Advertisement

14 ಗ್ರಾಪಂಗೆ 11 ತಾಪಂ ಕ್ಷೇತ್ರ ಲಭ್ಯ

12:54 PM Mar 30, 2021 | Team Udayavani |

ಶಿರಹಟ್ಟಿ: ತಾಲೂಕಿನ ಲಕ್ಷ್ಮೇಶ್ವರ ಪಟ್ಟಣವನ್ನು ತಾಲೂಕುಕೇಂದ್ರವೆಂದು ಪರಿಗಣಿಸಿದ ಮೇಲೆ ಶಿರಹಟ್ಟಿ ತಾಲೂಕಿನಲ್ಲಿಏಳು ತಾಲೂಕು ಪಂಚಾಯತಿ ಕ್ಷೇತ್ರಗಳು ಉಳಿದು, 8 ಲಕ್ಷ್ಮೇಶ್ವರ ತಾಲೂಕಿಗೆ ಸೇರಲ್ಪಟ್ಟಿದ್ದವು. ಚುನಾವಣಾ ಆಯೋಗತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ಪುನರ್ವಿಂಗಡಣೆ ಮಾಡಿದ ನಂತರ 11 ತಾಲೂಕು ಪಂಚಾಯತಿ ಕ್ಷೇತ್ರ ಗುರುತಿಸಿದೆ.

Advertisement

ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು ತಾಪಂ 11ಕ್ಷೇತ್ರಗಳು ಮತ್ತು ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಗುರುತಿಸಲ್ಪಟ್ಟಿವೆ. ಮರು ವಿಂಗಡಣೆ ಮಾರ್ಗಸೂಚಿಯನ್ವಯ 11 ಕ್ಷೇತ್ರಗಳು ಮರುವಿಂಗಡಣೆ ಆಗಿದ್ದರಿಂದ ತಾಲೂಕು ಸಮಗ್ರ ರೀತಿಯಲ್ಲಿಅಭಿವೃದ್ಧಿ ಹೊಂದುವುದರಲ್ಲಿಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅಭಿವೃದ್ಧಿಗೆ ಪೂರಕ: ಶಿರಹಟ್ಟಿ ತಾಲೂಕು ವಿಶಾಲವಾಗಿದ್ದರಿಂದಮತ್ತು ಒಂದು ಕ್ಷೇತ್ರಕ್ಕೆ ಹತ್ತಾರು ಹಳ್ಳಿಗಳು ಸೇರಲ್ಪಟ್ಟಿದ್ದರಿಂದಎಲ್ಲ ಹಳ್ಳಿಗಳಿಗೆ ಸಮಾನವಾಗಿ ಅನುದಾನದ ಹಂಚಿಕೆಮಾಡಿಕೊಡುವಲ್ಲಿ ವ್ಯತ್ಯಾಸಗಳಾಗುತ್ತಿದ್ದವು. ಆದರೆ,ಈ ವಿಂಗಡಣೆಯಿಂದ ತಾಪಂ ಕ್ಷೇತ್ರಗಳ ಸಂಖ್ಯೆಹೆಚ್ಚಾಗಿರುವುದರಿಂದ ಎಲ್ಲ ಹಳ್ಳಿಗಳನ್ನೂ ಪರಿಗಣಿಸಲು ಸಾಧ್ಯಆಗಬಹುದಾಗಿದೆ. ಇದರಿಂದ ಮತಕ್ಷೇತ್ರದ ಜನಪ್ರತಿನಿಧಿ ಗಳುಸಾರ್ವಜನಿಕರ ಸಂಪರ್ಕಕ್ಕೆ ಹೆಚ್ಚು ಲಭ್ಯವಾಗುವ ಸಾಧ್ಯತೆಹೆಚ್ಚಾಗಿದೆ. ಅಲ್ಲದೇ, ಅಭಿವೃದ್ಧಿಗೂ ಪೂರಕವಾಗಲಿದೆ ಎಂಬ ಲೆಕ್ಕಾಚಾರವಿದೆ.

