Advertisement

ಶಿರಸಿ-ಹಾಸ್ಯ ಬದುಕಿನಲ್ಲಿ ಅಂತರ್ಗತ: ಪ್ರೊ| ಭುವನೇಶ್ವರಿ ಹೆಗಡೆ

05:43 PM Jan 01, 2024 | Team Udayavani |

ಶಿರಸಿ: ಹಾಸ್ಯಕ್ಕೆ ಪಕ್ಷವಿಲ್ಲ. ಹಾಸ್ಯಕ್ಕೆ ಪಂಥವೂ ಇಲ್ಲ. ಹಾಸ್ಯ ಸಾಹಿತ್ಯ ಎಲ್ಲವನ್ನೂ ಮೀರಿದ್ದು. ಹಾಸ್ಯವು ನಮ್ಮ ಬದುಕಿನಲ್ಲಿ ಅಂತರ್ಗತವಾಗಿರುತ್ತದೆ ಎಂದು ಪ್ರಸಿದ್ಧ ಹಾಸ್ಯ ಸಾಹಿತಿ, ಪ್ರೊ| ಭುವನೇಶ್ವರಿ ಹೆಗಡೆ ಹೇಳಿದರು.

Advertisement

ಭಾನುವಾರ ಅವರು ನಗರದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ಎಂ. ರಮೇಶ ಪ್ರಶಸ್ತಿ ಸಮಿತಿ ನೀಡುವ ಎಂ. ರಮೇಶ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಹಾಸ್ಯ ಪ್ರಬಂಧವು ನಮ್ಮ ಬದುಕಿನಲ್ಲಿ ನವಿರಾದ ಪ್ರಭಾವ ಬೀರುತ್ತವೆ.

ನವಿರಾದ ಹಾಸ್ಯ ಓದಿ ಮುಗಿಸುವ ತನಕ ಒಂದು ಉಲ್ಲಾಸ ಸಿಗಬೇಕು ಎಂದ ಅವರು, ಹಾಸ್ಯ ಸಾಹಿತ್ಯಕ್ಕೆ ಭವಿಷ್ಯವಿದೆ ಎಂದೇ ನಂಬಿದ್ದೇನೆ ಎಂದರು. ನಾನು ಹಾಸ್ಯ ಸಾಹಿತ್ಯದ ಸಂಪರ್ಕಕ್ಕೆ ಬರಲು ಪ್ರೊ| ಎಂ.ರಮೇಶ ಅವರು ಕಾರಣ. ಹಾಸ್ಯ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ರಮೇಶ ಅವರ ಮಾತು ಕಾರಣ. ಸತ್ಯವನ್ನು ನವಿರಾಗಿ ಹೇಳುತ್ತಿದ್ದರು ಎಂದರು.

ಪ್ರಶಸ್ತಿ ಪ್ರದಾನ ನೆರವೇರಿಸಿದ ಕವಿ, ಅನುವಾದಕ ಧರಣೇಂದ್ರ ಕುರಕುರಿ, ಬದುಕನ್ನು ಗಾಢವಾಗಿ ಪ್ರೀತಿಸಿದವರು ರಮೇಶರು. ಶಿಷ್ಯರ, ಸ್ನೇಹಿತರ ಬದುಕನ್ನು ರೂಪಿಸಿದವರರು. ಟಿ. ಸುನಂದಮ್ಮ ಅವರ ಹಾಸ್ಯ ಪರಂಪರೆಯನ್ನು ಮುಂದುವರಿಸಿದವರು ಭುವನೇಶ್ವರಿ ಹೆಗಡೆ ಅವರು. ಅವರಿಗೆ ರಮೇಶ ಅವರ ಪ್ರಶಸ್ತಿ ಲಭಿಸಿದ್ದು ಅತ್ಯಂತ ಖುಷಿಯ ಸಂಗತಿ ಎಂದರು. ಅಧ್ಯಕ್ಷತೆವಹಿಸಿದ್ದ ನಿವೃತ್ತ ಪ್ರಾಚಾರ್ಯೆ ಕುಮುದಾ ಶರ್ಮಾ ಮಾತನಾಡಿ, ನಿತ್ಯ ಬದುಕಿನಲ್ಲಿ ರಮೇಶರು ನೆನಪಾಗುತ್ತದೆ ಎಂದರು. ವೈಶಾಲಿ ವಿ.ಪಿ.ಹೆಗಡೆ, ಪ್ರೊ. ವಿಜಯನಳಿನಿ ರಮೇಶ ಇತರರು ಇದ್ದರು. ಡಾ| ಜಿ.ಎಂ. ಹೆಗಡೆ, ಡಾ| ಶಿವರಾಮ ಕೆ.ವಿ ಅವರು ಸಭಿಕರ ಪರವಾಗಿ ಮಾತನಾಡಿದರು.

ರೋಹಿಣಿ ಹೆಗಡೆ ಪ್ರಾರ್ಥಿಸಿದರು. ಮಧು ಮತ್ತೀಹಳ್ಳಿ ಸ್ವಾಗತಿಸಿದರು. ಪ್ರಜ್ಞಾ ಮತ್ತಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಮ್ಮಾನ ಪತ್ರವನ್ನು ಶೈಲಜಾ ಗೋರ್ನಮನೆ ವಾಚಿಸಿದರು. ವೈಶಾಲಿ ಹೆಗಡೆ ನಿರ್ವಹಿಸಿದರು. ಮಹಿಮಾ ಭಟ್ಟ ವಂದಿಸಿದರು. ಕಾರ್ಯಕ್ರಮಕ್ಕೆ ನಯನ ಫೌಂಡೇಶನ್‌ ಸಹಭಾಗಿತ್ವ ನೀಡಿತ್ತು.

Advertisement

ಗುರುಗಳಾದ ರಮೇಶರ ಸ್ಮರಣೆಯ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಪುಣ್ಯ. ನತಮಸ್ತಕಳಾಗಿ ಸ್ವೀಕರಿಸಿದ್ದೇನೆ. ಹರ ಮುನಿದರೂ ಗುರು ಕಾಯುವನು ಎಂಬ ಮಾತು ನಳಿನಿ ಮೇಡಂ ಅವರ ಮೂಲಕ ಸತ್ಯವಾಗಿಸಿದೆ.
*ಭುವನೇಶ್ವರಿ ಹೆಗಡೆ, ಪ್ರಸಿದ್ಧ ಹಾಸ್ಯ ಲೇಖಕಿ

ಹಾಸ್ಯ ಸಾಹಿತ್ಯಕ್ಕೆ ಅತ್ಯಂತ ಪ್ರಮುಖ ಸ್ಥಾನ ಇದೆ. ನಿತ್ಯ ಬದುಕಿನಲ್ಲಿ ಅನೇಕ ಹಾಸ್ಯ ಘಟನೆಗಳು ನಡೆಯುತ್ತವೆ.
*ಡಾ| ಧರಣೇಂದ್ರ ಕುರಕುರಿ,
ಹಿರಿಯ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next