Advertisement
ಪ್ರತಿದಿನ 35 ವಾರ್ಡ್ ನಲ್ಲಿ 86 ಆಟೋಟಿಪ್ಪರ್‌ಗಳು ಸಂಚರಿಸಿ ಎಲ್ಲಾ ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹಿಸಿ, ಟ್ರಾನ್ಸಫರ್ ಸ್ಟೇಷನ್ ನಲ್ಲಿ ಗಾಬೇìಜ್ ಕಾಂಪ್ಯಾಕ್ಟರ್ ವಾಹನಕ್ಕೆ ವರ್ಗಾಯಿಸಿ ಅನುಪಿನಕಟ್ಟೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ವೈಜ್ಞಾನಿಕ ವಿಲೇವಾರಿಗಾಗಿ ಕಳುಹಿಸಲಾಗುತ್ತಿದೆ.
Related Articles
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಾಡಿಕೊಪ್ಪದಲ್ಲಿರುವ ಇಂದಿರಾ ಕ್ಯಾಂಟೀನ್ ಮಾಸ್ಟರ್ ಕಿಚನ್ ಪ್ರದೇಶದಲ್ಲಿ 2 ಟಿ.ಪಿ.ಡಿ ಸಾಮರ್ಥ್ಯದ ಬಯೋಗ್ಯಾಸ್ ಘಟಕ ನಿರ್ಮಿಸಲಾಗಿದೆ.
Advertisement
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಮತ್ತು ಬಿ.ಎಸ್.ಎನ್.ಎಲ್ ಕಛೇರಿ ಹಿಂಭಾಗದ ಪಾಲಿಕೆಯ ವಾಹನ ಪಾಕಿಂìಗ್ ಪ್ರದೇಶದಲ್ಲಿ 5 ಟಿ.ಪಿ.ಡಿ ಸಾಮರ್ಥ್ಯದ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್ ಪಾಕಿಂìಗ್ ಏರಿಯಾದಲ್ಲಿ 1 ಟಿ.ಪಿ.ಡಿ ಸಾಮರ್ಥ್ಯದ On site composting ಘಟಕವನ್ನು ಪಾರ್ಕ್ ನಲ್ಲಿ ಉತ್ಪತ್ತಿಯಾಗುವ ಎಲೆಗಳನ್ನು (ಹಸಿ ತ್ಯಾಜ್ಯ) ಸಂಸ್ಕರಿಸಲು ನಿರ್ಮಿಸಲಾಗಿದೆ. ಎಲೆಕ್ಟ್ರಿಕಲ್ ವಾಹನಗಳ ಖರೀದಿ
ಪಾಲಿಕೆ ವ್ಯಾಪ್ತಿಯ ಮನೆ-ಮನೆ ಕಸ ಸಂಗ್ರಹಣೆಗಾಗಿ 500 ಕೆ.ಜಿ ಕಸ ಸಂಗ್ರಹಣೆ ಸಾಮರ್ಥ್ಯದ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ 6 ಎಲೆಕ್ಟ್ರಿಕಲ್ ವಾಹನ ಖರೀದಿಸಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಹಸಿ ಕಸ ಮತ್ತು ಒಣಕಸವನ್ನು ಮನೆಯಲ್ಲಿಯೇ ವಿಂಗಡಿಸಿ ನೀಡಲು ಹಸಿಕಸಕ್ಕೆ ಹಸಿರು ಬಣ್ಣದ ಬುಟ್ಟಿ ಮತ್ತು ಒಣಕಸಕ್ಕೆ ನೀಲಿ ಬಣ್ಣದ ಬುಟ್ಟಿಯನ್ನು ಒಟ್ಟು 84,300 ಮನೆಗಳಿಗೆ ವಿತರಣೆ ಮಾಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸಲು ಈಗಾಗಲೇ ಒಟ್ಟಾರೆ 86 ಆಟೋ ಟಿಪ್ಪರ್ಸ್, 13 ಟಿಪ್ಪರ್ ಟ್ರಕ್, 5 ಜೆ.ಸಿ.ಬಿ ಯಂತ್ರ ಮತ್ತು 7 ಕಾಂಪ್ಯಾಕ್ಟರ್ ವಾಹನಗಳನ್ನು ಖರೀದಿಸಿ ಸಮರ್ಪಕವಾಗಿ ಕಾರ್ಯಚರಣೆ ಮಾಡಲಾಗುತ್ತಿದೆ.
ಪಾಲಿಕೆ ವ್ಯಾಪ್ತಿಯ ಅನುಪಿನಕಟ್ಟೆಯಲ್ಲಿ ಸುಮಾರು ವರ್ಷಗಳಿಂದ ಶೇಖರಣೆಯಾಗಿದ್ದ 30350 CUM (ಘನ ಮೀಟರ್) ತ್ಯಾಜ್ಯವನ್ನು NGT Guideline ನಂತೆ ಬಯೋ ಮೈನಿಂಗ್ ಪದ್ಧತಿಯಲ್ಲಿ ವಿಲೇವಾರಿ ಗೊಳಿಸಲಾಗುತ್ತಿದೆ. ಮೇ-2023ರ ಅಂತ್ಯಕ್ಕೆ 29100 CUM ನಷ್ಟು ಪಾರಂಪರಿಕ ತ್ಯಾಜ್ಯವನ್ನು ಬಯೋರೆಮಿಡಿಯೇಷನ್ ಪದ್ಧತಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ವಿಲೇವಾರಿ ಮಾಡಲಾಗಿರುತ್ತದೆ.