ಹೊಸದಿಲ್ಲಿ: ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ತಾನು ನಿವೃತ್ತಿಯಾದ ಏನು ಮಾಡಬಲ್ಲೇ ಎನ್ನುವುದರ ಸುಳಿವು ನೀಡಿದ್ದಾರೆ. ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಶಿಖರ್ ಧವನ್ ಕಾಮೆಂಟೆಟರ್ ಆಗಲಿದ್ದಾರಂತೆ.
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆಗೆ ಇನ್ಸ್ಟಾ ಗ್ರಾಂ ನಲ್ಲಿ ಲೈವ್ ಚಾಟ್ ನಲ್ಲಿ ಮಾತನಾಡಿದ ಶಿಖರ್ ಧವನ್ ತನ್ನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ನಿವೃತ್ತಿ ನಂತರ ಏನು ಮಾಡುತ್ತೀರಿ ಎಂಬ ಅಶ್ವಿನ್ ಪ್ರಶ್ನೆಗೆ ಉತ್ತರಿಸಿದ ಧವನ್, ನನಗೆ ಹಾಸ್ಯಪ್ರಜ್ಞೆ ಇದೆ. ಹಾಗಾಗಿ ನನಗೆ ಕಾಮೆಂಟೇಟರ್ ಆಗಬಹುದು. ಅದರಲ್ಲೂ ಹಿಂದಿ ಕಾಮೆಂಟ್ರಿ ಮಾಡಬಹುದು ಎಂದಿದ್ದಾರೆ.
ನನ್ನ ಹಾಸ್ಯಪ್ರಜ್ಞೆ ತುಂಬಾ ತೀಕ್ಷ್ಣವಾಗಿರುವುದರಿಂದ ನಾನು ಉತ್ತಮ ಭಾಷಣಕಾರನೂ ಆಗುಬಹುದು. ಇನ್ನು ನಾನು ಪ್ರೇರಕ ಭಾಷಣ ಮಾಡಿದರೆ, ಹೆಚ್ಚಿನ ಜನರನ್ನು ಮೋಡಿ ಮಾಡಬಲ್ಲೆನು ಎಂದು ಅಶ್ವಿನ್ ಜೊತೆ ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್, ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ ಪರವಾಗಿ ಆಡುತ್ತಾರೆ. ಈ ವರ್ಷ ರವಿ ಅಶ್ವಿನ್ ಕೂಡ ಡೆಲ್ಲಿ ಪರವಾಗಿ ಆಡಲಿದ್ದಾರೆ.