ಕಾರವಾರ : ಕಳೆದ ಹತ್ತು ದಿನಗಳಿಂದ ಶಿರೂರುನಲ್ಲಿದ್ದು ಮಣ್ಣು ತೆಗೆಸುವ ಹಾಗೂ ಕಾಣೆಯಾದವರ ಹುಡುಕುವ ಕೆಲಸದಲ್ಲಿ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಸದನದ ಕಲಾಪ ಬಿಟ್ಟು ಇಲ್ಲೇ ನಿಂತಿದ್ದೇನೆ. ಆದರೂ ನಾನು ಕೆಲಸ ಮಾಡಿಲ್ಲ ಎಂದು ದೆಹಲಿಗೆ ದೂರು ನೀಡಲಾಗಿದೆ ಎಂದು ಶಾಸಕ ಸತೀಶ್ ಸೈಲ್ ಬೇಸರ ವ್ಯಕ್ತಪಡಿಸಿದರು.
ಶಿರೂರು ಸನಿಹ ಗುರುವಾರ ಸಂಜೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶಿರೂರಿಗೆ ಎಷ್ಟೆಲ್ಲಾ ಆಧುನಿಕ ತಂತ್ರಜ್ಞಾನ ಬಳಸಿ ಕೆಲಸ ಮಾಡಬೇಕೊ ಆ ಎಲ್ಲಾ ಪ್ರಯತ್ನ ಮಾಡಿದ್ದೇನೆ. ಜಿಲ್ಲಾಡಳಿತ, ಸರ್ಕಾರ ಶಿರೂರು ಕಾರ್ಯಾಚರಣೆಗೆ ಏನೆಲ್ಲಾ ಮಾಡಿದೆ. ಇದು ಕೇರಳದ ಶಾಸಕ ಅಶ್ರಫ್ ಹಾಗೂ ಕೇರಳದ ಲಾರಿ ಮಾಲಕ ಮುನಾಫ್, ಕೇರಳದ ಮಾಧ್ಯಮಗಳಿಗೂ ಗೊತ್ತಿದೆ. ನಾನು ಈ ದುರಂತದಲ್ಲಿ ರಾಜಕೀಯ ಮಾಡಿಲ್ಲ. ನಾನು ಪಕ್ಕಾ ರಾಜಕಾರಣಿಯೂ ಅಲ್ಲ ಎಂದರು. ನನ್ನ ಚುನಾವಣೆಯ ಸಮಯದಲ್ಲಿಯೂ ಇಷ್ಟು ದುಡಿದಿರಲಿಲ್ಲ. ಅಷ್ಟರ ಮಟ್ಟಿಗೆ ಕಾಳಜಿಯಿಂದ ಶಿರೂರು ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದೇನೆ’ ಎಂದರು.
ಭಾರತ ಬೆಂಜ್ ಕಾರಲ್ಲಿ ಆರು ದಿನಕ್ಕೆ ಆಗುವಷ್ಟು ಆಕ್ಸಿಜನ್ ವ್ಯವಸ್ಥೆ ಕ್ಯಾಬಿನ್ ನಲ್ಲಿತ್ತು ಎಂದು , ಕೇರಳದ ಲಾರಿ ಮಾಲಕ, ಅರ್ಜುನ್ ಕುಟುಂಬದವರು ಹೇಳಿದ ಕಡೆಯಲ್ಲಾ ಮಣ್ಣು ತೆಗೆದೆವು.ಆದರೆ ಲಾರಿ ನದಿಯಲ್ಲಿ ಪತ್ತೆಯಾಗಿದೆ. ನಾಪತ್ತೆಯಾವದರು ಹೋಟೆಲ್ ಹಿಂದೆ ಬಿದ್ದ ಮಣ್ಣಲ್ಲಿ ಇದ್ದಿರಬಹದು ಎಂಬುದು ನನ್ನ ಊಹೆ. ಈಗ ಆ ಭಾಗದಲ್ಲಿ ಕಾರ್ಯಾಚರಣೆ ನಡೆದಿದೆ ಎಂದರು . ಶುಕ್ರವಾರ ಫಲಿತಾಂಶ ಸಿಗಬಹುದು ಎಂದು ಅವರು ನುಡಿದರು .ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಇದ್ದರು.