Advertisement

ಅಂಗಿಯಿಂದೊಂದ್‌ ಅಂಗಿ…ಶರ್ಟ್ ಡ್ರೆಸ್ ಸುಂದರಿ

12:30 PM May 13, 2020 | mahesh |

ಹುಡುಗರು ಧರಿಸುತ್ತಿದ್ದ ಜೀನ್ಸ್, ಹುಡುಗಿಯರ ಹಾಟ್‌ ಫೇವರಿಟ್‌ ಆಯ್ಕೆಯಾಗಿ ದಶಕಗಳೇ ಕಳೆದಿವೆ. ಈಗ ಅಂಗಿಯ ಸರದಿ. ಹುಡುಗರ ಶರ್ಟ್‌ ಅನ್ನು ಕೂಡಾ ಚಂದದ ಡ್ರೆಸ್‌ನಂತೆ ತೊಟ್ಟು ಸಂಭ್ರಮಿಸಬಹುದು. ಆ ಬಗೆಯ ದಿರಿಸೇ ಶರ್ಟ್‌ ಡ್ರೆಸ್‌..

Advertisement

ಕಪಾಟಿನಲ್ಲಿ ಅದೆಷ್ಟು ಉಡುಗೆ ಇದ್ದರೂ, “ನನ್ನ ಬಳಿ ಬಟ್ಟೆಯೇ ಇಲ್ಲ’ ಅಂತ ಗೊಣಗುವುದು ಹುಡುಗಿಯರ ಸ್ವಭಾವ. ಆಯ್ಕೆಗಳು ಅದೆಷ್ಟಿದ್ದರೂ ಕಡಿಮೆಯೇ, ಎಂಬ ಮನೋಭಾವ ನಮ್ಮದು. ಅಂಥವರು, ತಮ್ಮ ಬಳಿ ಇರುವ ಡ್ರೆಸ್‌ ಅನ್ನೇ ವಿಭಿನ್ನ ರೀತಿಯಲ್ಲಿ ತೊಟ್ಟು, ಹೊಸ ಬಗೆಯ ಫ್ಯಾಷನ್‌ಗೆ ನಾಂದಿ ಹಾಡುತ್ತಾರೆ. ಅಂಥ ಹೊಸ ಉಡುಪೇ, ಶರ್ಟ್‌ ಡ್ರೆಸ್‌!

ಉದ್ದದ ಅಂಗಿ, ಚಂದದ ಬೆಲ್ಟಾ
ಪುರುಷರು ಧರಿಸುವ ಅಂಗಿ ಇದೆಯಲ್ಲ, ಅದಕ್ಕೆ ಚಂದದ ಸೊಂಟ ಪಟ್ಟಿ ಕಟ್ಟಿಕೊಂಡರೆ ಶರ್ಟ್‌ ಡ್ರೆಸ್‌ ಆಗುತ್ತದೆ. ಆದರೆ, ಅಂಗಿ ಸೊಂಟದಿಂದ ಕೆಳ ಬರುವಷ್ಟು, ಅಥವಾ ಮೊಣಕಾಲವರೆಗೆ/
ಮೊಣಕಾಲಿಗಿಂತ ಸ್ವಲ್ಪ ಮೇಲೆ ಬರುವಷ್ಟಾದರೂ ಉದ್ದವಿರಬೇಕು. ಅಂದರೆ, ಅಂಗಿ ಒಂದು ಫ್ರಾಕ್‌ನಷ್ಟು ಉದ್ದ ಇರಬೇಕು. ಅತ್ತ ಫ್ರಾಕ್‌ ಅಲ್ಲದ, ಇತ್ತ ಅಂಗಿಯೂ ಅಲ್ಲದ ಈ ಶರ್ಟ್‌ ಡ್ರೆಸ್‌ಗೆ ಕಾಲರ್‌, ಬಟನ್‌ ಮತ್ತು ಕಫ್ ಸ್ಲಿವ್‌ (ಅಂಗಿಯ ತೋಳಿನ ತುದಿಯಲ್ಲಿ ಇರುವ ಪಟ್ಟಿ) ಇರುತ್ತದೆ. ಸೊಂಟಕ್ಕೆ ಬೆಲ್ಟ… ಇರುತ್ತದೆ. ಇವುಗಳಲ್ಲಿ ಜೇಬು ಕೂಡ ಇರುತ್ತವೆ.

