Advertisement
ಅಜೆಕಾರು: ಕಾರ್ಕಳ ತಾಲೂಕಿನ ಅತ್ಯಂತ ಗ್ರಾಮೀಣ ಭಾಗವಾದ ಶಿರ್ಲಾಲು ಸೂಡಿ ಸರಕಾರಿ ಹಿ.ಪ್ರಾ. ಶಾಲೆ ಯಶಸ್ವಿಯಾಗಿ 108 ವರ್ಷಗಳನ್ನು ಕಳೆದು ಮುನ್ನಡೆಯುತ್ತಿದೆ. ಶಿರ್ಲಾಲು ಪರಿಸರದ ಆಸುಪಾಸಿನಲ್ಲಿ ಶಾಲೆಗಳಿಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡ ಸ್ಥಳಿಯರು ಗ್ರಾಮಸ್ಥರ ಸಹಕಾರದೊಂದಿಗೆಶಿರ್ಲಾಲು ಸೂಡಿ ಮನೆತನದ ಚೆಲುವಯ್ಯ ಹೆಗ್ಡೆಯವರು ದಾನವಾಗಿ ನೀಡಿದ ಸ್ಥಳದಲ್ಲಿ 1911ರಲ್ಲಿ ಬೋರ್ಡ್ ಪ್ರಾಥಮಿಕ ಶಾಲೆ ಆರಂಭಿಸಿ ಅನಂತರದ ದಿನಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತ್ತು.
ಆರಂಭದ ವರ್ಷಗಳಲ್ಲಿ ಪಂಗ್ಲಬೆಟ್ಟುವಿನ ಜಾಣ ಹೆಗ್ಡೆಯವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮುಖ್ಯ ಶಿಕ್ಷಕಿಯಾಗಿ ಆಶಾಬಾನು ಕಾರ್ಯನಿರ್ವಹಿಸುತ್ತಿದ್ದು ಸಹಶಿಕ್ಷಕರು 4 ಮಂದಿ ಜತೆಗೆ ಇಬ್ಬರು ಗೌರವ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 94 ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದು ಶಾಲೆಯು 2016-17ನೇ ಸಾಲಿನಲ್ಲಿ ಉತ್ತಮ ಶಾಲೆ ಪ್ರಶಸ್ತಿ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಶಾಲೆಯ ಶಿಕ್ಷಕ ಲಕ್ಷ್ಮಣ್ ಸಾಳ್ವಣ್‌ಕರ್ ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ ಹಿಂದೆ ಉತ್ತಮ ಶಾಲಾಭಿವೃದ್ಧಿ ಸಮಿತಿ ಎಂಬ ಪ್ರಶಸ್ತಿಗೂ ಶಾಲೆ ಪಾತ್ರವಾಗಿತ್ತು.
Related Articles
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಇಲ್ಲಿನ ಹಳೆ ವಿದ್ಯಾರ್ಥಿಗಳಲ್ಲಿ ಹಲವರು ಡಾಕ್ಟರ್, ಇಂಜಿನಿಯರ್, ನೂರಾರು ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಬಹಳಷ್ಟು ಮಂದಿ ಮುಂಬಯಿ ಸೇರಿದಂತೆ ದೇಶದ ಬೃಹತ್ ನಗರಗಳಲ್ಲಿ ಹೊಟೇಲ್ ಹಾಗೂ ಇತರ ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದು ಖ್ಯಾತ ಉದ್ಯಮಿಗಳಾಗಿದ್ದಾರೆ.
