Advertisement

Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು

09:04 PM Jul 25, 2024 | Team Udayavani |

ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭಂದಿಸಿದಂತೆ ಮಣ್ಣಿನ ಅಡಿ ಇದ್ದ ಲಕ್ಷ್ಮಣ್ ನಾಯ್ಕ ಹೋಟೆಲ್ ಅವಶೇಷಗಳು ಪತ್ತೆಯಾಗಿದೆ. ಪೋಕ್ ಲೈನ್ ಮೂಲಕ ಮಣ್ಣನ್ನ ತೆಗೆಯುವ ವೇಳೆ ಪತ್ತೆಯಾಗಿದ್ದು ನಾಪತ್ತೆಯಾಗಿರುವ ಮೂವರ ದೇಹಗಳ ಅಲ್ಲೇ ಇರಬಹುದು ಎಂದು ಅಂದಾಜಿಸಲಾಗಿದೆ.

Advertisement

ಜುಲೈ 16 ರಂದು ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಅಗಲೀಕರಣದಿಂದ ಗುಡ್ಡ ಕುಸಿದು ಲಕ್ಷ್ಮಣ್ ನಾಯ್ಕ ಎಂಬಾತನ ಅಂಗಡಿ ಮೇಲೆ ಬಿದ್ದಿತ್ತು. ಹೆದ್ದಾರಿ ಪಕ್ಕದಲ್ಲೇ ಅಂಗಡಿ ಇದ್ದಿದ್ದರಿಂದ ಟೀ ಕುಡಿಯಲು ಬರುತ್ತಿದ್ದ ಲಾರಿ ಚಾಲಕರು ಈ ಘಟನೆಯಲ್ಲಿ ನಾಪತ್ತೆಯಾಗಿದ್ದರು.

ಘಟನೆಯಲ್ಲಿ ಈ ವರೆಗೆ ಹೋಟೆಲ್ ನಲ್ಲಿದ್ದ ಮಾಲಿಕ ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಗ ರೋಷನ್, ಮಗಳು ಅವಂತಿಕಾ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೇ ಲಾರಿ ಚಾಲಕರಾದ ಶರವಣ, ಚಿನ್ನನ್, ಮುರುಗನ್ ಹಾಗೂ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡರ ಶವ ಸಹ ಪತ್ತೆಯಾಗಿದೆ.

ಇದನ್ನೂ ಓದಿ: Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್‌ ನಂಬಿಯಾರ್

ಇನ್ನು ಘಟನೆಯಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಲಕ್ಷ್ಮಣ್ ನಾಯ್ಕ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಜಗನ್ನಾಥ್ ಹಾಗೂ ಅಂಗಡಿಗೆ ಬಂದಿದ್ದ ಲೊಕೇಶ್ ನಾಯ್ಕ ನಾಪತ್ತೆಯಾಗಿದ್ದು ಅವರ ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

Advertisement

ಗುರುವಾರ ಸಹ ಲಕ್ಷ್ಮಣ್ ನಾಯ್ಕ ಅಂಗಡಿ ಹಿಂದೆ ಇದ್ದ ಮಣ್ಣನ್ನ ತೆರವು ಮಾಡುವ ಕಾರ್ಯಾಚರಣೆ ಮಾಡಲಾಯಿತು. ಈ ವೇಳೆ ಅಂಗಡಿಯಲ್ಲಿ ಬಳಸುತ್ತಿದ್ದ ಬಕೆಟ್, ಆಲದ ಮರ, ಬಾಳೆ ಗಿಡ, ಅಂಗಡಿಯ ಪೌಂಡೇಷನ್ ಗಳು ಪತ್ತೆಯಾಗಿದೆ. ರಾತ್ರಿ ಪೂರ್ಣ ಮಣ್ಣನ್ನ ತೆಗೆಯುವ ಮೂಲಕ ಉಳಿದ ಮೂವರ ದೇಹ ಅಲ್ಲೇ ಇರಬಹುದು ಎಂದು ಕಾರ್ಯಾಚರಣೆ ನಡೆಸಲಾಗಿದೆ.

ಶಾಸಕರ ಸಲಹೆಯಂತೆ ಕಾರ್ಯಾಚರಣೆ
ಕಳೆದ ಹತ್ತು ದಿನಗಳಿಂದ ಕಾರ್ಯಚರಣೆಯಲ್ಲಿ ಮೊಕ್ಕಾಂ ಹೂಡಿರುವ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅಂಗಡಿ ಮಣ್ಣು ಬಿದ್ದಂತಹ ಸಂದರ್ಭದಲ್ಲಿ ಕೆಳಗೆ ಬಿದ್ದಿರಬಹುದು. ನದಿಯಲ್ಲಿ ಯಾವುದೇ ಕಾರಣಕ್ಕೂ ಕೊಚ್ಚಿ ಹೋಗಿರುವುದಿಲ್ಲ. ಗಿಡಮರಗಳು ಕೊಚ್ಚಿಹೋಗಿದ್ದನ್ನ ಗಮನಿಸಿಲ್ಲ. ಈ ನಿಟ್ಟಿನಲ್ಲಿ ಸ್ಥಳವೊಂದನ್ನ ತೋರಿಸಿ ಕಾರ್ಯಾಚರಣೆ ಮಾಡುವಂತೆ ಸಿಬ್ಬಂದಿಗಳಿಗೆ ತಿಳಿಸಿದ್ದರು.

ಈ ನಿಟ್ಟಿನಲ್ಲಿ ಪೋಕ್ ಲೈನ್ ಮೂಲಕ ಕಾರ್ಯಾಚರಣೆ ಮಾಡುವ ವೇಳೆಯಲ್ಲಿ ಹೋಟೆಲ್ ಪೌಂಡೇಷನ್, ಚೀರಿಕಲ್ಲುಗಳು, ಬಕೆಟ್ ಸೇರಿದಂತೆ ಹಲವು ವಸ್ತು ಪತ್ತೆಯಾಗಿದೆ.

ಇನ್ನು ಕಾರ್ಯಾಚರಣೆ ನಿಲ್ಲಿಸದಂತೆ ಮಾಡಬೇಕು. ಒಂದೆರಡು ದಿನದಲ್ಲಿಯೇ ಎಲ್ಲಾ ಕಾರ್ಯಾಚರಣೆ ಮಾಡಿ ಸ್ಪಷ್ಟ ಚಿತ್ರಣ ಕೊಡಬೇಕು ಎಂದು ಸೈಲ್ ಸಿಬ್ಬಂದಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next