Advertisement

Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್‌

04:01 PM Oct 02, 2024 | Team Udayavani |

ಶಿರ್ವ: ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ವೃದ್ಧಿಯಾಗಿ ಜೀವನಶೈಲಿ ಬದಲಾಗುವುದಲ್ಲದೆ ಇನ್ನೊಬ್ಬರ ಜೀವವನ್ನು ಉಳಿಸಿದಂತಾಗುತ್ತದೆ. ತುರ್ತು ಸಂದರ್ಭದಲ್ಲಿ ರಕ್ತ ನೀಡಲು ನಾಗರಿಕರಿಗೆ ರಕ್ತದಾನ ಶಿಬಿರಗಳು ಪ್ರೇರಣೆಯಾಗಿ ಜೀವ ಉಳಿಸುವ ಕಾರ್ಯ ನಡೆಯಲಿ ಎಂದು ಕಾಪು ತಹಶೀಲ್ದಾರ್‌ ಡಾ| ಪ್ರತಿಭಾ ಆರ್‌.ಹೇಳಿದರು.

Advertisement

ಅವರು ಅ. 2 ರಂದು ಬಂಟಕಲ್ಲು ರೋಟರಿ ಭವನದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಆಶ್ರಯದಲ್ಲಿ ಅಭಯಹಸ್ತ ಚಾರಿಟೇಬಲ್‌ ಟ್ರಸ್ಟ್‌ ಉಡುಪಿ ಹಾಗೂ ಪರಿಸರದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ತಂಡದ ಸಹಕಾರದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ನಡೆದ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಂಬ್ಯುಲೆನ್ಸ್‌ನಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರೇಂದ್ರ ಪಾಟ್ಕರ್‌ ಕೋಡುಗುಡ್ಡೆ, ಹರೀಶ್‌ ಹೇರೂರು, ವಿನ್ಸೆಂಟ್‌ ಪಲ್ಕೆ, ಮತ್ತು ಉಮೇಶ ರಾವ್‌ ಅವರನ್ನು ಹಾಗೂ 40ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಧೀರಜ್‌, ಉಮೇಶ್‌ ಪ್ರಭು ಪಾಲಮೆ ಮತ್ತು ಅನಿತಾ ಮೆಂಡೋನ್ಸಾ ಅವರನ್ನು ಸಮ್ಮಾನಿಸಲಾಯಿತು.

ಪಾಂಬೂರು ಹೋಲಿ ಕ್ರಾಸ್‌ ಚರ್ಚ್‌ನ ಪ್ರಧಾನ ಧರ್ಮಗುರು ರೆ|ಫಾ|ಹೆನ್ರಿ ಮಸ್ಕರೇನಸ್‌, ಬಂಟಕಲ್ಲು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ|ತಿರುಮಲೇಶ್ವರ ಭಟ್‌, ಶಿರ್ವ ಗ್ರಾ.ಪಂ. ಪಿಡಿಒ ಅನಂತ ಪದ್ಮನಾಭ ನಾಯಕ್‌, ಉಡುಪಿ ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿಯ ಡಾ| ಗಣನಾಥ ಎಕ್ಕಾರು,ಲಯನ್ಸ್‌ ನಿಯೋಜಿತ ಜಿಲ್ಲಾ ಗವರ್ನರ್‌ ಸಪ್ನಾ ಸುರೇಶ್‌, ಅಭಯಹಸ್ತ ಚಾರಿಟೇಬಲ್‌ ಟ್ರಸ್ಟ್‌ ಗೌರವ ಸಲಹೆಗಾರ, ರಕ್ತದಾನಿ ದೇವದಾಸ ಪಾಟ್ಕರ್‌ ಮುದರಂಗಡಿ ರಕ್ತದಾನಿಗಳಿಗೆ ಪ್ರಮಾಣಪತ್ರದೊಂದಿಗೆ ಕಿಟ್‌ ವಿತರಿಸಿ ಮಾತನಾಡಿದರು.

Advertisement

ಉಡುಪಿ ಅಭಯಹಸ್ತ ಚಾರಿಟೇಬಲ್‌ ಟ್ರಸ್ಟ್‌ ನ ಅಧ್ಯಕ್ಷ ಸತೀಶ್‌ ಸಾಲಿಯಾನ್‌, ಶಿರ್ವರೋಟರಿ ಕ್ಲಬ್‌ ಅಧ್ಯಕ್ಷ ಅಮಿತ್‌ ಅರಾನ್ಹಾ, ಬಂಟಕಲ್ಲು ರಾಜಾಪುರ ಸಾರಸ್ವತ ಯುವವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್‌, ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಯ ಉಪಾಧ್ಯಕ್ಷ ಹರೀಶ್‌ ಹೇರೂರು,ಬಂಟಕಲ್ಲು ಲಯನ್ಸ್‌ ಕ್ಲಬ್‌ ಜಾಸ್ಮಿನ್‌ ಅಧ್ಯಕ್ಷೆ ಅನಿತಾ ಮೆಂಡೋನ್ಸಾ, ಲಯನ್ಸ್‌ ಕ್ಲಬ್‌ ಬಂಟಕಲ್ಲು-ಬಿ.ಸಿ.ರೋಡ್‌ ನ ಮಾರ್ಕ್‌ ಟೋನಿ, ಬಂಟಕಲ್ಲು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿ, ಉಡುಪಿ ಜಿಲ್ಲಾ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ಬಂಟಕಲ್ಲು ಘಟಕದ ಅಧ್ಯಕ್ಷ ಉಮೇಶ್‌ ರಾವ್‌, ಬಂಟಕಲ್ಲು ಬಿ.ಸಿ ರೋಡ್‌ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸದಾಶಿವ ಕುಲಾಲ್‌, ಪಾಂಬೂರು ಚರ್ಚ್‌ನ ಸ್ವಾಸ್ಥ್ಯ ಆಯೋಗದ ನಿರ್ದೇಶಕಿ ಪ್ರಸಿಲ್ಲಾ ನೊರೋನ್ಹಾ, ಸೀ ಸಂಘಟನೆಯ ಎವುಜಿನ್‌ ಡಿಸೋಜಾ, ಪರ್ಕಳ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಶಶಿಧರ ಶೆಟ್ಟಿ ವೇದಿಕೆಯಲ್ಲಿದ್ದರು.

ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ, ಶಿರ್ವ ಗ್ರಾ. ಪಂ.ಅಧ್ಯಕ್ಷೆ ಸವಿತಾ ರಾಜೇಶ್‌, ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಶಶಿಧರ ವಾಗ್ಲೆ, ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ತಂಡದ ಸದಸ್ಯರು, ಉಡುಪಿ ತನಿಷ್‌ ಸಂಸ್ಥೆಯ ಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ರಕ್ತದಾನಿಗಳು ಉಪಸ್ಥಿತರಿದ್ದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿ ಡಾ|ಅಕ್ಷಯ್‌ ಚೋಪ್ರಾ ಅವರ ಮಾರ್ಗದರ್ಶನದಲ್ಲಿ 110 ದಾನಿಗಳು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಪ್ರಮಾಣಪತ್ರದೊಂದಿಗೆ ಫೋಟೋ ತೆಗೆಸಿಕೊಳ್ಳಲು ಸೆಲ್ಫಿ ಕಾರ್ನರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಬಂಟಕಲ್ಲು ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಪ್ರಸ್ತಾವನೆಯೊಂದಿಗೆ  ಸ್ವಾಗತಿಸಿದರು. ವೈಲೆಟ್‌ ಕ್ಯಾಸ್ತಲಿನೋ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next