Advertisement

ಶಿರ್ವ ಪಾಂಬೂರು : ಅರಣ್ಯಾಧಿಕಾರಿಗಳ ಬೋನಿಗೆ ಮತ್ತೊಂದು ಚಿರತೆ

11:09 AM Sep 20, 2018 | |

ಶಿರ್ವ: ಇಲ್ಲಿನ ಪಾಂಬೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆಯೊಂದು ಗುರುವಾರ ನಸುಕಿನ ವೇಳೆ ಬಿದ್ದಿದೆ. ಕಳೆದ ತಿಂಗಳು ಕೂಡಾ ಇದೇ ಪರಿಸರದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು.

Advertisement

ಕಳೆದೊಂದು ತಿಂಗಳಿಂದ ಪಾಂಬೂರು ಪರಿಸರದಲ್ಲಿ ಚಿರತೆ ಕಾಟದಿಂದ ಜನತೆ ಭಯಗೊಂಡಿದ್ದರು. ಒಂದು ಚಿರತೆ ಸೆರೆ ಹಿಡಿದರೂ ಮತ್ತೊಂದು ಚಿರತೆ ಕಾಣಿಸಿಕೊಂಡಿತ್ತು.  ಸ್ಥಳೀಯರಾದ ಮೋನಿಕಾ ಮಥಾಯಿಸ್ ಅವರ ಮನೆ ಬಳಿ ಬುಧವಾರ ರಾತ್ರಿ ಬೋನು ಇರಿಸಲಾಗಿತ್ತು. 

ಮಧ್ಯರಾತ್ರಿ 2  ಗಂಟೆಯ ವೇಳೆಗೆ 4 ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಮರಿಗಳೂ ಇನ್ನೂ ಕೂಡಾ ಪರಿಸರದದಲ್ಲೇ  ಓಡಾಡಿಕೊಂಡಿವೆ ಎಂದು ಪರಿಸರದವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ಗಣಪತಿ ನಾಯಕ್, ಜಯರಾಮ್ ಶೆಟ್ಟಿ, ಉಪವಲಯ ಅರಣ್ಯ ರಕ್ಷಕ ದಯಾನಂದ ಕೆ, ಅರಣ್ಯ ರಕ್ಷಕ ಅಶ್ವಿನ್ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next