Advertisement

ಕೋವಿಡ್ ಕಳವಳ: ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಸೀಲ್ ಡೌನ್

11:05 AM Jun 01, 2020 | keerthan |

ಶಿವಮೊಗ್ಗ: ಇಲ್ಲಿನ ಆರ್ ಎಎಸ್ ಐ ಅವರಿಗೆ ರವಿವಾರ ಕೋವಿಡ್-19 ಸೋಂಕು ದೃಢವಾಗಿದ್ದು, ಅವರ ಪುತ್ರಿ ಜಯನಗರ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

Advertisement

ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಅಳವಡಿಸಿ ಸೀಲ್ ಡೌನ್‌ ಮಾಡಲಾಗಿದ್ದು, ಇಡೀ ಪೊಲೀಸ್ ಠಾಣೆಗೆ ಅಗ್ನಿ ಶಾಮದ ದಳದ ವಾಹನ ಬಳಸಿ ಸ್ಯಾನಿಟೈಸೀಂಗ್ ಮಾಡಲಾಗುತ್ತಿದೆ.

ರವಿವಾರ ಕೆಎಸ್ ಆರ್ ಪಿ ದಳದ ಆರ್ ಎಎಸ್ ಐ ಸೇರಿದಂತೆ ಆರು ಮಂದಿ ಪೊಲೀಸರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಆರ್ ಎಎಸ್ ಐ ಅವರು ಕೆಲ ದಿನಗಳ ಹೋಂ ಕ್ವಾರಂಟೈನ್ ನಲ್ಲಿದ್ದರು. ಬಳಿಕ ಇವರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು‌. ಇವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಅವರ ಮಗಳು ಜಯನಗರ ಪೊಲೀಸ್ ಠಾಣೆಯಲ್ಲಿ ‌ ಕಾರ್ಯನಿರ್ವಹಿಸುತ್ತಿದ್ದರು‌. ಈ ಕಾರಣದಿಂದ ಜಯನಗರ ಪೊಲೀಸ್ ಠಾಣೆಯನ್ನು ಸೀಲ್‌ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next