ತಾಪಂ ಕ್ಷೇತ್ರಗಳು-ಗ್ರಾಮಗಳು: ಮಾಗಡಿ ತಾಪಂ ಕ್ಷೇತ್ರಕ್ಕೆ ಮಾಗಡಿ, ಹೊಳಲಾಪುರ, ಬಸ್ಸಾಪುರ, ಗ್ರಾಮಗಳು, ಕಡಕೋಳತಾಪಂ ಕ್ಷೇತ್ರಕ್ಕೆ ಕಡಕೋಳ, ಹೊಸಳ್ಳಿ, ಜೆಲ್ಲಿಗೇರಿ, ಮಾಚೇನಹಳ್ಳಿ,ಬಾವನೂರ, ತೆಗ್ಗಿನಬಾವನೂರ, ನವೆಬಾವನೂರ ಗ್ರಾಮಗಳು,ಛಬ್ಬಿ ತಾಪಂ ಕ್ಷೇತ್ರಕ್ಕೆ ಛಬ್ಬಿ, ವರವಿ, ಗುಡ್ಡದಪುರ, ಮಜ್ಜೂರ, ಶಿವಾಜಿನಗರ, ಕುಸಲಾಪುರ ಗ್ರಾಮಗಳು, ಕೊಂಚಿಗೇರಿ ತಾಪಂ ಕ್ಷೇತ್ರಕ್ಕೆ ಕೊಂಚಿಗೇರಿ, ಕೊಕ್ಕರಗುಂದಿ, ಬಿಜ್ಜೂರ, ಚಿಕ್ಕಸವಣೂರ, ಬೂದಿಹಾಳ ಗ್ರಾಮಗಳು, ರಣತೂರ ತಾಪಂ ಕ್ಷೇತ್ರಕ್ಕೆ ರಣತೂರ, ದೇವಿಹಾಳ ಗ್ರಾಮಗಳು ಮಾತ್ರ ಬರುತ್ತವೆ.

ಬನ್ನಿಕೊಪ್ಪ ತಾಪಂ ಕ್ಷೇತ್ರಕ್ಕೆ ಬನ್ನಿಕೊಪ್ಪ, ಸುಗ್ನಳ್ಳಿ, ಹಡಗಲಿಗ್ರಾಮಗಳು. ಬೆಳ್ಳಟ್ಟಿ ತಾಪಂ ಕ್ಷೇತ್ರಕ್ಕೆ ಬೆಳ್ಳಟ್ಟಿ ಮತ್ತುನಾರಾಯಣ ಪುರ ಗ್ರಾಮಗಳು ಮಾತ್ರ ಬರುತ್ತವೆ. ಹೆಬ್ಟಾಳತಾಪಂ ಕ್ಷೇತ್ರಕ್ಕೆ ಹೆಬ್ಟಾಳ ಚೌಡಾಳ, ತೊಳಲಿ ಕಲ್ಲಾಗನೂರ,ಕನಕವಾಡ. ಇಟಗಿ ತಾಪಂ ಕ್ಷೇತ್ರಕ್ಕೆ ಸಾಸರವಾಡ ಹಾಗೂ ಇಟಗಿ ಗ್ರಾಮಗಳು ಒಳಗೊಂಡಿವೆ. ಸೇವಾನಗರ ತಾಪಂ ಕ್ಷೇತ್ರಕ್ಕೆವಡವಿ ಹೊಸೂರ, ಅಲಗಿಲವಾಡ, ಬೆಳಗಟ್ಟಿ, ತಾರೀಕೊಪ್ಪ,ಸೇವಾನಗರ ಹಾಗೂ ಕೆರಳ್ಳಿ ಗ್ರಾಮಗಳು. ಕೋಗನೂರ ತಾಪಂಕ್ಷೇತ್ರಕ್ಕೆ ಗೋವುನಕೊಪ್ಪ ಕೋಗನೂರ, ತಂಗೋಡ, ಅಂಕಲಿ, ನಾಗರಮೊಡವು, ಗ್ರಾಮಗಳನ್ನು ಒಳಗೊಂಡಿವೆ.

Advertisement

 

-ಪ್ರಕಾಶ ಶಿ. ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next