Advertisement

Shirva Church: ವಾರ್ಷಿಕ ಉತ್ಸವಕ್ಕೆ ಚಾಲನೆ

11:20 PM Jan 30, 2024 | Team Udayavani |

ಶಿರ್ವ: ಇಲ್ಲಿನ ಆರೋಗ್ಯ ಮಾತಾ (ಸಾವುದ್‌ ಅಮ್ಮನವರ) ದೇವಾಲಯದ ವಾರ್ಷಿಕ ಮಹೋತ್ಸವವು ದೇವರ ವಾಕ್ಯದ ಸಂಭ್ರಮದೊಂದಿಗೆ ಮಂಗಳವಾರ ಆರಂಭಗೊಂಡಿತು.

Advertisement

ಮಂಗಳೂರು ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂ| ನೆಲ್ಸನ್‌ ಪೆರಿಸ್‌ ಅವರು ದೇವರ ವಾಕ್ಯದ ಧ್ಯಾನ-ಚರಲ್‌ ಆಶೀರ್ವಾದದೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತೆ ಮೇರಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಚರ್ಚಿಗೆ ತರಲಾಯಿತು.

ಜ. 31ರಂದು ಬೆಳಗ್ಗೆ 10.15ಕ್ಕೆ ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ನೇತೃತ್ವದಲ್ಲಿ ವಾರ್ಷಿಕ ಮಹೋತ್ಸವ ಪವಿತ್ರ ಬಲಿಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ.

ಹಬ್ಬದ ಸಂದರ್ಭದಲ್ಲಿ ಸರ್ವ ಧರ್ಮದ ಭಕ್ತರಿಗೆ ಆರೋಗ್ಯ ಮಾತೆಯ ಆಶೀರ್ವಾದ ಪಡೆಯಲು ಹರಕೆ ಸಲ್ಲಿಸಲು ಹಾಗೂ ಮೋಂಬತ್ತಿ ಉರಿಸಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಸರ್ವ ಧರ್ಮದ ಸಾವಿರಾರು ಭಕ್ತರು ಆಗಮಿಸಿ ಆರೋಗ್ಯ ಮಾತೆಯ ದರ್ಶನ ಪಡೆದು ಸಂಕಷ್ಟ ನಿವಾರಣೆಗಾಗಿ ಮೋಂಬತ್ತಿ ಉರಿಸಿ ಹರಕೆ ಸಲ್ಲಿಸಿ ತೀರ್ಥ, ಎಣ್ಣೆ ಪ್ರಸಾದ ಪಡೆದರು.

ಉಡುಪಿ ಡಯಾಸಿಸ್‌ನ ಚಾನ್ಸ್‌ಲರ್‌ ವಂ| ಡಾ| ರೋಷನ್‌ ಡಿ’ಸೋಜಾ, ಮಂಗಳೂರು ಡಯಾಸಿಸ್‌ನ ಚಾನ್ಸ್‌ಲರ್‌ ವಂ| ವಿಕ್ಟರ್‌ ಜಾರ್ಜ್‌ ಡಿ’ಸೋಜಾ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ| ಚಾರ್ಲ್ಸ್‌ ಮೆನೇಜಸ್‌, ಕಾರ್ಕಳ ವಲಯದ ಪ್ರಧಾನ ಧರ್ಮಗುರು ವಂ| ಪೌಲ್‌ ರೇಗೋ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ| ಆಂಟನಿ ಪ್ರಕಾಶ್‌ ಮೊಂತೆರೋ, ಕೆನಡಾದ ಮಾಜಿ ಪ್ರೊವಿನ್ಶಿಯಲ್‌ ವಂ| ಹೆನ್ರಿ ಆಳ್ವ, ಐಸಿವೈಎಂ ರಾಷ್ಟ್ರೀಯ ನಿರ್ದೇಶಕ ವಂ| ಚೇತನ್‌ ಮಚಾದೋ, ಶಿರ್ವ ವಲಯದ ಪ್ರಧಾನ ಧರ್ಮಗುರು ವಂ|ಡಾ| ಲೆಸ್ಲಿ ಡಿ’ಸೋಜಾ, ಸಹಾಯಕ ಧರ್ಮಗುರುಗಳಾದ ವಂ| ರೋಲ್ವಿನ್‌ ಅರಾನ್ಹಾ , ವಂ| ರೋನ್ಸನ್‌ ಪಿಂಟೊ, ವಂ| ಜೇಸನ್‌ ಲೋಬೋ, ಚರ್ಚ್‌ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್‌ ಅರಾನ್ಹಾ, ಕಾರ್ಯದರ್ಶಿ ಫ್ಲೆàವಿ ಡಿ’ಸೋಜಾ ಮತ್ತು ಚರ್ಚ್‌ ಆಯೋಗದ ಸಂಯೋಜಕಿ ಲೀನಾ ಮಚಾದೋ, ಚರ್ಚ್‌ ಆರ್ಥಿಕ ಮತ್ತು ಪಾಲನ ಮಂಡಳಿಯ ಸದಸ್ಯರು, ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತದ ಧರ್ಮಗುರುಗಳು ಹಾಗೂ ಶಿರ್ವ ವಲಯದ ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next