Advertisement
ಬೇಡಿಕೆಗಳುಶಾಲೆಯು 2017ನೇ ಸಾಲಿನಲ್ಲಿ ಶತಮಾನೋತ್ಸವ ಆಚರಿಸಿದ್ದು ಈ ಸಂದರ್ಭ ಶತಸ್ಮತಿ ಶಾಲಾ ಸಭಾಭವನ, ಧ್ವಜಕಟ್ಟೆ, ಶಾಲಾ ಮುಂಭಾಗ ಇಂಟರ್‌ಲಾಕ್ ಅಳವಡಿಕೆ, ಶಾಲಾ ಬಳಿಯಲ್ಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ತಂಗುದಾಣ ಒದಗಿಸಲಾಗಿದೆ. ಎಜುಸ್ಯಾಟ್, ಕುಡಿಯುವ ನೀರಿನ ವ್ಯವಸ್ಥೆ ಶಾಲೆ ಒಳಗೊಂಡಿದ್ದು ಕಂಪ್ಯೂಟರ್ ಶಿಕ್ಷಣ ನೀಡಲು ಕಂಪ್ಯೂಟರ್ ಅವಶ್ಯಕತೆ ಶಾಲೆಗಿದೆ. ಪ್ರಸಕ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜತೆಗೆ ಪಠ್ಯೇತರ ವಿಷಯಗಳಾದ ವಾಚನಾಲಯ, ಕ್ರೀಡಾ ಉಪಕರಣಗಳು ಈ ಶಾಲೆಯಲ್ಲಿದ್ದು ವಿದ್ಯಾರ್ಥಿಗಳ ಭವಿಷ್ಯದ ಉಜ್ವಲಕ್ಕಾಗಿ, ಭಾರತ ಸೇವಾದಳ, ಯೋಗಾಭ್ಯಾಸಗಳನ್ನು ಕಲಿಸಲಾಗುತ್ತಿದೆ. ಶಾಲೆಯಲ್ಲಿ ಇಂಗ್ಲಿಷ್ ನ್ಪೋಕನ್ ತರಗತಿ ನಡೆಸಲಾಗುತ್ತಿದೆ. ಶಾಲೆಯು ಕಟ್ಟಡ ಇರುವಲ್ಲಿ 60 ಸೆಂಟ್ಸ್ ಹಾಗೂ ಕೆಲವೇ ಮೀಟರ್ ಅಂತರದಲ್ಲಿ 2.75 ಎಕ್ರೆ ವಿಶಾಲ ಜಾಗ ಒಳಗೊಂಡಿದೆ. ಈ ಪ್ರದೇಶದಲ್ಲಿ ಶಾಲಾವನ ನಿರ್ಮಾಣ , ಸುಸಜ್ಜಿತ ಆಟದ ಮೈದಾನ ಹೊಂದಿದೆ. ಶಿರ್ಲಾಲು ಸೂಡಿ ಶಾಲೆ ಶತಮಾನ ಕಂಡಿದ್ದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಿಗೆ ಮನೆಯ ವಾತಾವರಣದಂತೆ ಶಿಕ್ಷಣ ನೀಡಲಾಗುತ್ತಿದ್ದು ಗ್ರಾಮಸ್ಥರ ಸಹಕಾರ, ಕೊಡುಗೆಗಳಿಂದ ಶಾಲೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ.
-ಆಶಾಭಾನು, ಮುಖ್ಯ ಶಿಕ್ಷಕರು ಅತ್ಯಂತ ಗ್ರಾಮೀಣ ಭಾಗವಾದ ಶಿರ್ಲಾಲುವಿ ನಲ್ಲಿ ಶಿಕ್ಷಣದ ಕೊರತೆ ನೀಗಿಸಲು ಗ್ರಾಮಸ್ಥರು ಶಾಲೆಯನ್ನು ನಿರ್ಮಾಣ ಮಾಡಿದ್ದು ಶಿರ್ಲಾಲು ಸೇರಿದಂತೆ ಪರಿಸರದ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಿ ಈ ಶಾಲೆ ರೂಪುಗೊಂಡಿತ್ತು. ಶಿಕ್ಷಕರ ಗುಣಮಟ್ಟದ ಶಿಕ್ಷಣ ಜತೆಗೆ ಗ್ರಾಮಸ್ಥರ ನಿರಂತರ ಪ್ರೋತ್ಸಾಹ ದೊಂದಿಗೆ ಶತಮಾನ ಕಳೆದು ಮುನ್ನಡೆಯುತ್ತಿದೆ.
-ಅನಂತ್ರಾಜ್ ಪೂವಣಿ,
ಮಾಜಿ ಅಧ್ಯಕ್ಷರು, ಮಂಡಲ ಪಂಚಾಯತ್, ಅಜೆಕಾರು - ಜಗದೀಶ ಅಜೆಕಾರು