Advertisement

ಸೌಹಾರ್ದತೆಯ ಶಿರೋಳದ ರೊಟ್ಟಿ ಜಾತ್ರೆ

06:09 AM Jan 27, 2019 | |

ನರಗುಂದ: ತಾಲೂಕಿನ ಶಿರೋಳದ ಸರ್ವಧರ್ಮ ಸಮನ್ವಯದ ರೊಟ್ಟಿ ಜಾತ್ರೆಯು ಉತ್ತರ ಕರ್ನಾಟಕ ಭಾಗದಲ್ಲೇ ಸಾಮರಸ್ಯದ ಸಂಕೇತವಾಗಿ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೊಂದುತ್ತಿದೆ. ಇದು ಮಲಪ್ರಭಾ ನದಿ ದಂಡೆಯ ಬಹು ಗ್ರಾಮಗಳ ಒಗ್ಗಟ್ಟಿನ ದ್ಯೋತಕವಾಗಿ ಆಚರಣೆಗೊಳ್ಳುತ್ತಿರುವುದು ವಿಶೇಷ.

Advertisement

ಶಿರೋಳ ತೋಂಟದಾರ್ಯ ಮಠದ ‘ನಮ್ಮೂರ ಜಾತ್ರೆ’ಯ ಒಂದು ಭಾಗವೇ ರೊಟ್ಟಿ ಜಾತ್ರೆ. ಧರ್ಮಸಭೆ, ರಥೋತ್ಸವಕ್ಕೆ ಸೀಮಿತವಾಗದ ಈ ಜಾತ್ರೆ ಸರ್ವ ಜನಾಂಗಗಳ ಮನಸ್ಸು ಒಗ್ಗೂಡಿಸಿ ಕೋಮು ಸೌಹಾರ್ದತೆ ಗಟ್ಟಿಗೊಳಿಸಿ, ಏಕತೆಯ ಬದುಕಿನ ಭಾರತೀಯ ಸಂಸ್ಕೃತಿ, ಗ್ರಾಮೀಣ ಸೊಗಡು ಬಿಂಬಿಸುವಲ್ಲಿ ಹೆಸರಾಗಿದೆ.

ಮುಂಡರಗಿ ತಾಲೂಕು ಡಂಬಳ ತೋಂಟದಾರ್ಯ ಮಠದ ಜಾತ್ರೆಯಲ್ಲಿ ತೋಂಟದ ಲಿಂ| ಡಾ| ಸಿದ್ಧಲಿಂಗ ಸ್ವಾಮೀಜಿ ಖಡಕ್‌ ರೊಟ್ಟಿ, ಪಲ್ಲೆ(ಭಜ್ಜಿ), ಕರಿಂಡಿ, ಅನ್ನದ ಬಾನ ಭೋಜನ ಪ್ರಸಾದ ಪದ್ಧತಿ ಪ್ರಾರಂಭಿಸಿದ್ದರು. ಅದೇ ಮಾದರಿಯಲ್ಲಿ 1994ರಲ್ಲಿ ಶಿರೋಳ ತೋಂಟದಾರ್ಯ ಮಠದಲ್ಲಿ ಶ್ರೀ ಗುರುಬಸವ ಸ್ವಾಮೀಜಿ ರೊಟ್ಟಿ ಜಾತ್ರೆಗೆ ಮುನ್ನುಡಿ ಬರೆದರು. 24 ವರ್ಷದಿಂದ ತೇರು, ಉತ್ಸವ, ಪೂಜೆಗಿಂತ ಜನಪ್ರಿಯವಾಗಿದ್ದು ರೊಟ್ಟಿ ಜಾತ್ರೆಯಾಗಿದೆ. ಅದಕ್ಕೆಂದೇ ಮಹಾನುಭಾವರು ‘ಅನ್ನಬ್ರಹ್ಮ’ ಎಂದರು.

ರೊಟ್ಟಿ ಜಾತ್ರೆ ವಿಶೇಷ: 15 ಚೀಲ ಜೋಳದ ಹಿಟ್ಟು ಸರ್ವ ಧರ್ಮೀಯರ ಮನೆಗಳಿಗೆ ತಲುಪುತ್ತದೆ. ಕೆಲವರು ಖುದ್ದಾಗಿ ಹಿಟ್ಟು ಪಡೆಯುವರು. ಇಲ್ಲವೇ ತಮ್ಮದೆ ಹಿಟ್ಟಿನಿಂದ ರೊಟ್ಟಿ ಮಾಡಿ ಶ್ರೀಮಠಕ್ಕೆ ಕಳಿಸುತ್ತಾರೆ. ತಟ್ಟುವ ಕೈಗಳಿಗೂ ಯಾವುದೇ ರೀತಿಯ ಭಿನ್ನಭೇದ ಇಲ್ಲದ ಜಾತ್ರೆ ಇದಾಗಿದೆ.

ಬಹುತೇಕ ಜಾತ್ರೆಗಳಲ್ಲಿ ಸಿಹಿಯೂಟ ಪ್ರಸಾದವಿದ್ದರೆ, ತೋಂಟದಾರ್ಯ ಜಾತ್ರೆಯಲ್ಲಿ ಜೋಳದ ರೊಟ್ಟಿಯನ್ನೇ ಪ್ರಸಾದವಾಗಿ ನೀಡುವುದಕ್ಕೆ ದಶಕಗಳ ಇತಿಹಾಸವಿದೆ. ಖಡಕ್‌ ರೊಟ್ಟಿ, ಹೊಲದಲ್ಲಿ ಬೆಳೆದ ತರಕಾರಿಗಳನ್ನು ಚಕ್ಕಡಿ, ಟ್ರ್ಯಾಕ್ಟರ್‌ನಲ್ಲಿ ತಂದು ಮಠದಲ್ಲಿ ಕೂಡಿ ಹಾಕುತ್ತಾರೆ. ಈ ವರ್ಷ 85 ಸಾವಿರಕ್ಕೂ ಹೆಚ್ಚು ಜೋಳದ ಖಡಕ್‌ ರೊಟ್ಟಿ ಸಂಗ್ರಹವಾಗಿದೆ ಎನ್ನುತ್ತಾರೆ ಸದ್ಭಕ್ತರು.

Advertisement

ಬರಗಾಲಕ್ಕೆ ಬರಡಾಗಿಲ್ಲ: ಜನಪ್ರಿಯತೆ ಸಾಧಿಸಿದ ರೊಟ್ಟಿ ಜಾತ್ರೆ ಎಂದಿಗೂ ಬರಗಾಲ ಭವನೆಗೆ ಬರಡಾಗಿಲ್ಲ. ನಾಲ್ಕೈದು ವರ್ಷಗಳಿಂದ ಸತತ ಬರಗಾಲವಿದ್ದರೂ ಭಕ್ತರು ಜಾತ್ರೆ ಮುನ್ನಡೆಸಿದ್ದಾರೆ. ಇದು ಭಕ್ತಿಯ ಪರಾಕಾಷ್ಟೆಗೆ ನಿದರ್ಶವಾಗಿದೆ. ಜ.27ರಂದು ಶಿರೋಳ ತೋಂಟದಾರ್ಯ ಮಠದ ಆವರಣದಲ್ಲಿ ರೊಟ್ಟಿ ಊಟ ಜಾತ್ರೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next