Advertisement
ಒಂದು ಬದಿ ಹೆದ್ದಾರಿಯ ಮಣ್ಣು ತೆರವು ಪೂರ್ಣಗೊಂಡರು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ರಸ್ತೆಯಲ್ಲಿ ಬಿದ್ದಿರುವ ಸಂಪೂರ್ಣ ಮಣ್ಣು ತೆರವಾದ ಮೇಲೆಯೇ ತಜ್ಞರಿಂದ ಪರಿಶೀಲಿಸಿ ವಾಹನ ಸಂಚಾರ ಆರಂಭಿಸಲಾಗುವುದೆಂದು ಹೇಳಲಾಗುತ್ತಿದೆ.
ಗುಡ್ಡ ಕುಸಿತ ಪ್ರದೇಶದ ಮಣ್ಣಿನ ಅಡಿಯಲ್ಲಿ ಬೆಂಜ್ ಲಾರಿ ಮತ್ತು ಚಾಲಕ ಸಿಲುಕಿರುವ ಮಾಹಿತಿ ಆಧರಿಸಿ, ಈ ಬಗ್ಗೆ ಜಿಲ್ಲಾ ಬಾಂಬ್ ನಿಷ್ಕ್ರಿಯದಳ, ಮೆಟಲ್ ಡಿಟೆಕ್ಟರ್ ಮೂಲಕ ಶುಕ್ರವಾರ ತಪಾಸಣೆ ಕೈಗೊಂಡಿದ್ದಾರೆ. ಜೊತೆಗೆ ಗಂಗಾವಳಿ ನದಿಯಲ್ಲಿ ಕಣ್ಮರೆಯಾದವರ ಶೋಧ ಕಾರ್ಯ ನೌಕಾನೆಲೆ , ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಿಂದ ನಿರಂತರ ನಡೆದಿದೆ.