Advertisement

KD ಮುಗಿಸಿ ಹೊರಟ ಶಿಲ್ಪಾ ಶೆಟ್ಟಿ; ರೆಟ್ರೋ ಲುಕ್‌ನಲ್ಲಿ ಸತ್ಯವತಿ

11:50 AM Jun 01, 2024 | Team Udayavani |

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಆಗಾಗ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸೌತ್‌ ಸಿನಿ ದುನಿಯಾದಲ್ಲೂ ಹವಾ ತಮ್ಮ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ. ಸದ್ಯ ಶಿಲ್ಪಾ ಶೆಟ್ಟಿ “ಕೆಡಿ’ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟು ಮತ್ತೆ ಮುಂಬೈ ವಿಮಾನ ಹತ್ತಿದ್ದಾರೆ. ಶಿಲ್ಪಾ ಶೆಟ್ಟಿಯ ಕೊನೆಯ ಹಂತದ ಚಿತ್ರೀಕರಣವನ್ನು ಪ್ರೇಮ್‌ ಮೈಸೂರಿನಲ್ಲಿ ಮಾಡಿ ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ, ಪ್ರೇಮ್‌ ಹಾಗೂ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Advertisement

ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ ಅವರ ಪೋಸ್ಟರ್‌ ಅನ್ನು ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿದೆ. ಶಿಲ್ಪಾ ಶೆಟ್ಟಿ ಈಗಾಗಲೇ ಕನ್ನಡದ “ಪ್ರೀತ್ಸೋದ್‌ ತಪ್ಪಾ’ ಹಾಗೂ “ಆಟೋ ಶಂಕರ್‌’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಪ್ರೇಮ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಶಿಲ್ಪಾ ನಟಿಸುತ್ತಿರುವ ಮೂರನೇ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ಶಿಲ್ಪಾ ಅಲ್ಲದೇ, ಬಾಲಿವುಡ್‌ನ‌ ಮತ್ತೂಬ್ಬ ಸ್ಟಾರ್‌ ನಟ ನಟಿಸಿದ್ದಾರೆ. ಅದು ಸಂಜಯ್‌ ದತ್‌.

ಹೌದು, ಈಗಾಗಲೇ “ಕೆಜಿಎಫ್-2′ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ಧೂರಿ ಎಂಟ್ರಿಕೊಟ್ಟಿದ್ದ ಸಂಜಯ್‌ ದತ್‌ ಈಗ “ಕೆಡಿ’ಯಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಇನ್ನು, ಪ್ರೇಮ್‌ ಹಾಗೂ ಧ್ರುವ ಕಾಂಬಿನೇಶನ್‌ ನಲ್ಲಿ ಬರುತ್ತಿರುವ ಚಿತ್ರ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ನಿಂದ ಕೂಡಿದ್ದು, ಪ್ರೇಮ್‌ ಈ ಬಾರಿ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಲು ಹೊರಟಿದ್ದಾರೆ. ಚಿತ್ರವನ್ನು ಕೆವಿಎನ್‌ ಸಂಸ್ಥೆ ನಿರ್ಮಿಸುತ್ತಿದೆ.

Advertisement

ಯುದ್ಧ ಶುರು ಮಾಡೋಣ…

ಇದೊಂದು ರೆಟ್ರೋ ಶೈಲಿಯ ಸಿನಿಮಾವಾಗಿದ್ದು, 70ರ ದಶಕದ ಬೆಂಗಳೂರನ್ನು ತೋರಿಸಲು ಹೊರಟಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರದ ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ತರಲು ಚಿತ್ರತಂಡ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next