Advertisement

ಸೈನಿಕ ಪಾರ್ಕ್‌ಗೆ ಇನ್ನು ಹೊಸ ರೂಪ

12:06 PM Mar 18, 2020 | Naveen |

ಶಿವಮೊಗ್ಗ: ನಗರದಲ್ಲಿ ಸ್ಥಾಪಿಸಲಾಗಿರುವ ರಾಜ್ಯದ ಮೊದಲ ಸೈನಿಕ ಪಾರ್ಕ್‌ ದುಸ್ಥಿತಿ ಕುರಿತು “ಉದಯವಾಣಿ’ ವರದಿ ಬಳಿಕ ಎಚ್ಚೆತ್ತುಕೊಂಡಿದೆ. ಸೈನಿಕ ಪಾರ್ಕಿನ ನಿರ್ವಹಣೆಯನ್ನು ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆ ವ್ಯಾಪ್ತಿಗೆ ತರಲಾಗಿದೆ.

Advertisement

ಇದೇ ಯೋಜನೆಯಲ್ಲಿ ಅನುದಾನವನ್ನು ಬಿಡುಗಡೆ ಮಾಡಿ, ಪಾರ್ಕಿಗೆ ಹೊಸ ರೂಪ ಕೊಡಲಾಗುತ್ತಿದೆ. ಸೈನಿಕ ಪಾರ್ಕ್‌ಗೆ ನೀರು ಪೂರೈಕೆ ಸ್ಥಗಿತವಾಗಿತ್ತು. ಗಿಡಮರಗಳು, ಲಾನ್‌ಗೆ ನೀರಿಲ್ಲದೆ ಒಣಗಿ ಹೋಗಿದ್ದವು. ವರದಿಯಾಗುತ್ತಿದ್ದಂತೆ, ನೀರಿನ ಸಂಪರ್ಕ ಕೊಡಲಾಯಿತು. ಈಗ ಪ್ರತಿದಿನ ಗಿಡ, ಮರ, ಲಾನ್‌ಗೆ ನೀರುಣಿಸಲಾಗುತ್ತಿದೆ. ಇಲ್ಲಿದ್ದ ಅಲಂಕಾರಿಕ ಲೈಟ್‌ಗಳು ಒಡೆದು ಹೋಗಿದ್ದವು. ಕೆಲವು ಧೂಳು ಹಿಡಿದು ಪಾರ್ಕ್‌ನ ದುಸ್ಥಿತಿಗೆ ಸಾಕ್ಷಿಯಂತಾಗಿದ್ದವು. ವರದಿ ಪ್ರಕಟವಾಗುತ್ತಿದ್ದಂತೆ, ಲೈಟ್‌ಗಳನ್ನೇ ಬದಲಾಯಿಸಲಾಗಿದೆ. ಹೊಸ ಬಗೆಯ ವಿದ್ಯುತ್‌ ಅಲಂಕಾರಿಕ ಲೈಟ್‌ ಕಂಬಗಳನ್ನು ಅಳವಡಿಸಿ ಪಾರ್ಕ್‌ಗೆ ಹೊಸ ಲುಕ್‌ ನೀಡಲಾಗುತ್ತಿದೆ. ಸದ್ಯ ಪಾರ್ಕ್‌ಗೆ ಹೊಸ ಕಳೆ ಬಂದಿದೆ.

ಸಾರ್ವಜನಿಕರು ಕೂಡ ಇಲ್ಲಿಗೆ ಬರಲು ಆರಂಭಿಸಿದ್ದಾರೆ. ಪಾರ್ಕ್‌ ಅಭಿವೃದ್ಧಿಯತ್ತ ಜಿಲ್ಲಾಡಳಿತ ಗಮನ ಹರಿಸಿ, ಸೈನಿಕರು ಹೆಮ್ಮೆ ಪಡುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next