ಶಿರ್ವ: ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಂಚಾಯತ್ ಅನುದಾನ ಏನೇನೂ ಸಾಲದಾಗಿದ್ದು, ದಾನಿಗಳ ಸಹಕಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ .ದಾನಿಗಳ ನೆರವಿನಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ನಡೆದು ಗ್ರಾಮವು ಅಭಿವೃದ್ಧಿ ಪಥದತ್ತ ಮುನ್ನಡೆಯಲಿ ಎಂದು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಹೇಳಿದರು.
ಅವರು ಅ.2 ರಂದು ಗಾಧೀ ನಮನ, ಹೈಮಾಸ್ಟ್ ದೀಪದ ದಾನಿಗಳಿಗೆ ಸಮ್ಮಾನ, ಬಟ್ಟೆ ಚೀಲ ವಿತರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮದ ಸಲುವಾಗಿ ಶಿರ್ವ ಗ್ರಾ.ಪಂ. ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿರ್ವ ಮುಖ್ಯ ರಸ್ತೆಯ ಶಾಮ್ಸ್‌ಸ್ವ್ಕೇರ್ ಬಳಿ ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಸಂತ ಮೇರಿ ಸರ್ಕಲ್ ಬಳಿ ದಿ| ಪೌಲ್ ಮೆನೇಜಸ್ ಮತ್ತು ದಿ| ಮಗ್ದಲಿನ್ ಮೆನೇಜಸ್‌ಸ್ಮರಣಾರ್ಥ ಪುತ್ರ ಮರ್ವಿನ್ ಮೆನೇಜಸ್ ಅವರು ಗ್ರಾ.ಪಂ.ಗೆ ಕೊಡುಗೆಯಾಗಿ ನೀಡಿದ ಹೈಮಾಸ್ಟ್ ದೀಪವನ್ನು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಉದ್ಘಾಟಿಸಿದರು. ಶಿರ್ವ ಸೊಸೈಟಿ ಬಳಿ ಬಸ್ಸು ತಂಗುದಾಣಕ್ಕೆ ಶಿಲಾನ್ಯಾಸ ಮತ್ತು ಬಂಟಕಲ್ಲು ದುರ್ಗಾನಗರದಲ್ಲಿ ಬಸ್ಸು ತಂಗುದಾಣದ ಉದ್ಘಾಟನೆ ನಡೆಯಿತು.
ಗ್ರಾ.ಪಂ. ಅಭಿವೃದ್ಧಿಯಲ್ಲಿ ಸಹಕರಿಸಿದ ದಾನಿಗಳಾದ ಅಟ್ಟಿಂಜೆ ಶಂಭು ಶೆಟ್ಟಿ ,ಮರ್ವಿನ್ ಮೆನೇಜಸ್ ಶಿರ್ವ ಮತ್ತು ಬಟ್ಟೆ ಚೀಲದ ಪ್ರಾಯೋಜಕ ಹರೀಶ್ ನಾಯಕ್ ಅವರನ್ನು ಶಿರ್ವ ಗ್ರಾ.ಪಂ. ವತಿಯಿಂದ ಸಮ್ಮಾನಿಸಲಾಯಿತು.
ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಕಾರ್ಯದರ್ಶಿ ಮಂಗಳಾಜೆ.ವಿ. ಗ್ರಾ.ಪಂ.ಲೆಕ್ಕ ಸಹಾಯಕಿ ಚಂದ್ರಮಣಿ ವೇದಿಕೆಯಲ್ಲಿದ್ದರು.ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು, ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ, ಅಶಾ ಕಾರ್ಯಕರ್ತೆಯರು,ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂ. ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ವಂದಿಸಿದರು.