ಕ್ಯಾಶುವಲ್‌ ಅಂಡ್‌ ಟ್ರೆಂಡಿ
ಇವುಗಳು ನೋಡಲು ಟ್ರೆಂಡಿ ಆಗಿರುವುದರಿಂದ, ಕ್ಯಾಶುವಲ್‌ ಬಟ್ಟೆಯಂತೆ ತೊಡಬೇಕು. ಹಬ್ಬ, ಹರಿದಿನ, ಪೂಜೆ, ಮದುವೆಯಂಥ ಸಮಾರಂಭಗಳಿಗೆ ಶರ್ಟ್‌ ಡ್ರೆಸ್‌ ಸರಿ
ಹೊಂದುವುದಿಲ್ಲ. ಇದರ ಜೊತೆಗೆ, ಸೈಕ್ಲಿಂಗ್‌ ಶಾರ್ಟ್ಸ್, ಹಾಟ್‌ ಪ್ಯಾಂಟ್ಸ್‌ ಅಥವಾ ಮೈಬಣ್ಣಕ್ಕೆ ಹೋಲುವ ಸ್ಟಾಕಿಂಗ್‌ ತೊಡಬಹುದು. ಶರ್ಟ್‌ ಡ್ರೆಸ್‌ ಉದ್ದ ಇರುವ ಕಾರಣ, ತೊಟ್ಟ ಶಾರ್ಟ್ಸ್ ಕಾಣಿಸಲಾರದು. ಈ ಉಡುಪಿನ ಜೊತೆ ಚಪ್ಪಲಿ, ಫ್ಲಿಪ್‌ – ಫ್ಲಾಪ್‌, ಗ್ಲಾಡಿಯೇಟರ್ಸ್‌ ಮತ್ತು ಹೈ ಹೀಲ್ಡ್ ಪಾದರಕ್ಷೆಗಳನ್ನು ಹಾಕಬಹುದು. ಆದರೆ, ಶರ್ಟ್‌ ಡ್ರೆಸ್‌ಗೆ ಒಪ್ಪುವ ಪಾದರಕ್ಷೆ ಅಂದರೆ, ಮೊಣಕಾಲವರೆಗಿನ ಬೂಟ್ಸ್‌, ಸ್ನೀಕರ್ಸ್‌ ಅಥವಾ ಶೂಸ್‌.

ಬಣ್ಣ ಬಣ್ಣದ ಅಂಗಿ
ಮೊದಲಿಗೆ ಕೇವಲ ಒಂದೇ ಬಣ್ಣ (ಸಾಲಿಡ್‌ ಕಲರ್ಡ್‌) ಅಥವಾ ಚೆಕ್ಸ್ ಡಿಸೈನ್‌ (ಚೌಕಾಕಾರದ ವಿನ್ಯಾಸ/ ಆಕೃತಿ) ಅಂದರೆ, ಪುರುಷರು ತೊಡುವ ಅಂಗಿಯ ಬಣ್ಣ, ವಿನ್ಯಾಸ ಮತ್ತು
ಶೈಲಿಯಲ್ಲಿ ಈ ಶರ್ಟ್‌ ಡ್ರೆಸ್‌ಗಳು ದೊರೆಯುತ್ತಿದ್ದವು. ಕಾಲ ಕಳೆದಂತೆ, ಮೇಕ್‌ ಓವರ್‌ ಪಡೆದು, ಮಹಿಳೆಯರಿಗ ಒಪ್ಪುವಂಥ ಪ್ಯೂರಲ್‌ ಪ್ರಿಂಟ್‌, ಅನಿಮಲ್‌ ಪ್ರಿಂಟ್‌, ಇಂಡಿಯನ್‌ ಪ್ರಿಂಟ್‌, ಜಾಮೆಟ್ರಿಕ್‌ ಡಿಸೈನ್ಸ್, ಕ್ಲಾಸಿಕ್‌ ಕಪ್ಪು ಬಣ್ಣ, ಇಂಡಿಯನ್‌ ಪ್ರಿಂಟ್‌, ಕ್ಯಾಮಫ್ಲಾಜ್‌ ಪೋಲ್ಕಾ ಡಾಟ್ಸ್‌, ಸ್ಟ್ರೈಕ್ಸ್ (ಉದ್ದ ಅಥವಾ ಅಡ್ಡದ ಗೀಟುಗಳು), ಚರ್ಮ,
ಡೆನಿಮ್‌ (ಜೀನ್ಸ್), ಮೆಟಾಲಿಕ್‌ ಪೇಂಟ್‌ ಶೈಲಿಯ ಬಣ್ಣ, ಚಿತ್ರಕಲೆ, ಕಸೂತಿ, ಕಲಂಕಾರೀ, ಚಿಕನ್‌ ವರ್ಕ್‌, ಲೇಸ್‌, ಕನ್ನಡಿ, ಮಣಿ, ದಾರಗಳು, ಗೆಜ್ಜೆ, ಟ್ಯಾಸೆಲ್, ಇತ್ಯಾದಿಗಳಿಂದ
ಅಲಂಕಾರಗೊಂಡ ಆಯ್ಕೆಗಳಲ್ಲೂ ಲಭ್ಯ ಇವೆ.

