Advertisement

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್

01:12 PM Mar 27, 2023 | Team Udayavani |

ಮುಂಬೈ: ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಮತ್ತು ಅವರ ಪತ್ನಿ ಅಯೇಶಾ ಮುಖರ್ಜಿ ಅವರು ದೂರವಾಗಿ ಸ್ವಲ್ಪ ಸಮಯ ಕಳೆದಿದೆ. ದಂಪತಿಗಳ ಪ್ರತ್ಯೇಕತೆಯ ಬಗ್ಗೆ ವದಂತಿಗಳು ಪ್ರಾರಂಭವಾದಾಗಿನಿಂದ, ಕ್ರಿಕೆಟಿಗ ಅಥವಾ ಅವರ ಪತ್ನಿ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ, ಧವನ್ ಅಂತಿಮವಾಗಿ ಈ ವಿಚಾರವಾಗಿ ಮಾತನಾಡಿದರು. ‘ಮರುಮದುವೆ’ ವಿಷಯದ ಕುರಿತು ಮಾತನಾಡಿದ ಧವನ್, ಯುವಕರಿಗೆ ಪ್ರಮುಖ ಸಲಹೆಯನ್ನು ನೀಡಿದರು.

Advertisement

“ನಾನು ಮದುವೆಯಲ್ಲಿ ವಿಫಲನಾಗಿದ್ದೇನೆ, ಆದರೆ ಅಂತಿಮ ನಿರ್ಧಾರವು ವ್ಯಕ್ತಿಯದ್ದಾಗಿದೆ, ನಾನು ಇತರರತ್ತ ಬೆರಳು ತೋರಿಸುವುದಿಲ್ಲ, ನನಗೆ ಆ ಕ್ಷೇತ್ರದ ಬಗ್ಗೆ ತಿಳಿದಿಲ್ಲದ ಕಾರಣ ನಾನು ವಿಫಲಗೊಂಡಿದ್ದೇನೆ. ನಾನು ಇಂದು ಕ್ರಿಕೆಟ್ ಬಗ್ಗೆ ಮಾತನಾಡುವ ವಿಷಯಗಳು, ನನಗೆ 20 ವರ್ಷಗಳ ಹಿಂದೆ ಅರಿವಿರಲಿಲ್ಲ, ಇದು ಅನುಭವದೊಂದಿಗೆ ಬರುತ್ತದೆ” ಎಂದರು.

ತನ್ನ ವಿಚ್ಛೇದನ ಪ್ರಕರಣ ಇನ್ನೂ ಇತ್ಯರ್ಥಗೊಳಿಸಿಲ್ಲ ಎಂದು ಧವನ್ ಬಹಿರಂಗಪಡಿಸಿದರು. ‘ಮರುಮದುವೆ’ ವಿಷಯವನ್ನು ತಳ್ಳಿಹಾಕದ ಧವನ್, ಆದರೆ ಸದ್ಯಕ್ಕೆ ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದಿದ್ದಾರೆ.

ನಾನು ಮತ್ತೆ ಮದುವೆಯಾಗಲು ಬಯಸಿದರೆ, ನಾನು ಆ ವಿಚಾರದಲ್ಲಿ ಹೆಚ್ಚು ಬುದ್ಧಿವಂತನಾಗಿರುತ್ತೇನೆ. ನಾನು ಯಾರೊಂದಿಗೆ ನನ್ನ ಜೀವನವನ್ನು ಕಳೆಯಬಹುದು, ನನಗೆ ಯಾವ ರೀತಿಯ ಹುಡುಗಿ ಬೇಕು ಎಂದು ನನಗೆ ತಿಳಿಯುತ್ತದೆ; ನಾನು 26-27 ವರ್ಷದವನಿದ್ದಾಗ ಮತ್ತು ನಾನು ನಿರಂತರವಾಗಿ ಆಡುತ್ತಿದ್ದೆ, ನಾನು ಯಾವುದೇ ರಿಲೇಶನ್ ಶಿಪ್ ನಲ್ಲಿ ಇರಲಿಲ್ಲ. ನಾನು ಮೋಜು ಮಾಡುತ್ತಿದ್ದೆ, ಆದರೆ ಎಂದಿಗೂ ಪ್ರೇಮ ಸಂಬಂಧದಲ್ಲಿ ಇರಲಿಲ್ಲ ಎಂದು ಪಂಜಾಬ್ ಕಿಂಗ್ಸ್ ನಾಯಕ ಮನಬಿಚ್ಚಿ ಮಾತನಾಡಿದ್ದಾರೆ.

“ಹಾಗಾಗಿ ನಾನು ಪ್ರೀತಿಯಲ್ಲಿ ಬಿದ್ದಾಗ, ನಾನು ಯಾವುದೇ ಅಪಾಯಗಳನ್ನು ನೋಡಲಿಲ್ಲ, ಆದರೆ ಇಂದು ನಾನು ಪ್ರೀತಿಯಲ್ಲಿ ಬಿದ್ದರೆ, ನಾನು ಆ ಅಪಾಯಗಳು ಅರಿವೆಗೆ ಬರುತ್ತಿತ್ತು” ಎಂದರು.

Advertisement

ಯುವಕರಿಗೆ ