Advertisement

ಶಿರಾಡಿ ಘಾಟಿ ಸಂಚಾರಕ್ಕೆ ಮುಕ್ತ : ಘನ ವಾಹನಗಳಿಗೆ ಪ್ರವೇಶವಿಲ್ಲ

09:33 PM Jul 15, 2018 | Karthik A |

ನೆಲ್ಯಾಡಿ: ನೂತನವಾಗಿ ಕಾಂಕ್ರೀಟಿಕರಣಗೊಂಡ ಶಿರಾಡಿ ಘಾಟಿ ರಸ್ತೆಯು ಅಧಿಕೃತವಾಗಿ ಆದಿತ್ಯವಾರದಂದು ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ ಕಾಮಗಾರಿಗೆ ಅಂತಿಮ ರೂಪ ನೀಡಲು ಇನ್ನೂ ಬಾಕಿಯಿರುವುದರಿಂದ ಸದ್ಯಕ್ಕೆ ಬಸ್ಸುಗಳೂ ಸೇರಿದಂತೆ ಘನವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ. ಈ ಭಾಗದಲ್ಲಿ ಬರುವ ಅಪಾಯಕಾರಿ ಪ್ರದೇಶಗಳಲ್ಲಿನ (Danger Zone) ಕಾಮಗಾರಿ ಇನ್ನೂ ಬಾಕಿ ಇರುವ ಕಾರಣದಿಂದ ಜಿಲ್ಲಾಡಳಿತವು ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

Advertisement

ರಸ್ತೆ ಉದ್ಘಾಟನೆಯ ಬಳಿಕ ಇಂದು ಸಂಜೆ ಶಿರಾಡಿಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿಯವರು ಮತ್ತು ಪೋಲೀಸ್ ವರಿಷ್ಠಾಧಿಕಾರಿಯವರ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಸದ್ಯಕ್ಕೆ ಸಂಚಾರಕ್ಕೆ ಅನುವುಗೊಂಡಿರುವ ರಸ್ತೆಯಲ್ಲಿ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್ಸುಗಳು, ಕಾರುಗಳು ಮತ್ತು ಟೆಂಪೋ ಟ್ರಾವೆಲರ್ ಗಳ ಸಂಚಾರಕ್ಕೆ ಮಾತ್ರವೇ ಅನುಮತಿ ನೀಡಲಾಗಿದೆ.


ಇನ್ನು 15 ದಿನಗಳ ಒಳಗಾಗಿ ಬಾಕಿಯಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ತಿಗೊಳಿಸುವಂತೆ ಗುತ್ತಿಗೆದಾರ ಕಂಪೆನಿಗೆ ಇದೇ ಸಂದರ್ಭದಲ್ಲಿ ಆದೇಶ ನೀಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಹೀಗಾಗಿ ಶಿರಾಡಿ ಘಾಟಿ ರಸ್ತೆಯಲ್ಲಿ ಆಗಸ್ಟ್ ಬಳಿಕವಷ್ಟೇ ಪೂರ್ಣಪ್ರಮಾಣದ ವಾಹನ ಸಂಚಾರ ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next