Advertisement

ರಸ್ತೆ- ರೈಲ್ವೇ- ವಿಮಾನ ಮಾರ್ಗ ಅಭಿವೃದ್ಧಿಗೆ ಕ್ರಮ

04:16 PM Jan 08, 2020 | Naveen |

ಶಿವಮೊಗ್ಗ: ಬರುವ ದಿನಗಳಲ್ಲಿ ರಸ್ತೆ, ರೈಲ್ವೆ ಮತ್ತು ವಿಮಾನ ಮಾರ್ಗಗಳು ಅಭಿವೃದ್ಧಿಯಾಗಲಿವೆ. ಇದರಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯ ಹಾಗೂ ನೆರೆ ರಾಜ್ಯಗಳೊಂದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಜಾಲವನ್ನು ವಿಸ್ತರಿಸಲಾಗಿದೆ. ಇತ್ತೀಚೆಗೆ  ರಕ್ಕೊಮ್ಮೆಚೆನ್ನೈ-ತಿರುಪತಿ ನಡುವೆ ಸಂಚರಿಸುತ್ತಿದ್ದ ತತ್ಕಾಲ್‌ ಎಕ್ಸ್‌ಪ್ರೆಸ್‌ ರೈಲನ್ನು ವಾರಕ್ಕೆ 2 ಬಾರಿ ಸಂಚರಿಸುವಂತೆ ವಿಸ್ತರಿಸಲಾಗಿದೆ. ಜ.9ರಿಂದ ಈ ರೈಲು ಸಂಚರಿಸಲಿದೆಎಂದರು.

ಈಗಾಗಲೇ ಶಿವಮೊಗ್ಗದಿಂದ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿ, ನಿಲುಗಡೆ ಸ್ಥಳಗಳನ್ನು ಜನಸಾಮಾನ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಪುನರ್‌ ಪರಿಶೀಲಿಸಿ ಸಮಯ ನಿಗ  ಪಡಿಸಲು ಉದ್ದೇಶಿಸಲಾಗಿದೆ ಎಂದ ಅವರು, ರೈಲು ಮಾರ್ಗ ವಿಸ್ತರಿಸಲು ಇರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಸಂಚಾರ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ರೂ. 994 ಕೋಟಿ. ಅನುದಾನಕಾಯ್ದಿರಿಸಿದೆ. ಅಲ್ಲದೆ ರಾಜ್ಯ ಸರ್ಕಾರವೂ ಕೂಡ ತನ್ನ
ಪಾಲಿನ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂದ ಅವರು, ಶಿವಮೊಗ್ಗ- ಹರಿಹರ ರೈಲ್ವೇ ಮಾರ್ಗವೂ ಸಹ ಮಂಜೂರಾಗಿದ್ದು, ಈ ಪ್ರದೇಶದ ವ್ಯಾಪ್ತಿಗೊಳಪಡುವ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ 49 ಹಳ್ಳಿಗಳ 1365ಎಕರೆ ಭೂಮಿ ಭೂಸ್ವಾಧೀನ ಮಾಡಿಕೊಳ್ಳುವ ಕಾರ್ಯವನ್ನು ಕೆ.ಐ.ಎ.ಡಿ.ಬಿ.ಗೆ ವಹಿಸಲಾಗಿದೆ. ಮುಂದಿನ 3-4 ತಿಂಗಳುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಇದರಿಂದಾಗಿ ಶಿವಮೊಗ್ಗದಿಂದ ಪುಣೆವರೆಗಿನ ಸಂಚಾರಕ್ಕೆ ಅನುಕೂಲವಾಗಲಿದೆ ಮಾತ್ರವಲ್ಲ ಮುಂಬಯಿ, ಪುಣೆ, ಅಹ್ಮದಾಬಾದ್‌, ಜೈಪುರ, ದೆಹಲಿ, ಚಂಢೀಘಡ ಸೇರಿದಂತೆ ದೇಶದ ಪ್ರಮುಖ ನಗರಗಳ ಸಂಪ
ಸಾಧ್ಯವಾಗಲಿದೆ ಎಂದರು.

ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳು ಸೇರಿದಂತೆ ತಜ್ಞರ ತಂಡವು ಶಿವಮೊಗ್ಗದ ಕೋಟೆಗಂಗೂರು ಹಾಗೂ ಸಾಗರದ ತಾಳಗುಪ್ಪದಲ್ಲಿ ರೈಲ್ವೆ ಟರ್ಮಿನಲ್‌ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿ, ಕೋಟೆಗಂಗೂರು ಪ್ರಶಸ್ತ ಸ್ಥಳವೆಂದು ಗುರುತಿಸಿದೆ. ಇಲ್ಲಿ ಈಗಾಗಲೇ 16ಎಕರೆ ಭೂಮಿ ಇದ್ದು, ಇನ್ನೂ ಬೇಕಾಗುವ ಹಾಗೂ ಈಗಿರುವ ಭೂಮಿಗೆ ಹೊಂದಿಕೊಂಡಂತಿರುವ ಹತ್ತು ಎಕರೆ ಭೂಮಿಯನ್ನು ನಿಯಮಾನುಸಾರ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಇದರಿಂದಾಗಿ ಈಭಾಗದ ಅನೇಕ ಕುಟುಂಬಗಳಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. 62ಕೋಟಿ
ರೂ.ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು. ತಾಳಗುಪ್ಪ- ಸಿದ್ದಾಪುರ-
ಸಿರಸಿ-ಮುಂಡಗೋಡು-ಹುಬ್ಬಳ್ಳಿ ಮಾರ್ಗವಾಗಿ 158 ಕಿ.ಮೀ. ರೈಲು ಸಂಚಾರ ಆರಂಭಿಸಲು ಪೂರಕವಾಗಿ ಕೇಂದ್ರ ಸರ್ಕಾರವು ರ್ವೇ ಕಾರ್ಯ ಕೈಗೊಳ್ಳಲು 79 ಕೋಟಿ ರೂ. ಅನುದಾನ ಮೀಸಲಿರಿಸಿದೆ.

Advertisement

ತಜ್ಞರ ವರದಿ ಪಡೆದು ಈ ಮಾರ್ಗದ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಶಿವಮೊಗ್ಗ- ಶೃಂಗೇರಿ ಮಾರ್ಗವಾಗಿ ಮಂಗಳೂರು ರೈಲು ಸಂಚಾರ ಆರಂಭಿಸಲು ಯತ್ನಿಸಲಾಗುವುದು ಎಂದರು.

ಶಿವಮೊಗ್ಗದಲ್ಲಿ 2ಲಿಫ್ಟ್‌ ಮತ್ತು ನೂತನ ಫುಟ್‌ಓವರ್‌ ಬ್ರಿಡ್ಜ್ ಹಾಗೂ ಜಿಲ್ಲೆಯ ಇತರೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿವೆ. ನಗರದ ಕಾಶೀಪುರದ ಲೆವೆಲ್‌ ಕ್ರಾಸಿಂಗ್‌ ನಂ.62, ಸವಳಂಗ ಎಲ್‌.ಸಿ.ಗೇಟ್‌ ನಂ.49 ಮತ್ತು ಭದ್ರಾವತಿ ಬಳಿಯ ಎಲ್‌.ಸಿ.ಗೇಟ್‌ ನಂ.34ರ ಬದಲಿಗೆ ರೈಲ್ವೆ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ
ಮೇಲ್ಸೇತುವೆಗಳನ್ನು ನಿರ್ಮಿಸಲು ಮಂಜೂರಾತಿ ದೊರೆತಿದೆ.

