Advertisement

ದುಬೈ :ಕೋವಿಡ್ ಲಸಿಕೆ ತೆಗೆದುಕೊಂಡ ಬಾಲಿವುಡ್ ನ ಮೊದಲ ನಟಿ ಶಿಲ್ಪಾ ಶಿರೋಡ್ಕರ್

07:12 PM Jan 09, 2021 | Team Udayavani |

ದುಬೈ: ಭಾರತವು ಕೋವಿಡ್ ಸೋಂಕಿಗೆ ದೇಶೀಯವಾಗಿ ಲಸಿಕೆ ಅಭಿವೃದ್ದಿಪಡಿಸಿ ಅದರ ಬಳಕೆಗೆ ಇನ್ನೇನು ಕ್ಷಣಗಣನೆ ಆರಂಭಿಸಿರುವಾಗಲೇ  ನಟಿ ಶಿಲ್ಪಾ ಶಿರೋಡ್ಕರ್ ಅವರು ದುಬೈನಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.

Advertisement

ಸದ್ಯ ದುಬೈನಲ್ಲಿ ಇರುವ ನಟಿ ಅಲ್ಲಿ ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ಕೋವಿಡ್ ಲಸಿಕೆ ಪಡೆದುಕೊಂಡ ಮೊದಲ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಕುರಿತಾಗಿ ತನ್ನ ಸಾಮಾಜಿಕ ಜಾಲತಾಣವಾದ  ಇನ್ ಸ್ಟಾಗ್ರಾಮ್ ನಲ್ಲಿ  ಮಾಹಿತಿ ಹಂಚಿಕೊಂಡಿರುವ ನಟಿ ನಾನು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದೇನೆ ಹಾಗೂ ಸುರಕ್ಷಿತವಾಗಿದ್ದೇನೆ, ಧನ್ಯವಾದಗಳು UAE ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ತಾವು ಲಸಿಕೆ ಹಾಕಿಸಿಕೊಂಡಿರುವ ಪೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ದೇಶದ ಮೊದಲ ಆಟಿಕೆ ಕ್ಲಸ್ಟರ್‌ಗೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ

1989ರಲ್ಲಿ ತೆರೆಕಂಡ ‘ಭ್ರಷ್ಟಾಚಾರ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಶಿಲ್ಪಾ ಶಿರೋಡ್ಕರ್ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಜೊತೆಯಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆ ನಂತರ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ  ಈ ನಟಿ  2000 ನೇ ಇಸವಿಯಲ್ಲಿ ತೆರೆಕಂಡಿದ್ದ ಗಜಗಾಮಿನಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ನಂತರದ ದಿನಗಳಲ್ಲಿ ಚಿತ್ರರಂಗದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

Advertisement

ಈ ನಟಿ ಮಹೇಶ್ ಬಾಬು ಅವರ ಪತ್ನಿಯ ಸಹೋದರಿಯಾಗಿದ್ದು, ಹಲವು ಧಾರವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಂತರ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿರುವ ಇವರು ದುಬೈನಲ್ಲಿಯೇ ವಾಸವಾಗಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next