Advertisement

ಗರಿಷ್ಠ ಬೌಂಡರಿ ದಾಖಲೆಯ ಸನಿಹ ಶಿಖರ್‌ ಧವನ್‌

11:01 PM Apr 04, 2022 | Team Udayavani |

ಮುಂಬಯಿ: ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರ ಶಿಖರ್‌ ಧವನ್‌ ಟಿ20 ಕ್ರಿಕೆಟ್‌ನಲ್ಲಿ ಮಹೋನ್ನತ ದಾಖಲೆ ಮಾಡುವ ಸನಿಹದಲ್ಲಿದ್ದಾರೆ.

Advertisement

ಚೆನ್ನೈ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಧವನ್‌ 4 ಬೌಂಡರಿ ನೆರವಿನಿಂದ 33 ರನ್‌ ಗಳಿಸಿದ್ದರು. ಈ ಸಾಧನೆಯಿಂದಾಗಿ ಅವರು ಟಿ20 ಕ್ರಿಕೆಟ್‌ನಲ್ಲಿ ಇಷ್ಟರವರೆಗೆ 997 ಬೌಂಡರಿ ಹೊಡೆದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ಐಪಿಎಲ್‌: ಯುವ ವೇಗಿ ವೈಭವ್‌ ಅರೋರಾ; ವೈಭವದ ಆರಂಭ

ಟಿ20 ಇತಿಹಾಸದಲ್ಲಿ ಸಾವಿರ ಬೌಂಡರಿ ಬಾರಿಸಿದ ಭಾರತದ ಮೊದಲ ಮತ್ತು ವಿಶ್ವದ ನಾಲ್ಕನೇ ಸಾಧಕ ಎಂದೆನಿಸಿಕೊಳ್ಳಲು ಅವರಿಗೆ ಇನ್ನು ಮೂರು ಬೌಂಡರಿ ಬೇಕಾಗಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next