ಅಲ್ಲದೇ ಶಿವಮೊಗ್ಗ ವಿದ್ಯಾನಗರದ ಬಳಿ ಎಲ್‌.ಸಿ.ಗೇಟ್‌ ನಂ.46ರ ಬದಲಿನ ಮೇಲ್ಸೇತುವೆಯು ನ್ಯಾಶನಲ್‌ ಹೈವೇ ಯೋಜನೆಯಡಿ ಮಂಜೂರಾಗಾಗಿದ್ದು, ಶೀಘ್ರವೇ ಕಾರ್ಯಾರಂಭವಾಗಲಿದೆ ಎಂದರು.

ಲವಾರು ವರ್ಷಗಳಿಂದ ಶಿವಮೊಗ್ಗ ನೂರಡಿ ವರ್ತುಲ ರಸ್ತೆ ನೆನೆಗುದಿಗೆ ಬಿದ್ದಿದ್ದು, ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಎರಡು ಎಕರೆ ರೈಲ್ವೆ ಭೂಮಿಯ ಅಗತ್ಯ ಇದ್ದುದರಿಂದ ಪೂರ್ಣಗೊಳಿಸಲು, ರೈಲ್ವೆಯವರು ಮಾತುಕತೆ ನಡೆಸಿದ ಫಲವಾಗಿ ಎರಡು ಎಕರೆ ರೈಲ್ವೆ ಭೂಮಿಯನ್ನು ಈ ಕಾಮಗಾರಿಗಾಗಿ ವರ್ಗಾಯಿಸಲು ರೈಲ್ವೆ ಇಲಾಖೆಯವರು ಸಮ್ಮತಿಸಿದ್ದಾರೆ. ಆ ಪ್ರದೇಶದಲ್ಲಿ ಇದ್ದಂತಹ ಹಳೆಯ ಕಟ್ಟಡಗಳನ್ನು ರೈಲ್ವೆಯವರು ನೆಲಸಮಗೊಳಿಸಿದ್ದಾರೆ.

ಈಗ ಜಮೀನು ಹಸ್ತಾಂತರಿಸುವ ಪ್ರಕ್ರಿಯೆಯು ಶೀಘ್ರದಲ್ಲಿಯೇ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು. ನಗರದ ರೈಲ್ವೆ ಕಾಂಪೌಂಡ್‌ನಿಂದ ಹೊಸಪೇಟೆ- ಶಿವಮೊಗ್ಗ ರಸ್ತೆಗೆ ಅಭಿವೃದ್ಧಿಗೆ 20.00ಕೋಟಿ, ಮಳೆಹಾನಿ ದುರಸ್ತಿ ಕಾಮಗಾರಿಗಳಿಗೆ 12.25 ಕೋಟಿ, ತೀರ್ಥಹಳ್ಳಿ ತಾಲೂಕಿನಲ್ಲಿ 20 ಕಾಮಗಾರಿಗಳನ್ನು 9.74ಕೋಟಿ ವೆಚ್ಚದಲ್ಲಿ ಹಾಗೂ ಭದ್ರಾವತಿ ತಾಲೂಕಿನಲ್ಲಿ 21ಕಾಮಗಾರಿಗಳು 10.36ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಒಟ್ಟು 75ಕಾಮಗಾರಿಗಳಿಗಾಗಿ 32.35ಕೋಟಿ ಅನುದಾನ ಮಂಜೂರಾಗಿದೆ ಎಂದರು.

ಶಿವಮೊಗ್ಗ ನಗರದ ಸುತ್ತಮುತ್ತಲ 18.06ಕಿ.ಮೀ. ಉದ್ದದ 350ಕೋಟಿ ರೂ. ವೆಚ್ಚದಲ್ಲಿ ರಿಂಗ್‌ ರೋಡ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಮಂಜೂರಾತಿ ದೊರೆಯಲಿದೆ ಎಂದವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಪ್ರಕಾಶ್‌, ರೈಲ್ವೆ ಅಧಿಕಾರಿ ಶ್ರೀಧರಮೂರ್ತಿ, ರೈಲ್ವೇ ಸಲಹಾ ಸಮಿತಿ ಸದಸ್ಯ ಮಾಲತೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next