Advertisement

ಹೆಚ್ಚುತ್ತಿದೆ ಅಡಿಕೆ ಆವಕ: ಅಂತರದಲ್ಲಿ ವಹಿವಾಟು

04:58 PM May 08, 2020 | Naveen |

ಶಿರಸಿ: ಇಲ್ಲಿನ ಎಪಿಎಂಸಿಯಲ್ಲಿ ಕಳೆದೊಂದು ವಾರದಿಂದ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಅಡಿಕೆ ಮಾರಾಟಕ್ಕೆ ಸಾವಿರಾರು ಕ್ವಿಂಟಾಲ್‌ ಬರುತ್ತಿದೆ.

Advertisement

ಪ್ರತಿದಿನ ಮಧ್ಯಾಹ್ನ 2ರ ವೇಳೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿದ್ದು, ಕಳೆದ ಬುಧವಾರಕ್ಕೆ ಹೋಲಿಸಿದರೆ ಗುರುವಾರ 500 ರೂ. ಕಡಿಮೆ ಆಗುತ್ತಿದೆ. ಕೆಂಪಡಿಕೆ 39-40 ಸಾವಿರ ಕಾಣುತ್ತಿದ್ದು, ಈಗ 35-38 ಸಾವಿರ ರೂ. ಸರಾಸರಿ ಆಗುತ್ತಿದೆ. ದರ ಇಳಿಕೆ ಆಗುತ್ತಿರುವುದರಿಂದ ರೈತರೂ ವಿಶೇಷವಾಗಿ ಚಾಲಿ ಅಡಿಕೆಯನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಇದರಿಂದ ಮುಂಜಾನೆಯಿಂದ ಹಳ್ಳಿಗಳಿಂದ ಅಡಿಕೆ ವಾಹನಗಳ ಮೇಲೆ ಮಾರುಕಟ್ಟೆಗೆ ತರುವ ಕೆಲಸಗಳೂ ನಡೆದಿವೆ.

ಈ ಮಧ್ಯೆ ನಗರದಲ್ಲಿ ಅಂತರ ಕಾಯ್ದುಕೊಂಡೇ ವಹಿವಾಟು ನಡೆಸುವ ಪ್ರಕ್ರಿಯೆ ಕಾಣುತ್ತಿದೆ. ಮಾಸ್ಕ್ ಧರಿಸಿ ರೈತರು ಮಾರುಕಟ್ಟೆಗೆ ಬಂದರೂ ಸೆನಿಟೈಸರ್‌ ಬಳಸಲೂ ಸಹಕಾರಿಗಳು ಅವಕಾಶ ಮಾಡಿದ್ದಾರೆ. ವರ್ತಕರು, ಟಿಎಂಎಸ್‌, ಟಿಎಸ್‌ಎಸ್‌, ಕ್ಯಾಂಮ್ಕೋ ಅಡಿಕೆ ಖರೀದಿ ಮಾಡುತ್ತಿವೆ. ಆದರೆ, ಉತ್ತರ ಪ್ರದೇಶ ಹೊರತುಪಡಿಸಿ ರಾಜಸ್ತಾನ, ಮಹಾರಾಷ್ಟ್ರಗಳಲ್ಲಿ ಅಡಿಕೆ ಖರೀದಿ ಇನ್ನೇನು ಆಗಬೇಕಿದೆ. ಈ ಕಾರಣದಿಂದ ಅಲ್ಲೀ ತನಕ ದರ ಸ್ಥಿರತೆ ಕೂಡ ಬರುವುದು ಕಷ್ಟ ಎನ್ನಲಾಗಿದೆ. ಗುರುವಾರ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಟೆಂಡರ್‌ ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದರು. ರೈತರು ಕೂಡ ಒಮ್ಮೆಲೆ ಬೆಳೆ ಮಾರಾಟ ಮಾಡಬಾರದು, ಆತಂಕ ಬೇಡ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದಷ್ಟು ಪೇಟೆ ತಿರುಗಾಟ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next