Advertisement

16 ರಂದು ಕರಾವಳಿ ಪರಿಸರ ಸ್ಥಿತಿಗತಿ ವಿಚಾರ ಸಂಕಿರಣ

11:21 AM Feb 13, 2019 | |

ಶಿರಸಿ: ಸಂಕೀರ್ಣ ಸ್ಥಿತಿಯಲ್ಲಿರುವ ಕರಾವಳಿಯ ಅರಣ್ಯ, ಪರಿಸರ ಪರಿಸ್ಥಿತಿ, ಸವಾಲುಗಳು ಹಾಗೂ ಪರಿಹಾರದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಫೆ.16ರಂದು ಭಟ್ಕಳ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಮುಂಜಾನೆ 10:30ರಿಂದ ನಡೆಯಲಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹಾಗೂ ವೃಕ್ಷಲಕ್ಷ ಆಂದೋಲನದ ಮುಖ್ಯಸ್ಥ ಅನಂತ ಹೆಗಡೆ ಅಶೀಸರ, ಕರಾವಳಿ ಹಾಗೂ ಪಶ್ಚಿಮ ಘಟ್ಟದ ಪರಿಸರ ಸ್ಥಿತಿಗತಿ ಅತ್ಯಂತ ಸೂಕ್ಷ್ಮ ಹಾಗೂ ಸವಾಲಿನಿಂದ ಕೂಡಿದೆ. ಸಂರಕ್ಷಣೆಗೆ ಹಲವು ಕಾನೂನು ತೊಡಕುಗಳೂ ಇವೆ. ಪಶ್ಚಿಮ ಘಟ್ಟದ ನದಿ ಕಣಿವೆಗಳ ಉಳಿವಿಗೆ ಕರಾವಳಿ ರಕ್ಷಣೆ ಅಗತ್ಯ. ಅತಿಯಾದ ವಾಣಿಜ್ಯೀಕರಣದಿಂದ ಇಲ್ಲಿನ ಜೀವ ವೈವಿದ್ಯಕ್ಕೂ ಕುತ್ತು ಬಂದಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಅನೇಕ ಸಂಕಟಗಳೂ ಎದುರಾಗಿವೆ. ಜನ ಜಾಗೃತಿ ಆಗಬೇಕು ಎಂದರು.

ಕಾರವಾರದ ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌, ಭಟ್ಕಳದ ಶಿವಶಾಂತಿಕಾ ಸಾವಯವ ಪರಿವಾರ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿವಿ ಸಹಕಾರದಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ತಜ್ಞರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಗೋಷ್ಠಿ, ಸಂವಾದ: ಮುಂಜಾನೆ 10ಕ್ಕೆ ಶಾಸಕ ಸುನೀಲ ನಾಯ್ಕ ಉದ್ಘಾಟಿಸಲಿದ್ದು, ಜಿಲ್ಲಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಹೋರಾಟಗಾರ ಅನಂತ ಅಶೀಸರ ಪ್ರಾಸ್ತಾವಿಕ ಮಾತನಾಡಲಿದ್ದು, ಅತಿಥಿಗಳಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜಕುಮಾರ, ಅರಣ್ಯಾಧಿಕಾರಿ ಶ್ರೀಧರ, ವಿಜ್ಞಾನಿಗಳಾದ ಡಾ| ಸುಭಾಶ್ಚಂದ್ರನ್‌, ಕೇಶವ, ಮಂಜು, ಉಡುಪಿ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶಪ್ರಸಾದ ಪಾಂಡೇಲು, ಹೋರಾಟಗಾರ ಬಿ.ಎಚ್. ರಾಘವೇಂದ್ರ ಪಾಲ್ಗೊಳ್ಳುವರು.

ಪ್ರಥಮ ಗೋಷ್ಠಿ ಕರಾವಳಿ ಪರಿಸರ ಪರಿಸ್ಥಿತಿ ಕುರಿತು ನಡೆಯಲಿದ್ದು ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಅಧ್ಯಕ್ಷತೆ ವಹಿಸುವರು. ವಿಜ್ಞಾನಿಗಳಾದ ಡಾ| ಮಹಾಬಲೇಶ್ವರ, ಡಾ| ಪ್ರಕಾಶ ಮೇಸ್ತ, ಡಾ| ವಿ.ಎನ್‌. ನಾಯಕ, ಅಧಿಕಾರಿ ದಿನೇಶ ಕುಮಾರ ಮಾತನಾಡುವರು. ರಾಜ್ಯ ಪತ್ರಕರ್ತರ ಸಂಘದ ಸದಸ್ಯ ಜಿ.ಸುಬ್ರಾಯ ಭಟ್ಟ ಬಕ್ಕಳ, ಅಬ್ದುಲ್‌ ಜಬ್ಟಾರ ಉಪಸ್ಥಿತರಿರುವರು.

