Advertisement

Actress Ramya: ದರ್ಶನ್‌,ಪ್ರಜ್ವಲ್‌, ಬಿಎಸ್‌ ವೈ ವಿರುದ್ಧ ಕಿಡಿಕಾರಿದ ರಮ್ಯಾ; ಇವರಿಂದ..

12:14 PM Jun 22, 2024 | Team Udayavani |

ಬೆಂಗಳೂರು: ಮೋಹಕ ತಾರೆ ರಮ್ಯಾ ಚಿತ್ರರಂಗದಿಂದ ದೂರವಾಗಿದ್ದರೂ, ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿ ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿರುವ ಪ್ರಕರಣದ ಬಗ್ಗೆ ಧ್ವನಿ ಎತ್ತುವ ಮೂಲಕ ಸುದ್ದಿಯಾಗಿದ್ದಾರೆ.

Advertisement

ಕಳೆದ ದಿನಗಳಿಂದ ರಾಜ್ಯದಲ್ಲಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ ಅವರ ವಿಚಾರವೇ ಎಲ್ಲೆಡೆ ಕೇಳಿ ಬರುತ್ತಿದೆ. ಪ್ರಕರಣ ಸಂಬಂಧ ಸೂಕ್ತ ತನಿಖೆಯಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಅನೇಕರು ವಾದಿಸಿದ್ದಾರೆ. ಇದರಲ್ಲಿ ನಟಿ ರಮ್ಯಾ ಕೂಡ ಧ್ವನಿ ಎತ್ತಿ, ದರ್ಶನ್‌ ವಿರುದ್ಧ ಟ್ವೀಟ್‌ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.

ಪ್ರಕರಣ ಸಂಬಂಧ ಸರಣಿ ಟ್ವೀಟ್‌ ಗಳನ್ನು ರಮ್ಯಾ ಮಾಡಿದ್ದರು. ಇದೀಗ ಮತ್ತೊಂದು ಟ್ವೀಟ್‌ ಮಾಡಿದ್ದು, ಇದರಲ್ಲಿ  ಪ್ರಜ್ವಲ್‌ ರೇವಣ್ಣ, ದರ್ಶನ್‌, ಬಿ.ಎಸ್‌ ಯಡಿಯೂರಪ್ಪ, ಸೂರಜ್‌ ರೇವಣ್ಣ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

 ರಮ್ಯಾ ಮಾಡಿದ ಟ್ವೀಟ್‌ ನಲ್ಲಿ ಏನಿದೆ? : “ಕಾನೂನು ಉಲ್ಲಂಘಿಸಿ ಶ್ರೀಮಂತರು ಹಾಗೂ ಶಕ್ತಿಶಾಲಿಗಳು ಸುದ್ದಿಯಲ್ಲಿದ್ದಾರೆ. ಇವರ ಹಿಂಸಾತ್ಮಕ ಕೃತ್ಯಗಳಿಂದ ಬಡವರು, ಮಹಿಳೆಯರು ಮತ್ತು ಮಕ್ಕಳು ಬದುಕು ನಾಶವಾಗಿದೆ. ಇಂಥ ಅಪರಾಧ ಕೃತ್ಯಗಳನ್ನು ಹೊರಗಡೆ ತಂದ ನಮ್ಮ ರಾಜ್ಯದ ಪೊಲೀಸರು ಹಾಗೂ ಮಾಧ್ಯಮಗಳಿಗೆ ಹ್ಯಾಟ್ಸ್‌ ಆಫ್.‌ ವಿಚಾರಣೆಯನ್ನು ತೀವ್ರಗೊಳಿಸಿ, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಾಗ  ನ್ಯಾಯ ಖಂಡಿತ ಸಿಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ?” ಎಂದು ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಟ್ವೀಟ್‌ ನ ಕೊನೆಯಲ್ಲಿ ರಮ್ಯಾ ಪ್ರಜ್ವಲ್‌ ರೇವಣ್ಣ, ದರ್ಶನ್‌, ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಹಾಗೂ ಸೂರಜ್‌ ರೇವಣ್ಣ ಅವರ ಹೆಸರನ್ನು ಹ್ಯಾಷ್‌ ಟ್ಯಾಗ್‌ ನಲ್ಲಿ ಬಳಸಿದ್ದಾರೆ.

Advertisement

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಿಂದ ಪ್ರಜ್ವಲ್‌ ರೇವಣ್ಣ ಮೇಲೆ ದೂರು ದಾಖಲಾಗಿದ್ದು, ಕೊಲೆ ಪ್ರಕರಣದಲ್ಲಿ ದರ್ಶನ್‌ ಮೇಲೆ ಕೇಸ್‌ ಆಗಿದೆ. ಫೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್‌ ವೈ ಮೇಲೆ ದೂರು ದಾಖಲಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೂರಜ್‌ ರೇವಣ್ಣ ಹೆಸರು ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next