Advertisement

Sandalwood; ದರ್ಶನ್‌ ಅಂದರ್‌, ಡೆವಿಲ್‌ ಬಾಹರ್: ಕೆಡಿ ರಿಲೀಸ್‌ ಹಾದಿ ಸುಗಮ

11:53 AM Jun 20, 2024 | Team Udayavani |

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗುವ ಮೂಲಕ “ಡೆವಿಲ್‌’ ಸಿನಿಮಾದ ಚಿತ್ರೀಕರಣ ಕೂಡಾ ನಿಂತು ಹೋಗಿದೆ. ಈ ಚಿತ್ರವನ್ನು ಡಿಸೆಂಬರ್‌ನಲ್ಲಿ ಕ್ರಿಸ್ಮಸ್‌ ವೇಳೆಗೆ ಬಿಡುಗಡೆ ಮಾಡಲು ದರ್ಶನ್‌ ಹಾಗೂ ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಅದಕ್ಕಾಗಿ ದರ್ಶನ್‌ ಕೂಡಾ ಸತತ ಚಿತ್ರೀಕರಣಕ್ಕೆ ಅಣಿಯಾಗಿದ್ದರು. ಆದರೆ, ದರ್ಶನ್‌ ಪ್ರಕರಣವನ್ನು ನೋಡುವಾಗ “ಡೆವಿಲ್‌’ ಸಿನಿಮಾ ಸದ್ಯಕ್ಕೆ ಮುಂದುವರೆಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಈ ಮೂಲಕ ಧ್ರುವ ಸರ್ಜಾ “ಕೆಡಿ’ ಹಾದಿ ಸುಗಮವಾಗಿದೆ!

Advertisement

ಧ್ರುವ “ಕೆಡಿ’ಗೂ ದರ್ಶನ್‌ “ಡೆವಿಲ್‌ ‘ಗೂ ಏನು ಸಂಬಂಧ ಎಂದು ನೀವು ಕೇಳಬಹುದು. “ಡೆವಿಲ್‌’ ಸಿನಿಮಾ ಡಿಸೆಂಬರ್‌ ರಿಲೀಸ್‌ ಘೋಷಿಸಿದಂತೆಯೇ “ಕೆಡಿ’ ಚಿತ್ರವನ್ನೂ ಡಿಸೆಂಬರ್‌ನಲ್ಲಿ ತೆರೆಗೆ ತರುವುದಾಗಿ ಪ್ರೇಮ್‌ ಹೇಳಿದ್ದರು. ಈ ಮೂಲಕ ವರ್ಷಾಂತ್ಯದಲ್ಲಿ ಕನ್ನಡದ ಇಬ್ಬರು ಸ್ಟಾರ್‌ ನಟರ ಚಿತ್ರಗಳು ಕ್ಲ್ಯಾಶ್‌ ಆಗುವ ಜೊತೆಗೆ ಮತ್ತೂಂದು ಸ್ಟಾರ್‌ ವಾರ್‌, ಫ್ಯಾನ್ಸ್‌ ವಾರ್‌ಗೆ ಕಾರಣವಾಗುತ್ತಲ್ಲ ಎಂದು ಅನೇಕರು “ತಲೆಬಿಸಿ’ ಮಾಡಿಕೊಂಡಿದ್ದರು. ಆದರೆ, ಸದ್ಯದ ಸನ್ನಿವೇಶಗಳನ್ನು ನೋಡುವಾಗ “ಕೆಡಿ’ಯ ಡಿಸೆಂಬರ್‌ ಹಾದಿ ಸಲೀಸಾದಂತೆ ಕಾಣುತ್ತಿದೆ.

ಡಿಸೆಂಬರ್‌ ಮೊದಲ ವಾರ (ಡಿ.6)ಕ್ಕೆ ತೆಲುಗಿನ “ಪುಷ್ಪ’ ಸಿನಿಮಾ ತೆರೆಕಾಣಲಿದ್ದು, ಅದರ ಬೆನ್ನಿಗೆ “ಕೆಡಿ’ ಬರಲಿದೆಯಂತೆ. “ಕೆಡಿ’ ಚಿತ್ರವನ್ನು ಪ್ರೇಮ್‌ ನಿರ್ದೇಶಿಸುತ್ತಿದ್ದಾರೆ. ಇದೊಂದು ಬಹುತಾರಾಗಣದ ಚಿತ್ರವಾಗಿದ್ದು, ಚಿತ್ರದಲ್ಲಿ ಧ್ರುವ ಸರ್ಜಾ, ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ, ನೋರಾ ಫ‌ತೇಹಿ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next