Advertisement

ಫ್ಯಾಷನ್‌ ಡಿಸೈನರ್‌ ಆಗಿ…
ಕಪಾಟಿನಲ್ಲಿರುವ ಅಂಗಿಯನ್ನು ಶರ್ಟ್‌ ಡ್ರೆಸ್‌ ಆಗಿ ಡಿಸೈನ್‌ ಮಾಡಿ, ನೀವೂ ಫ್ಯಾಷನ್‌ ಡಿಸೈನರ್‌ ಗಳಾಗಬಹುದು. ಬಿಗಿಯಾದ ಶರ್ಟ್‌ ಡ್ರೆಸ್‌ಗಳು ತೊಡಲು ಆರಾಮದಾಯಕ ಆಗಿರುವುದಿಲ್ಲ
ಆದ್ದರಿಂದ, ಸಡಿಲವಾದ, ಉದ್ದನೆಯ, ದೊಡ್ಡ ಗಾತ್ರದ ಅಂಗಿಯನ್ನೇ ಆಯ್ಕೆ ಮಾಡಿ. ನಂತರ, ಬೆಲ್ಟ್, ಬಟ್ಟೆಯಿಂದ ಮಾಡಿದ ಸೊಂಟ ಪಟ್ಟಿ, ಲಾಡಿ, ಇತ್ಯಾದಿಗಳನ್ನು ಬಳಸಿ, ಸಾಧಾರಣ ಅಂಗಿಯನ್ನು ಶರ್ಟ್‌ ಡ್ರೆಸ್‌ ಆಗಿ ಪರಿವರ್ತಿಸಿ. ಉಡುಗೆಗೆ ವಿರುದ್ಧ ಬಣ್ಣದ ಬಟ್ಟೆಯಿಂದ ಅದರ ಮೇಲೆ ದೊಡ್ಡ ಜೇಬು ಹೊಲಿದರೆ, ಅದೂ ಒಂದು ಸ್ಟೈಲೇ! ಈಗ, ಕ್ರಿಯೇಟಿವಿಟಿ ಅಂದರೆ ಇದೇ!

ಹಿಂದೆಯೂ ಇತ್ತು…
ಫ್ಯಾಷನ್‌ ಲೋಕಕ್ಕೆ, ಶರ್ಟ್‌ ಡ್ರೆಸ್‌ ಹೊಸತೇನಲ್ಲ. ಕಂಫ‌ರ್ಟ್‌ ಮತ್ತು ಸ್ಟೈಲ್‌ನಿಂದಾಗಿ ಈ ಉಡುಪು ರೂಪದರ್ಶಿಯರ ಅಚ್ಚುಮೆಚ್ಚಿನ¨ªಾಗಿದೆ. 1950ರಲ್ಲೇ ಬಹಳಷ್ಟು ಮಹಿಳೆಯರ
ಫೇವರಿಟ್‌ ಆಗಿತ್ತು ಈ ಶರ್ಟ್‌ ಡ್ರೆಸ್‌. ಇವುಗಳನ್ನು “ಶರ್ಟ್‌ ವೇಸ್ಟ್ ಡ್ರೆಸ್‌’ ಎಂದೂ ಕರೆಯಲಾಗುತ್ತಿತ್ತು.

-ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next