Advertisement

Shiroor Hill Slide: ಸಂತ್ರಸ್ತರ ಅಳಲು ಆಲಿಸಿದ ಬಿ.ವೈ.ವಿಜಯೇಂದ್ರ 

01:19 AM Jul 22, 2024 | Team Udayavani |

ಅಂಕೋಲಾ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಿಂದಾಗಿ ಸಂಪೂರ್ಣ ನೆಲಸಮಗೊಂಡಿದ್ದ ಉಳುವರೆ ಗ್ರಾಮಕ್ಕೆ ರವಿವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ ಸಂತ್ರಸ್ತರ ಅಳಲು ಆಲಿಸಿದರು.

Advertisement

ಗುಡ್ಡ ಕುಸಿತ ಹಾಗೂ ಅದರಿಂದಾದ ನೋವು, ಸಾವು, ನಷ್ಟಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಬಿ.ವೈ. ವಿಜಯೇಂದ್ರ, ಇದೊಂದು ದುರದೃಷ್ಟಕರ ಘಟನೆ. ಗುಡ್ಡ ಕುಸಿತದ ಪರಿಣಾಮವಾಗಿ ಗಂಗಾವಳಿ ನದಿ ದಡದ ಅನೇಕ ಮನೆಗಳು ನೆಲಕಚ್ಚಿವೆ. ಕುಟುಂಬಗಳು ಬೀದಿಗೆ ಬಂದಿವೆ. ಅವರ ರಕ್ಷಣೆ ಮಾಡಬೇಕಿದೆ ಎಂದರು.

ಗುಡ್ಡ ಕುಸಿತದಿಂದಾಗಿರುವ ಮಣ್ಣು ತೆರುವ ಕಾರ್ಯಾಚರಣೆ ಇನ್ನಷ್ಟು ವೇಗದಿಂದ ನಡೆಯುವಂತಾಗಬೇಕು. ಮಣ್ಣಿನಡಿ ಸಿಲುಕಿರುವ ಜನರಿಗಾಗಿ ಶೋಧ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ನಡೆಸಬೇಕು. ಆದಷ್ಟು ಬೇಗ ಕಾರ್ಯಾಚರಣೆ ನಡೆಸಿ ಕಣ್ಮರೆಯಾದವರ ಪತ್ತೆ ಮಾಡಲು ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಸಿಎಂ ಸರಿ ಇದ್ದಿದ್ದರೆ ಅಧಿಕಾರಿಗಳಿಂದ ಹೇಗೆ ತಪ್ಪಾಗುತ್ತದೆ?: ವಿಜಯೇಂದ್ರ
ಯಲ್ಲಾಪುರ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ಬೇಗ ಜನಪ್ರಿಯತೆ ಮತ್ತು ಜನರ ವಿಶ್ವಾಸ ಕಳೆದುಕೊಳ್ಳುತ್ತದೆ ಎಂದು ಊಹಿಸಿರಲಿಲ್ಲ. ಪಕ್ಷದ ಬಣ್ಣದ ಮಾತು ಮತ್ತು ಗ್ಯಾರಂಟಿ ಯೋಜನೆ ಮೂಲಕ ಜನರನ್ನು ಮರುಳು ಮಾಡಿ ಅಧಿಕಾರಕ್ಕೆ ಬಂದಿದ್ದರು. ಜನ ನಿರೀಕ್ಷಿಸಿದ್ದನ್ನು ಇವರ ಬಳಿ ಕೊಡಲಾಗಲಿಲ್ಲ. ಅಭಿವೃದ್ಧಿ ನಿಂತು ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿಯೇ ಈವರೆಗೆ ಕಾಣದಂತಹ ಹಗರಣ ಕಂಡಿದ್ದೇವೆ. ಇವರು ಸರಿ ಇದ್ದರೆ ಅಧಿಕಾರಿಗಳಿಂದ ಹೇಗೆ ತಪ್ಪಾಗುತ್ತದೆ. ಆದ ಪ್ರಮಾದಕ್ಕೆ ಅಧಿಕಾರಿಗಳನ್ನು ನೆಪ ಮಾಡಿ ಕೈತೊಳೆದುಕೊಳ್ಳುವ ಪ್ರಯತ್ನ ನಡೆದಿದೆ. ಅಸ್ತಿತ್ವ ಇಲ್ಲದ ಕಂಪನಿ ಹೆಸರಿಗೆ ಹಣ ವರ್ಗಾಯಿಸಿ ಬಟವಾಡೆ ಮಾಡಿಕೊಂಡಿದ್ದಾರೆ. ಇದೊಂದು ಹಣ ಲೂಟಿ ಹೊಡೆಯುವ ಸರ್ಕಾರ ಎಂದರು.

Advertisement

ಹೆಬ್ಟಾರ್‌ ನಡೆ ಬಗ್ಗೆ ಕಾಲವೇ ಉತ್ತರಿಸಲಿದೆ: ವಿಜಯೇಂದ್ರ
ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಟಾರ್‌ ನಡೆ ಬಗ್ಗೆ ಕಾಲವೇ ಉತ್ತರಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಬ್ಟಾರ್‌ ತಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ ಅಂತಿದ್ದಾರೆ. ಇವರ ನಡಾವಳಿಕೆ ನಮ್ಮ ಗಮನಕ್ಕೆ ಬಂದಿದೆ. ಈ ಶಾಸಕರಿಂದ ಕಾರ್ಯಕರ್ತರಿಗೆ ಅಪಾರ ಅವಮಾನವಾಗುತ್ತಿದೆ. ಈ ಸಂಗತಿಯನ್ನು ಕೇಂದ್ರ ನಾಯಕರ ಗಮನಕ್ಕೆ ತರುತ್ತೇನೆ. ಕಾಲವೇ ಉತ್ತರ ಹೇಳುತ್ತದೆ. ಕಾದು ನೋಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next