Advertisement
ಶಿರ್ವ ಗ್ರಾ.ಪಂ.ನ ಮಂಚಕಲ್ ಪೇಟೆಯ ಮಧ್ಯದಲ್ಲಿ ಲೋಕೋಪಯೋಗಿ ಇಲಾಖೆಯ ಆತ್ರಾಡಿ-ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ. ಸಮುದಾಯ ಆರೋಗ್ಯ ಕೇಂದ್ರದ ಬಳಿಯಿಂದ ಪೆಟ್ರೋಲ್ ಪಂಪ್‌ನ ವರೆಗೆ 8.5 ಮೀ. ಅಗಲದ ರಸ್ತೆಯೊಂದಿಗೆ ಡಿವೈಡರ್ ಅಳವಡಿಸಿ ದ್ವಿಪಥ ರಸ್ತೆ ನಿರ್ಮಾಣಗೊಂಡಿದೆ.
ಮುಖ್ಯರಸ್ತೆ ವಿಸ್ತರಣೆಯಿಂದಾಗಿ ರಸ್ತೆ ನೇರವಾಗಿದ್ದು ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಾಗುತ್ತಿವೆ. ಮುಖ್ಯ ರಸ್ತೆಗೆ ಬರುವವರಿಗೆ ಡಿವೈಡರ್ ಅಪಾಯಕಾರಿಯಾಗಿ ಪರಿಣಮಿಸಿದೆ. ದ್ವಿಪಥ ರಸ್ತೆಯಾಗಿ ಪರಿವರ್ತನೆಗೊಂಡರೂ ಲೋಕೋಪಯೋಗಿ ಇಲಾಖೆ ರಸ್ತೆ ಕೂಡುವಲ್ಲಿ ಎಲ್ಲಿಯೂ ಸೂಚನಾ ಫಲಕಗಳನ್ನಾಗಲೀ, ರಿಫ್ಲೆಕ್ಟರ್ ಗಳನ್ನಾಗಲೀ ಅಳವಡಿಸಿಲ್ಲ. ಮಳೆಗಾಲದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳ್ಳದೆ ಕೆಲಸ ಸ್ಥಗಿತಗೊಂಡಿದ್ದು ಗುತ್ತಿಗೆದಾರರಿಗೆ ಹೇಳಿ ಕೂಡಲೇ ಸೂಚನಾ ಫಲಕ ಹಾಗೂ ರಿಫ್ಲೆಕ್ಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ¨ª ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಮಳೆಗಾಲ ಮುಗಿದು 3ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅವೈಜ್ಞಾನಿಕ ಡಿವೈಡರ್
ರಸ್ತೆ ವಿಸ್ತರಣೆಯ ವೇಳೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿಂದ ಶಿರ್ವಪೆಟ್ರೋಲ್ ಪಂಪ್‌ನವರೆಗೆ ಡಿವೈಡರ್ ಅಳವಡಿಸಲಾಗಿದ್ದು, ಡಿವೈಡರ್ ಪ್ರಾರಂಭವಾಗುವಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ. ರಾತ್ರಿ ವೇಳೆ ವಾಹನ ಸವಾರರು ಡಿವೈಡರ್ ಗಮನಿಸದೆ ಅಪಘಾತ ಸಂಭವಿಸುತ್ತಿದೆ. ಅವೈಜ್ಞಾನಿಕ ಡಿವೈಡರ್‌ನಿಂದಾಗಿ ಕುತ್ಯಾರು ಮತ್ತು ಕಾಪು ಕಡೆಯಿಂದ ಬರುವ ಮತ್ತು ಹೋಗುವ ವಾಹನಗಳು ಮುಖ್ಯ ರಸ್ತೆ ಸೇರುವಲ್ಲಿ ಸಮಸ್ಯೆಯಾಗಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಳಿ ಮಂಗಳವಾರ ಮುಂಜಾನೆ ಡಿವೈಡರ್ ಗಮನಿಸದೆ ಲಾರಿ ಡಿವೈಡರ್ ಮೇಲೇರಿದ್ದು ಪಲ್ಟಿಯಾಗುವುದು ಸ್ವಲ್ಪದರಲ್ಲೇ ತಪ್ಪಿಹೋಗಿದೆ.
Related Articles
Advertisement
ಡಿವೈಡರ್‌ಗೆ ಯಾವುದೇ ಸೂಚನಾ ಫಲಕ, ರೆಫ್ಲೆಕ್ಟರ್ ಅಳವಡಿಸದಿರುವುದರಿಂದ ರಾತ್ರಿ ವೇಳೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಬಸ್ ಸ್ಟಾಂಡ್‌ಬಳಿಯ ಡಿವೈಡರ್‌ಗೆ ವಾಹನಗಳು ಢಿಕ್ಕಿ ಹೊಡೆದ ಹಲವು ಘಟನೆ ನಡೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.ಕೆ. ಗಣೇಶ್ ಕಾಮತ್, ಸ್ಥಳೀಯ
ನಿವಾಸಿ ತಾಂತ್ರಿಕ ತೊಂದರೆಯಿಂದಾಗಿ ರಸ್ತೆ ವಿಸ್ತರಣೆ ಕಾಮಗಾರಿಯ ಬಿಲ್‌ಪೂರ್ತಿ ಪಾವತಿಯಾಗಿಲ್ಲ. ಗುತ್ತಿಗೆದಾರರ ಮನವೊಲಿಸಿ ಕೂಡಲೇ ಸೂಚನಾ ಫಲಕ ಹಾಗೂ ರಿಫ್ಲೆಕ್ಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
ಜಗದೀಶ್ ಭಟ್, ಸಹಾಯಕ
ಕಾರ್ಯಕಾರಿ ಅಭಿಯಂತರು,
ಲೊಕೋಪಯೋಗಿ ಇಲಾಖೆ.ಉಡುಪಿ ಸತೀಶ್ಚಂದ್ರ ಶೆಟ್ಟಿ , ಶಿರ್ವ