Advertisement

ಕೋವಿಡ್ ನಿಂದ ಸಮಾಜಸೇವೆಗೆ ಕಂಟಕ

01:14 PM Jul 03, 2020 | Naveen |

ಶಿವಮೊಗ್ಗ: ಕೋವಿಡ್ ನಿಂದಾಗಿ ಜಗತ್ತು ಆತಂಕಕ್ಕೆ ಒಳಗಾಗಿದೆ. ರಾಜ್ಯ ಹಾಗೂ ರಾಷ್ಟ್ರದಲ್ಲೂ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಇಂತಹ ಸನ್ನಿವೇಶದಲ್ಲಿ ಲಯನ್ಸ್‌ ಕ್ಲಬ್‌ ಸೇರಿದಂತೆ ಮತ್ತಿತರೆ ಸಂಘ-ಸಂಸ್ಥೆಗಳ ಸಾಮಾಜಿಕ ಸೇವೆಗೂ ಸಂಕಷ್ಟ ಬಂದೊದಗಿದೆ ಎಂದು ಲಯನ್ಸ್‌ ಕ್ಲಬ್‌ನ ನೂತನ ಅಧ್ಯಕ್ಷ ಲಯನ್ಸ್‌ ಗಿರೀಶ್‌ ಕೆ.ನಾಯಕ್‌ ಆತಂಕ ವ್ಯಕ್ತಪಡಿಸಿದರು.

Advertisement

ಇಲ್ಲಿನ ಸಾಗರ ರಸ್ತೆಯಲ್ಲಿರುವ ಲಯನ್ಸ್‌ ಭವನದಲ್ಲಿ ಬುಧವಾರ ನಡೆದ 2020-2021ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷ ಪರಿವರ್ತನೆ ನಮ್ಮ ಸಂಕಲ್ಪ ಎಂಬ ಧ್ಯೇಯದೊಂದಿಗೆ ಲಯನ್ಸ್‌ ಕ್ಲಬ್‌ ಕಾರ್ಯ ನಿರ್ವಹಿಸಲಿದ್ದು ಕೋವಿಡ್‌ ವಾರಿಯರ್ಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಲಯನ್ಸ್‌ ಕ್ಲಬ್‌ ಜಿಲ್ಲೆ 317-ಸಿ ಜಿಎಲ್‌ಟಿ ಸಂಚಾಲಕ ಲಯನ್‌ ಸುನಿಲ್‌ ಸಾಲಿಯಾನ್‌, ಎರಡನೇ ಉಪ ರಾಜ್ಯಪಾಲ ವೀರಭದ್ರಪ್ಪ, ಪ್ರಾಂತೀಯ ಅಧ್ಯಕ್ಷ ಅನಂತ ಕೃಷ್ಣ ನಾಯಕ್‌, ಕಾರ್ಯದರ್ಶಿ ಲಯನ್‌ ಎಂ.ಜಗದೀಶ್‌, ಖಜಾಂಚಿ ಲಯನ್‌ ಅಪ್ಪುಕುಟ್ಟಿ, ವಲಯಾಧ್ಯಕ್ಷ ಲಯನ್‌ ಜಿ.ಎಸ್‌. ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next