Advertisement
ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರ ಕನಸಿನ ನೆರವಿನ ಹಸ್ತದ ಯೋಜನೆಯಾಗಿದೆ. “ಬಾಯಾರಿದವರಿಗೆ ಶುದ್ಧ ಕುಡಿಯುವ ನೀರು ಕೊಡುವ ಕಾಯಕ’ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಈ ವರ್ಷದ ಬಿರು ಬೇಸಗೆಯ ಕಾರಣದಿಂದ ಶಿರಸಿಗೆ ನೀರು ಪೂರೈಸುವ ಕೆಂಗ್ರೆ ಹಾಗೂ ಮಾರಿಗದ್ದೆಯ ಹಳ್ಳದಲ್ಲೂ ನೀರಿನ ಕೊರತೆ ಆಗಿದ್ದು ನಗರಸಭೆ ಎರಡು ದಿನಗಳಿಗೊಮ್ಮೆ ನೀರು ಬಿಡುತ್ತಿದೆ. ಕೆಲವಡೆ ಬಾವಿ ನೀರು ಆಶ್ರಯಸಿಕೊಂಡವರಿಗೆ ತಳ ಕಂಡಿದೆ. ಹೀಗಾಗಿ ನಗರದ ಮರಾಠಿಕೊಪ್ಪ ಸೇರಿದಂತೆ ಹಲವಡೆ ನೀತಿನ ತುಟಾಗ್ರತೆ ಉಂಟಾಗಿದೆ. ಈ ತುಟಾಗ್ರತೆಯನ್ನು ಜೀವ ಜಲ ಕಾರ್ಯಪಡೆ ನೀಗಿಸುತ್ತಿದೆ. ಬೆಳಗಿನಿಂದ ಸಂಜೆಯ ತನಕ ನೀರು ಬೇಕಾದವರಿಗೆ ಒಂದೇ ಒಂದು ರೂಪಾಯಿ ಕೂಡ ಪಡೆಯದೇ ನೀಡುತ್ತಿದೆ. ಶಿರಸಿ ನಗರ ಹಾಗೂ ಸುತ್ತಲಿನ 5 ಕಿಮಿ ವ್ಯಾಪ್ತಿಯಲ್ಲಿ ತನ್ನ ಸೇವಾ ಕೈಂಕರ್ಯ ನಡೆಸುತ್ತಿದೆ. ನಗರದ ಮರಾಠಿಕೊಪ್ಪ ಅಂಜನಾದ್ರಿ ದೇವಸ್ಥಾನದ ಬಳಿ ತೆಗೆಯಲಾದ ಬೋರ್‌ವೆಲ್‌ನಲ್ಲಿ ಗುಣಮಟ್ಟದ ನೀರಿದ್ದು, ಅದನ್ನು ಅಗತ್ಯ ಉಳ್ಳವರಿಗೆ
ನೀಡುತ್ತಿದೆ. ಜಲ ಸಂರಕ್ಷಣೆ ಜೊತೆಗೆ ಕಾರ್ಯಪಡೆ ಜಲ ನೀಡಿ ದಾಹ ಕಡಿಮೆ ಮಾಡುತ್ತಲಿದೆ.
Related Articles
Advertisement
ಜೀವಜಲ ಕಾರ್ಯಪಡೆ ಟ್ಯಾಂಕರ್ ನೀರು ನಮ್ಮ ಬೇಸಗೆಯ ಜಲ ಸಂಕಷ್ಟ ನಿವಾರಿಸುತ್ತಿದೆ. ನೆಂಟರಿಷ್ಟರು ಬಂದಾಗ ಮರ್ಯಾದೆ ಉಳಿಸಿದೆ.*ಗಿರಿಜಾ, ಮರಾಠಿಕೊಪ್ಪದ ಮಹಿಳೆ ಐದು ಕಿಮಿ ವ್ಯಾಪ್ತಿಯಲ್ಲಿ ಯಾರಿಗೇ ಕುಡಿಯುವ ನೀರಿನ ಸಮಸ್ಯೆ ಆದರೂ ನೆರವಾಗಬೇಕು ಎಂಬ ಆಶಯದಲ್ಲಿ ಕೆಲಸ ಮಾಡಲಾಗುತ್ತಿದೆ. ಜನರ ಬಾಯಾರಿಕೆ ನೀಗಿಸುವ ಖುಷಿಗಿಂತ ದೊಡ್ಡದೇನಿಲ್ಲ.
ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು ಜೀವ ಜಲ ಕಾರ್ಯಪಡೆ *ರಾಘವೇಂದ್ರ ಬೆಟ್ಟಕೊಪ್ಪ