Advertisement

ಅಭ್ಯರ್ಥಿಗಳ ಹಣೆಬರಹ ಬರೆದ ಮತದಾರ ಪ್ರಭು

04:39 PM Nov 04, 2020 | Suhan S |

ತುಮಕೂರು: ಬಾರಿ ಕುತೂಹಲ ಕೆರಳಿಸಿರುವ ಕೋಟೆ ನಾಡಿನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಘಟನುಘಟಿ ನಾಯಕರ ಹಣೆ ಬರಹವನ್ನು ಮತದಾರ ಪ್ರಭು ಮಂಗಳವಾರ ಯಾವ ರೀತಿ ಬರೆದಿದ್ದಾನೆ ಎನ್ನುವುದು ಕುತೂಹಲ ಕೆರಳಿಸಿದೆ.

Advertisement

ರಾಜ್ಯದ ಜನರ ಗಮನ ಸೆಳೆದಿರುವ ಶಿರಾ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ವಿಧಾನ ಸಭೆ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಸೇರಿಂತೆ ಮೂರು ಪಕ್ಷಗಳ ಘಟಾನುಘಟಿ ನಾಯಕರು ಕ್ಷೇತ್ರಕ್ಕೆ ಬಂದು ರಣಕಹಳೆ ಮೊಳಗಿಸಿದ್ದರು.

ಮತದಾರರ ಉತ್ಸಾಹ: ಮದಲೂರು ಕೆರೆಗೆ ನೀರು ಹರಿಸುವುದೇ ಪ್ರಮುಖ ಅಸ್ತ್ರವಾಗಿಸಿ ಕೊಂಡು ನಡೆಸಿರುವ ಈ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ 2,15,694 ಮತದಾರರಲ್ಲಿ ಎಷ್ಟು ಮತದಾರರು ಮತಕೇಂದ್ರಗಳಿಗೆ ಬಂದು ಮತ ಚಲಾಯಿಸಿದ್ದಾರೆ. ಬೆಳಗ್ಗೆಯಿಂದಲೂ ಮತದಾರರು ಉತ್ಸುಕದಿಂದಲೇ ಮತದಾನ ಮಾಡಿದ್ದು, ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವ ಉತ್ಸುಕತೆ ಕಂಡು ಬರುತ್ತಿತ್ತು.

ಹಣೆ ಬರಹ ಬರೆದ ಮತದಾರ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್‌ನ ಬಿ.ಸತ್ಯನಾರಾಯಣ್‌ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಹಿನೆಲೆಯಲ್ಲಿ ಕಳೆದ ಬಾರಿ ಟಿ.ಬಿ.ಜಯಚಂದ್ರ, ಮತ್ತೆ ತಮ್ಮ ಅದೃಷ್ಟ ಪರೀಕ್ಷಿಸಿ ಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಪ್ರಮುಖ ಸ್ಟಾರ್‌ ಅಭ್ಯರ್ಥಿಯಾಗಿರುವ ಇವರ ಹಣೆ ಬರಹದ ಜೊತೆಗೆ ರಾಜಕೀಯಕ್ಕೆ ಹೊಸಮುಖವಾಗಿ ಧುಮುಕಿರುವ ಬಿಜೆಪಿಯ ಯುವ ನಾಯಕ ಡಾ.ರಾಜೇಶ್‌ ಗೌಡ ಮತ್ತು ದಿ.ಬಿ.ಸತ್ಯನಾಯಣ್‌ ಅವರ ಪತ್ನಿ ಅಮ್ಮಾಜಮ್ಮ ಅವರ ಹಣೆಬರಹವನ್ನು ಮತದಾರ ಪ್ರಭು ಮತಯಂತ್ರಗಳಲ್ಲಿ ಬರೆದರು ಬಿಟ್ಟಿದ್ದಾರೆ.

ಮತದಾರರು ಮತ ಕೇಂದ್ರಗಳಿಗೆ ಬಂದು ತಮಗೆ ಇಷ್ಟವಾದ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಮತದಾನ ಎಲ್ಲೆಡೆ ಶಾಂತಿಯುತವಾಗಿ ನಡೆಯಲು ಚುನಾವಣಾ ಆಯೋಗದ ನೀತಿ ಸಂಹಿತೆ ಹೆಚ್ಚು ಕೆಲಸ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಕೋವಿಡ್ ಮಾರ್ಗಸೂಚಿಗಳನ್ನು ಜಿಲ್ಲಾಡಳಿತ ಬಹಳ ಕಟ್ಟು ನಿಟ್ಟಾಗಿ ಪಾಲನೆ ಮಾಡಿದೆ, ಕೋವಿಡ್‌ ನಿಯಮ ಪಾಲಿಸಿ ಕೊಂಡೇ ಮತದಾರರು ಮತಗಟ್ಟೆಗಳಿಗೆ ಬಂದು ಅಭ್ಯರ್ಥಿಗಳಿಗೆ ಮತದಾನ ಮಾಡಿದ್ದಾರೆ.

Advertisement

ಈ ಬಾರಿ ಈ ಕೋಟೆ ನಾಡಿನ ರಾಜ ಯಾರಾಗುತ್ತಾರೆ? ಈ ಕ್ಷೇತ್ರಗಳಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿದು ಶಾಸನ ಸಭೆಗೆ ಹೋಗುತ್ತಾರೆ ಎನ್ನುವುದು ನ.10 ರಂದು ತಿಳಿದು ಬರಲಿದೆ.

 

ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next