ಮುಂಬಯಿ: ಭಾಯಂದರ್ ಪೂರ್ವ ಶಿರ್ಡಿ ನಗರ ಶ್ರೀ ಅಯ್ಯಪ್ಪ ಭಕ್ತವೃಂದದ 24ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಡಿ. 23ರಂದು ಭಾಯಂದರ್ ಪೂರ್ವದ ನವಘರ್ ನಾಕಾ, ಹನುಮಾನ್ ಮಂದಿರದ ಎದುರಿನ ಮುನ್ಸಿಪಾಲ್ ಮೈದಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಬೆಳಗ್ಗೆ ಗಣಹೋಮ, ಅನಂತರ ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿಯ ಸದಸ್ಯರಿಂದ ಭಜನೆ ಹಾಗೂ ಪುರುಷೋತ್ತಮ ಗುರುಸ್ವಾಮಿ ಮತ್ತು ಹರೀಶ್ ಗುರುಸ್ವಾಮಿ ನೇತೃತ್ವದಲ್ಲಿ ಪಡಿಪೂಜೆ, ಶರಣು ಘೋಷ ಮುಂತಾದ ಶ್ರೀ ಅಯ್ಯಪ್ಪ ಸ್ವಾಮಿಯ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.
ಇದೇ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸನ್ನಿಧಿಯ ಶೈಲಿಯಂತೆ ದೇವರ ಮಂಟಪ ಮತ್ತು ಹೂವಿನ ಅಲಂಕಾರ ಮಾಡಿದ ಗಿರೀಶ್ ಕರ್ಕೇರ ಮತ್ತು ಪುರುಷೋತ್ತಮ ಮಂಚಿ ಅವರನ್ನು ಫಲಪುಷ್ಪ, ಶಾಲು, ಪ್ರಸಾದದೊಂದಿಗೆ ಶಿಬಿರದ ಗುರುಸ್ವಾಮಿಗಳು ಗೌರವಿಸಿದರು.
ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ದನ ಭಟ್, ನಗರ ಸೇವಕ ಅರವಿಂದ ಶೆಟ್ಟಿ, ಮೇಯರ್ ಡಿಂಪಲ್ ಮೆಹ್ತಾ ಸೇರಿದಂತೆ ಸ್ಥಳೀಯ ಶಾಸಕರು, ನಗರ ಸೇವಕರು, ರಾಜಕೀಯ ನೇತಾರರು, ವಿವಿಧ ಶಿಬಿರಗಳ ಅಯ್ಯಪ್ಪ ವ್ರತಧಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಗೀತಾಂಬಿಕಾ ಯಕ್ಷಗಾನ ಕಲಾಮಂಡಳಿ ಅಸಲ# ಘಾಟ್‌ಕೋಪರ್ ಇದರ ಕಲಾವಿದರ ಗೆಜ್ಜೆದ ಪೂಜೆ ಎಂಬ ಯಕ್ಷಗಾನ ಬಯಲಾಟವು ಜಿನ್ನಪ್ಪ ಶೆಟ್ಟಿ ಮತ್ತು ತಿಮ್ಮಪ್ಪ ಪೂಜಾರಿ ಅವರ ಸೇವಾರ್ಥಕವಾಗಿ ಆಯೋಜಿಸಲಾಗಿತ್ತು.
ಕಾರ್ಯಾಧ್ಯಕ್ಷ ಮನೋಹರ ಕರ್ಕೇರ, ಉಪ ಕಾರ್ಯಾಧ್ಯಕ್ಷರಾದ ನಂದಿಕೂರು ಲೋಕೇಶ್ ಶೆಟ್ಟಿ, ಸತೀಶ್ ಪೂಜಾರಿ, ಗೌರವಾಧ್ಯಕ್ಷ ಜಿನ್ನಪ್ಪ ಶೆಟ್ಟಿ, ಸದಾನಂದ ಕುಮಾರ್ ಸಾಲ್ಯಾನ್, ರವಿ ಪೂಜಾರಿ, ವಿಠಲ್ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಮೂಲ್ಯ, ಕೋಶಾಧಿಕಾರಿ ಲೋಕೇಶ್ ಜೆ. ಶೆಟ್ಟಿ ಮಲ್ಲೂರು, ಜತೆ ಕೋಶಾಧಿಕಾರಿ ಸೀತಾರಾಮ ಸುವರ್ಣ, ಯುವ ವಿಭಾಗದವರು, ಮಹಿಳಾ ಸದಸ್ಯೆಯರು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಾಲಾಧಾರಿ ಶಿಬಿರದ ಸ್ವಾಮಿಗಳು ಸಹಕರಿಸಿದರು. ಸಹಸ್ರಾರು ಮಂದಿ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿಯ ಆಶೀರ್ವಾದ ಪಡೆದರು.