Advertisement

ಕೃಷಿ ತೋಟಗಾರಿಕೆಯಲ್ಲಿ ಕೀಟನಾಶಕಗಳ ದುರ್ಬಳಕೆ ಹಾಗೂ ತಡೆ, ಸಾವಯವ ಪ್ರಯೋಗದ ಕುರಿತು ಎರಡನೇ ಗೋಷ್ಠಿ ಅಧ್ಯಕ್ಷತೆಯನ್ನು ಪ್ರೊ| ರಘುನಾಥ ವಹಿಸುವರು. ವಿಜ್ಞಾನಿಗಳಾದ ಡಾ| ಜವರೇಗೌಡ, ಶ್ರೀಧರ ಹೆಬ್ಟಾರ, ಕಿಶನ್‌ ಬಲ್ಸೆ, ಈರಯ್ಯ ದೇವಾಡಿಗ ಮಾತನಾಡುವರು. ನಾಗರಾಜ್‌ ಬೇಂಗ್ರೆ, ನಾರಾಯಣ ಕೊಲ್ಲೆ ಪಾಲ್ಗೊಳ್ಳುವರು. ಮಧ್ಯಾಹ್ನ 3:30ಕ್ಕೆ ಮುಕ್ತ ಸಂವಾದದಲ್ಲಿ ಆರ್‌ಎಫ್‌ಒ ಶಂಕರ ಗೌಡ, ಪತ್ರಕರ್ತರಾದ ಕೃಷ್ಣಮೂರ್ತಿ ಹೆಬ್ಟಾರ, ರಘುನಂದನ ಭಟ್ಟ, ನರಸಿಂಹ ಸಾತೊಡ್ಡಿ, ಭಾಸ್ಕರ ನಾಯಕ, ಕದಂಬದ ವಿಶ್ವೇಶ್ವರ ಭಟ್ಟ ಕೋಟೆಮನೆ, ಗ್ರಾಮ ಅರಣ್ಯ ಸಮಿತಿಯ ರಾಮಾ ನಾಯಕ, ಕಿಸಾನ್‌ ಸಂಘದ ನಾರಾಯಣ ಭಟ್ಟ, ವನವಾಸಿಯ ಸೋಮು ಗೌಡ, ರವೀಂದ್ರ ಶೆಟ್ಟಿ, ಶಾಂತಾರಾಂ ಸಿದ್ದಿ, ರಮೇಶ ಖಾರ್ವಿ, ಎನ್‌.ಜಿ. ಸತ್ಯನಾರಾಯಣ ಸುಳ್ಯ, ಸತ್ಯನಾರಾಯಣ ಉಡುಪ, ಗಣಪತಿ ಕೆ., ಪಾಲ್ಗೊಳ್ಳುವರು.

ಸಮಾರೋಪ ಸಮಾರಂಭ ಸಂಜೆ 4ಕ್ಕೆ ಸ್ನೇಹಕುಂಜದ ಅಧ್ಯಕ್ಷ ಎಂ.ಆರ್‌.ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅತಿಥಿಗಳಾಗಿ ಮಾಜಿ ಶಾಸಕ ಮಂಕಾಳು ವೈದ್ಯ, ಪತ್ರಕರ್ತ ಅಶೋಕ ಹಾಸ್ಯಗಾರ, ಅರಣ್ಯಾಧಿಕಾರಿ ಬಾಲಚಂದ್ರ, ಶಿವಾನಿ ಶಾಂತಾರಾಮ ಭಟ್ಕಳ, ಡಾ| ಜಗದೀಶ, ವಿನೋದ ಪಟಗಾರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, ನಿರ್ಣಯ ಅಂಗೀಕಾರ ಕೂಡ ಇದೆ ಎಂದು ವಿವರಿಸಿದರು.

ಪತ್ರಕರ್ತರ ಸಂಘ ಕೂಡ ಪರಿಸರ ಸಂರಕ್ಷಣೆಗೆ ಕೈ ಜೋಡಿಸುತ್ತಿರುವುದು ಅಭಿನಂದನೀಯ.
•ಅನಂತ ಅಶೀಸರ, ಹೋರಾಟಗಾರ

ಪತ್ರಕರ್ತರು ಪರಿಸರದಿಂದ ಹೊರತಾಗಿಲ್ಲ. ಪರಿಸರ ಸಂರಕ್ಷಣೆ ಕೂಡ ನಮ್ಮ ಜವಾಬ್ದಾರಿ. ಈ ಅರಿವಿನ ದೃಷ್ಟಿಯಲ್ಲಿ ಕಾರ್ಯಕ್ರಮ ಆಯೋಜನೆ.
•ರಾಧಾಕೃಷ್ಣ ಭಟ್ಟ ಭಟ್ಕಳ ಅಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next