. ವ್ಯಾಪ್ತಿಯ ಮಟ್ಟಾರು ಡಂಪಿಂಗ್ ಯಾರ್ಡ್ ನಲ್ಲಿನ ಎಸ್‌ಎಲ್‌ಆರ್‌ಎಂ ಘಟಕದ ಕಟ್ಟಡ ಕಾಮಗಾರಿಯ ಬಗ್ಗೆ ಉದಯವಾಣಿ ಮಾ. 12ರಂದು ಸಚಿತ್ರ ವರದಿ ನೀಡಿತ್ತು. ವರದಿಗೆ ಸ್ಪಂದಿಸಿದ ಇಲಾಖೆ ಅರ್ಧ ದಲ್ಲಿಯೇ ನಿಂತಿದ್ದ ಕಾಮಗಾರಿ ಪ್ರಾರಂಭಿಸಲು ಮುಂದಾಗಿದ್ದರೂ ಲಾಕ್‌ಡೌನ್‌ನಿಂದಾಗಿ ವಿಳಂಬವಾಗಿತ್ತು. ಲಾಕ್‌ಡೌನ್ ತೆರವಾದ ಕೂಡಲೇ ಕಾಮಗಾರಿ ಪ್ರಾರಂಭಿಸಿ ಜಿ.ಪಂ. ಪಂಚಾಯತ್ ರಾಜ್‌ಎಂಜಿನಿಯರಿಂಗ್ ವಿಭಾಗ ಕಟ್ಟಡ ಪೂರ್ತಿಗೊಳಿಸಿದ್ದು, ಕಸ ಸಂಗ್ರಹಿಸಿ ಇಡಲು ಇದ್ದ ಜಾಗದ ಕೊರತೆ ನಿವಾರಣೆಯಾಗಿದೆ. ಸಾರ್ವಜನಿಕರ ಸಹಕಾರ ಅಗತ್ಯ
ಗ್ರಾ.ಪಂ.ವ್ಯಾಪ್ತಿಯಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಅಂಗಡಿ ಹಾಗೂ ವಾಣಿಜ್ಯ ಕೇಂದ್ರ ಗಳಿಂದ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಿ ಡಂಪಿಂಗ್ ಯಾರ್ಡ್‌ನಲ್ಲಿ ನಿರ್ವಹಣೆ ಮಾಡಲಾಗುತ್ತಿದೆ . ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು , ಗ್ರಾಮಸ್ಥರು ಹಸಿ ಮತ್ತು ಒಣ ಕಸವನ್ನು ಬೇರೆ ಬೇರೆಯಾಗಿ ನೀಡಬೇಕು.ನಾಗರಿಕರು ರಸ್ತೆ ಬದಿಯಲ್ಲಿ ಕಸ,ತ್ಯಾಜ್ಯ ಸುರಿಯದೆ ಗ್ರಾಮದ ಸ್ವತ್ಛತೆಯನ್ನು ಕಾಪಾಡುವಲ್ಲಿ ಪಂಚಾಯತ್‌ನೊಂದಿಗೆ ಸಹಕರಿಸಬೇಕು ಎಂದು ಶಿರ್ವ ಪಿಡಿಒ ಅನಂತ ಪದ್ಮನಾಭ ನಾಯಕ್ ತಿಳಿಸಿದ್ದಾರೆ.