Advertisement

ಭರದಿಂದ ಸಾಗಿದೆ ಇಂದಿರಾ ಕ್ಯಾಂಟೀನ್‌ ಕಾಮಗಾರಿ

04:19 PM Nov 16, 2018 | |

ಶಿರಹಟ್ಟಿ: ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆ ತಡವಾದರೂ ಆರಂಭವಾಗಿರುವುದು ಈ ಭಾಗದ ಬಡಜನತೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸದ್ಯ ಎಪಿಎಂಸಿ ಜಾಗೆಯಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಡ ಕಾರ್ಯ ಭರದಿಂದ ಸಾಗಿದೆ.

Advertisement

ಬಡ ಮತ್ತು ಮಧ್ಯಮ ವರ್ಗದ ಜನರ ಹಸಿವು ನೀಗಿಸಲೆಂದೇ ಈ ಮಹತ್ತರ ಯೋಜನೆಯನ್ನು ಹಿಂದಿನ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರಕಾರ ಜಾರಿಗೊಳಿಸಿತ್ತು. ಆರಂಭದಲ್ಲಿ ಬೆಂಗಳೂರನಲ್ಲಿ ಆರಂಭಿಸಲ್ಪಟ್ಟ ಕ್ಯಾಂಟೀನ್‌ ಗಳು ನಂತರದ ದಿನಗಳಲ್ಲಿ ಅಧಿಕಾರಿಗಳ ನಿರುತ್ಸಾಹವೋ ಅಥವಾ ಹಣದ ಕೊರತೆಯಿಂದಾಗಿಯೋ ಯೋಜನೆಯ ಕಾರ್ಯ ಕುಂಟುತ್ತಾ ಸಾಗಿತ್ತು. ಇಂತಹ ಬಡವರ ಪರ ಯೋಜನೆಗಳನ್ನು ಈಗಿನ ಸಮ್ಮಿಶ್ರ ಸರಕಾರ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ. ತಾಲೂಕು ಕೇಂದ್ರವಾಗಿರುವ ಶಿರಹಟ್ಟಿಗೆ ಬೆಳಗಾದರೆ ತಮ್ಮ ನಿತ್ಯದ ಕಚೇರಿ ಕೆಲಸಗಳಿಗೆ ತಾಲೂಕು ಕಚೇರಿಗೆ ಅಗಮಿಸುವ ಸುತ್ತಲಿನ ಗ್ರಾಮಸ್ಥರಿಗೆ ಹಾಗೂ ಪಟ್ಟಣದ ವಾಸಿಗಳಿಗೆ ಅನುಕೂಲವಾಗುವಂತೆ ತಹಶೀಲ್ದಾರ್‌ ಕಚೇರಿ ಹತ್ತಿರ ಇರುವ ಎಪಿಎಂಸಿ ಜಾಗೆಯಲ್ಲಿ ಇಂದಿರಾ ಕ್ಯಾಂಟೀನ್‌ ಕೆಲಸ ಪ್ರಾರಂಭವಾಗಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಕರವೇ ತಾಲೂಕು ಅಧ್ಯಕ್ಷ ರಫೀಕ ಕರೇಮನಿ, ಕುಂದು ಕೊರತೆ ನಿವಾರಣೆ ಅಧ್ಯಕ್ಷ ಅಕ್ಬರ ಯಾದಗೇರಿ ಮಾತನಾಡಿ, ಇಂದಿರಾ ಕ್ಯಾಂಟೀನ್‌ ಕಟ್ಟಡ ಕಾರ್ಯ ಪ್ರಾರಂಭವಾಗಿರುವುದು ಸ್ವಾಗತಾರ್ಹ. ಕ್ಯಾಂಟೀನ್‌ ಮಂಜೂರಾಗಿ ವರ್ಷಗಳಾಗಿದ್ದರು ಕಟ್ಟಡ ಕಾರ್ಯ ಪ್ರಾರಂಭವಾಗಿರಲಿಲ್ಲ. ಅನೇಕ ಬಾರಿ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ತಡವಾದರು ಕಾರ್ಯ ಪ್ರಾರಂಭವಾಗಿದೆ. ಕೆಲ ಜನಪ್ರತಿನಿಧಿಗಳು ಇದನ್ನು ಶಿರಹಟ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲು ಪ್ರಯತ್ನಿಸಿದ್ದರು ಕರವೇ ಸದಸ್ಯರ ನಿರಂತರ ಹೋರಾಟದ ಫಲವಾಗಿ ಇಂದು ಕಾರ್ಯಾರಂಭವಾಗಿದೆ. ಇದರಿಂದ ಪಟ್ಟಣದಲ್ಲಿರುವ ಸರಕಾರಿ ಕಚೇರಿಗೆಳಿಗೆ ಆಗಮಿಸುವ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next