Advertisement

ದೇಶಾಭಿಮಾನ ಅಗತ್ಯ: ದಯಾನಂದ್‌

11:18 AM Jul 27, 2019 | Naveen |

ಶಿವಮೊಗ್ಗ: ಸಾರ್ವಜನಿಕರಲ್ಲಿ ಸೈನಿಕರ ಬಗ್ಗೆ ಗೌರವ ಹಾಗೂ ದೇಶಾಭಿಮಾನ ಮೂಡಲು ಸಹಕಾರಿಯಾಗುವಂತೆ ಮತ್ತು ದೇಶಕ್ಕಾಗಿ ಹೋರಾಡುವ ಸೈನಿಕರಿಗೆ ಗೌರವ ಅರ್ಪಿಸುವ ಸಲುವಾಗಿ ಈ ಸೈನಿಕ ಪಾರ್ಕ್‌ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹೇಳಿದರು.

Advertisement

ನಗರದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ರಾಜ್ಯ ಶಿಲ್ಪಕಲಾ ಅಕಾಡೆಮಿ, ಜಿಲ್ಲಾಡಳಿತ, ಸೈನಿಕ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಿಮೆಂಟ್ ಶಿಲ್ಪ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರ ಕುರಿತು ಇರುವ ಒಂದು ಸಿನಿಮಾ ನೋಡಿದ ನಾವು ಎಷ್ಟೊಂದು ಭಾವುಕರಾಗುತ್ತೇವೆ. ಅದಕ್ಕೆ ಕಾರಣ, ಸೈನಿಕರ ಬಗ್ಗೆ ನಮ್ಮಲ್ಲಿರುವ ಗೌರವ, ಕಾಳಜಿಯ ಭಾವನೆ ಎಂದರು.

ಪೋಷಕರು ತಮ್ಮ ಮಕ್ಕಳನ್ನ ಇಂಜಿನಿಯರ್‌, ಡಾಕ್ಟರ್‌ಗಳನ್ನಾಗಿಸಲು ಮಾತ್ರ ಒತ್ತು ನೀಡುವರು. ಅದೇ ತರಹ ಸೈನಿಕರನ್ನಾಗಿಸಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಈ ಪಾರ್ಕ್‌ ಬೇರೆ ಎಲ್ಲಾ ಪಾರ್ಕ್‌ಗಳಿಗಿಂತ ಮಾದರಿಯ ಪಾರ್ಕ್‌ ಆಗುವಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಶಿಲ್ಪಕಲಾ ಅಕಡೆಮಿಯ ಅಧ್ಯಕ್ಷ ರು. ಕಾಳಾಚಾರ್‌ ಮಾತನಾಡಿ, ಒಂದು ಹೊಲಕ್ಕೆ ಅದರದ್ದೆ ಆದ ಬೇಲಿ ಎಷ್ಟು ಮುಖ್ಯವೋ, ಹಾಗೆಯೇ ನಮ್ಮ ದೇಶ ಗಡಿ ರಕ್ಷಣೆಗೆ ಸೈನಿಕರು ಅಷ್ಟೇ ಮುಖ್ಯ’ ಎಂದರು.

ಒಂದು ಕಲಾಕೃತಿ ನಿರ್ಮಿಸಲು ನಮ್ಮ ಕಲಾವಿದರು ಒಂದು ವರ್ಷದಿಂದ ಎರಡು ವರ್ಷ ತೆಗೆದುಕೊಳ್ಳುತ್ತಿದರು. ಆದರೆ ಹದಿನೈದು ದಿನಗಳಲ್ಲಿ ಸೈನಿಕರ ಹಲವು ಭಂಗಿಯ ಅಧ್ಬುತ ಕಲಾಕೃತಿಗಳನ್ನು ನಿರ್ಮಿಸಿರುವುದು ಹೆಮ್ಮೆಯ ವಿಚಾರ. ಸೈನಿಕರ ಬಗ್ಗೆ ಅವರಿಗೆ ಇರುವ ಗೌರವ ಹಾಗೂ ಯೋಧರ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಇದರಲ್ಲಿ ಪ್ರಕಟಗೊಳಿಸಿದ್ದಾರೆ ಎಂದು ಅವರು ಹೇಳಿದರು.

Advertisement

ರಾಜ್ಯ ಶಿಲ್ಪಕಲಾ ಅಕಡೆಮಿ ಸಂಚಾಲಕ ರಘು ಎಂ. ಹಾಗೂ ಸಹಾಯಕ ಶಿಲ್ಪ ಕಲಾವಿದೆ ಹರಿಪ್ರಿಯ ಹದಿನೈದು ದಿನಗಳ ಶಿಬಿರದ ಬಗ್ಗೆ ಅನಿಸಿಕೆ- ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಪರ ಜಿಲ್ಲಾಧಿಕಾರಿ ಅನುರಾಧಾ, ಸೈನಿಕ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್‌. ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಪಾಪಯ್ಯ, ರಾಜ್ಯ ಶಿಲ್ಪಕಲಾ ಅಕಡೆಮಿ ರಿಜಿಸ್ಟಾರ್‌ ಶಿವರುದ್ರಪ್ಪ ಮತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next