Advertisement

Shiruru hill collapse; ನೆರವು ನೀಡಲು ತೆರಳಿದ್ದ ವ್ಯಕ್ತಿ ನಾಪತ್ತೆ: ಹಲವು ಸಂಶಯ

07:09 PM Jul 20, 2024 | Team Udayavani |

ಕುಮಟಾ: ಶಿರೂರು ಭೂ ಕುಸಿತದಲ್ಲಿ ನೆರವು ನೀಡಲು ತೆರಳಿದ್ದ ತಾಲೂಕಿನ ಬಾಡದ ವ್ಯಕ್ತಿಯೋರ್ವರು ನಾಪತ್ತೆ ಆಗಿರುವುದಾಗಿ ತಿಳಿದು ಬಂದಿದ್ದು, ಹಲವು ಸಂಶಯ ವ್ಯಕ್ತವಾಗುತ್ತಿದೆ.

Advertisement

ಅಂಕೋಲಾ ತಾಲೂಕಿನ ಶಿರೂರು ಭೂ ಕುಸಿತದಲ್ಲಿ ತಾಲೂಕಿನ ಬಾಡ ಹುಬ್ಬಣಗೆರೆಯ ಮೂಲದ ಜಗನ್ನಾಥ ನಾಯ್ಕ (61) ಎನ್ನುವವರು ಸಿಲುಕಿರಬಹುದೆಂದು ಸಂಶಯ ವ್ಯಕ್ತವಾಗಿದೆ.ಬಾಬ್ಲುಮನೆಯ ಜಗನ್ನಾಥ ನಾಯ್ಕ ಶಿರೂರಿನಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಅವರ ಬಾವ.ಲಕ್ಷ್ಮಣ ನಾಯ್ಕ ಅವರ ಅಕ್ಕನನ್ನು ಮದುವೆಯಾಗಿರುವ ಜಗನ್ನಾಥ ಶಿರೂರಿನಲ್ಲಿಯೇ ಮನೆ ನಿರ್ಮಿಸಿಕೊಂಡಿದ್ದರು.ಭೂ ಕುಸಿತದ ದಿನ ಬೆಳಗ್ಗೆ ಬಾವನನ್ನು ಮಾತನಾಡಿಸಿಕೊಂಡು ಬರಲು ಚಹಾದ ಅಂಗಡಿಗೆ ತೆರಳಿದ್ದರು ಎನ್ನಲಾಗಿದೆ.ಬಾವನಿಗೆ ಜ್ವರ ಬಂದಿದೆ, ಸ್ವಲ್ಪ ಸಹಾಯ ಮಾಡಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಜಗನ್ನಾಥ ಮನೆಗೆ ಮರಳಿ ಬಂದಿಲ್ಲ.ಇದರಿಂದ ಅವರ ಪತ್ನಿ ಹಾಗೂ ಮೂರು ಜನ ಹೆಣ್ಣು ಮಕ್ಕಳು ಆತಂಕಕ್ಕೊಳಗಾಗಿದ್ದು ಸುತ್ತಮುತ್ತಲು ವಿಚಾರಿದ್ದಾರೆ.ಆದರೆ ಈ ಬಗ್ಗೆ ಮಾಹಿತಿ ದೊರಕಿಲ್ಲ.ಹೀಗಾಗಿ ಕುಟುಂಬದವರು ಜಗನ್ನಾಥರ ಫೋಟೋ ಹಿಡಿದು ಅವರಿವರ ಬಳಿ ವಿಚಾರಿಸುತ್ತಿದ್ದಾರೆ.

ಇದೇ ವೇಳೆ ಶಿರೂರು ಗುಡ್ಡ ಕುಸಿತದ ಘಟನೆ ನಡೆದಿರುವುದರಿಂದ ಅಂಗಡಿಗೆ ತೆರಳಿದ್ದ ಜಗನ್ನಾಥ ನಾಯ್ಕ ಕೂಡ ಕಣ್ಮೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಎಲ್ಲಿದ್ದರೂ ಹೇಗಿದ್ದರೂ ಜೀವಂತವಾಗಿ ಮರಳಲಿ ಎಂದು ಕುಟುಂಬದವರು ಕಣ್ಣೀರು ಹಾಕುತ್ತಾ ದೇವರಲ್ಲಿ ಮೊರೆ ಇಡುತ್ತಿದ್ದಾರೆ.

ಈತನಕ ಏಳು ಜನರ ಮೃತದೇಹಗಳು ಪತ್ತೆಯಾಗಿವೆ. ಚಹಾ ಅಂಗಡಿ ಮಾಲಕ ಲಕ್ಷ್ಮಣ ಬೊಮ್ಮಯ್ಯ ನಾಯ್ಕ (47), ಅವರ ಪತ್ನಿ ಶಾಂತಿ ಲಕ್ಷ್ಮಣ ನಾಯ್ಕ (36), ಮಕ್ಕಳಾದ ರೋಶನ್‌ (11), ಅವಂತಿಕಾ (6) ಅವರ ಶವಗಳು ಪತ್ತೆಯಾಗಿವೆ. ಇನ್ನೂ ಮೂವರು ಕಾಣೆಯಾಗಿದ್ದು, ಅವರಿಗೆ ಹುಡುಕಾಟ ನಡೆದಿದೆ ಎಂದು ಡಿಸಿ ಲಕ್ಷ್ಮಿ ಪ್ರಿಯಾ ಹೇಳಿದ್ದಾರೆ. ಮಣ್ಣಿನಡಿ ಟಿಂಬರ್‌ ಸಾಗಿಸುವ ಒಂದು ಟ್ರಕ್‌ ಇದ್ದು, ಚಾಲಕ ಕೇರಳದವರು ಎಂಬ ಮಾಹಿತಿ ಇದೆ. ಟಿಂಬರ್‌ ಟ್ರಕ್‌ನಲ್ಲಿದ್ದ ಚಾಲಕ, ಉಳುವರೆ ಗ್ರಾಮದ ಸಣ್ಣಿಗೌಡ, ಜಗನ್ನಾಥ, ಟೀ ಸ್ಟಾಲ್‌ ಪಕ್ಕದ ಉಪೇಂದ್ರ ಎಂಬುವವರಿಗೆ ಹುಡುಕಾಟ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next