Advertisement

ಯಕ್ಪಗಾನದಿಂದ ಉನ್ನತಿ: ಜೋಶಿ

11:52 AM Mar 11, 2019 | |

ಶಿರಸಿ: ತಾಳಮದ್ದಲೆ ಹಾಗೂ ಯಕ್ಷಗಾನದಿಂದ ವ್ಯಕ್ತಿಯ ಬದುಕಿನ ಉನ್ನತಿಗೂ ನೆರವು ಆಗುತ್ತದೆ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ್‌ ಜೋಶಿ ಸೋಂದಾ ಪ್ರತಿಪಾದಿಸಿದರು. ರವಿವಾರ ಅವರು ನಗರದ ಯೋಗ ಮಂದಿರದಲ್ಲಿ ಪ್ರಬೋಧ ಯಕ್ಷ ಬಳಗ, ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಯಕ್ಷಗಾನ ಅಕಾಡೆಮಿ ಹಮ್ಮಿಕೊಂಡ ಅರ್ಥಾಂತರಂಗ 12 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ನಮ್ಮ ಕಲೆಗಳು ಸಂಸ್ಕೃತಿಯ ಜೀವಾಳ. ನಮ್ಮ ಕಲೆಯ ಆಸ್ವಾದಿಸುತ್ತಲೇ ಅನೇಕರು ಸಾಧನೆ ಮಾಡಿದವರೂ ಇದ್ದಾರೆ ಎಂದ ಅವರು, ಕಲೆ ಅನೇಕ ಕೌಶಲ ಕಲಿಸುತ್ತದೆ ಎಂದರು. ತಾಳಮದ್ದಲೆಯಲ್ಲಿ ಆಡುವ ಶೈಲಿಯಲ್ಲೇ ಪ್ರಾದೇಶಿಕತೆ ಗುರುತಿಸುವವರೂ ಇದ್ದಾರೆ. ಸಂಸ್ಕೃತಿ ಹಾಗೂ ಕಲೆಯಿಂದ ಉನ್ನತಿ ಸಾಧ್ಯ ಎಂದ ಅವರು, ಇರುವ ಮಕ್ಕಳ ಸಂಖ್ಯೆಯೇ ಹೆಚ್ಚು. ಮಕ್ಕಳನ್ನು ಮುದ್ದಿನಿಂದ ಬೆಳೆಸಿದಾಗ ಅವರಿಗೆ ನಿರ್ಧಾರ ಹಾಗೂ ಅಭಿಪ್ರಾಯ ತೆಗೆದುಕೊಳ್ಳುವುದೇ ತಪ್ಪುತ್ತಿದೆ. ನಾವು ಕಷ್ಟ ಬಂದರೆ ಸಹಿಸಿಕೊಳ್ಳುತ್ತಿದ್ದೆವು ಎಂದರು. ತಾಳಮದ್ದಲೆ ಹಾಗೂ ಯಕ್ಷಗಾನ ಕೌಶಲ ಕಲಿಸುತ್ತದೆ. ಅಭಿಪ್ರಾಯ ವ್ಯಕ್ತಪಡಿಸುವ ರೀತಿ ತಾಳಮದ್ದಲೆ ಕಲಿಸುತ್ತದೆ. ವೃತ್ತಿ ಸಂದರ್ಶನದಲ್ಲಿ ಮಾತನಾಡುವ ಸ್ಪಷ್ಟತೆ ತೋರುತ್ತದೆ ಎಂದ ಅವರು, ಕಲಾ ಪ್ರದರ್ಶನಕ್ಕೆ ಅವಕಾಶ ಹಾಗೂ ಅಭ್ಯಾಸ ಎರಡೂ ಈ ಭಾಗದಲ್ಲಿ ಕಡಿಮೆ ಆಗಿದೆ.

ನಾಲ್ಕೈದು ಅವಕಾಶ ಸಿಕ್ಕರೆ ದೊಡ್ಡ ಕಲಾವಿದರಂತೆ ಓಡಾಡಿದವರೂ ಇದ್ದಾರೆ ಎಂದರು. ನ್ಯಾಯವಾದಿ ಉಷಾ ಐನಕೈ, ಮಕ್ಕಳಿಗೆ ಮೊಬೈಲ್‌ ವ್ಯಾಮೋಹ ಅಪಾಯ ಸೃಷ್ಟಿಸುತ್ತಿದೆ ಎಂದರು. ಯೋಗ ಮಂದಿರದ ಮಾಜಿ ಅಧ್ಯಕ್ಷ ಡಿ.ಜಿ. ಹಗಡೆ ಭೈರಿ, ಅರ್ಥಧಾರಿ ಗೋವಿಂದ ಭಟ್ಟ ಕೆ, ತಾಳಮದ್ದಲೆ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್‌, ಹರೀಶ ಬೋಳಂತೂರು ಇತರರು ಇದ್ದರು. ಮಂಜುನಾಥ ಗೊರಮನೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀನಿವಾಸ ಮತ್ತಿಘಟ್ಟ ನಿರ್ವಹಿಸಿದರು.

ಕಲಿಕೆಗೆ ಮನವೊಡ್ಡಿ
ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವವರು ಕಲಿಕೆಗೆ ಮನವೊಡ್ಡಬೇಕು. ಸಹಭಾಗಿತ್ವದಲ್ಲಿದ್ದ ಹೆಸರಿನ ಸಂಘಟನೆಯಿಂದ ತಲಾ ಇಬ್ಬರು ಬಂದಿದ್ದರೂ ಸಭಾಂಗಣ ತುಂಬುತ್ತಿತ್ತು.
ನಾಗರಾಜ್‌ ಜೋಶಿ
ಸೋಂದಾ, ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next