Advertisement

ಪಣಂಬೂರು: ಹಡಗಿಗೆ ಕೇರಳ ನೋಂದಣಿಯ ಮೀನುಗಾರಿಕಾ ದೋಣಿ ಡಿಕ್ಕಿ: ಮೂವರು ಸಾವು, 9 ಮಂದಿ ನಾಪತ್ತೆ

07:26 PM Apr 14, 2021 | Team Udayavani |

ಪಣಂಬೂರು : ನವಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರ ಸಮುದ್ರದಲ್ಲಿ ಎ.13ರಂದು ನಸುಕಿನ ವೇಳೆ ನಡೆದ ದೊಡ್ಡ ದುರಂತವೊಂದರಲ್ಲಿ ನವೀ ಮುಂಬೈ ಕಡೆಗೆ ಕಂಟೈನರ್ ಸಾಗಾಟ ನಡೆಸುತ್ತಿದ್ದ ಸಿಂಗಾಪುರ ಧ್ವಜ ಹೊಂದಿದ ಹಡಗೊಂದು ಕೇರಳ ನೋಂದಣಿ ಹೊಂದಿದ್ದ ಮೀನುಗಾರಿಕಾ ದೋಣಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, 9 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.

Advertisement

ಪಶ್ಚಿಮ ಬಂಗಾಳ ಮೂಲದ ಸುನಿಲ್ ದಾಸ್ ಮತ್ತು ತಮಿಳ್ನಾಡಿನ ವೆಲು ಮುರುಗನ್ ರಾಮಲಿಂಗನ್ ಎಂಬವರನ್ನು ರಕ್ಷಿಸಲಾಗಿದೆ. ಮೃತರಲ್ಲಿ ಪೈಕಿ ಮಾಣಿಕ್ಯದಾಸ್ ಮತ್ತು ಅಲೆಗ್ಸಾಂಡರ್ ಎಂಬವರ ಗುರುತು ಹಿಡಿಯಲಾಗಿದ್ದು,ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.

ತಮಿಳುನಾಡಿನ ರಾಮನಾಥಪುರದ ಪಳನಿ, ಪಾಲಮುರುಗನ್, ಮಾಣಿಕ್ಯವೇಣು, ಪಶ್ಚಿಮ ಬಂಗಾಳದ ತೆಂನ್ಸನ್ ಎಂದು ತಿಳಿದು ಬಂದಿದ್ದು ಉಳಿದವರ ಮಾಹಿತಿ ಕಲೆ ಹಾಕಲಾಗುತ್ತಿದೆ.

ರಭಾ ಹೆಸರಿನ ಮೀನುಗಾರಿಕಾ ಬೋಟ್ ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್ ಬಂದರಿನಿಂದಎ.11ರಂದು ಆಳ ಸಮುದ್ರ ಮೀನುಗಾರಿಕೆಗೆ ಹೊರಟಿತ್ತು. ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು.

ಇದನ್ನೂ ಓದಿ :ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತ: ಸಿಡಿಲು ಬಡಿದು ಮಹಿಳೆ ಸಾವು

Advertisement

ಘಟನೆ ಮಾಹಿತಿ ಪಡೆದ ತಕ್ಷಣ ಇಂಡಿಯನ್ ಕೋಸ್ಟ್ ಗಾರ್ಡ್ ತನ್ನ ಪಡೆಗಳನ್ನು ಕಾರ್ಯಾಚರಣೆಗೆ ಇಳಿಸಿದ್ದು,ನೌಕಾ ಪಡೆಯ ತಿಲ್ಲಂಗ್ಚಾಂಗ್, ಕಲ್ಪೆನಿ ಹಡುಗಳು, ಸುಭದ್ರಾ ಹಡಗುಗಳೊಂದಿಗೆ ತಜ್ಞ ಮುಳುಗಾರರು, ಡಾನ್ಛ್ಯರ್ ವಿಮಾನವನ್ನು ಶೋಧಕ್ಕಾಗಿ ದುರಂತಕ್ಕೀಡಾದ ಪ್ರದೇಶಕ್ಕೆ ಕಳಿಸಿತ್ತು. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.

ಕರಾವಳಿ ಕಾವಲು ಪಡೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next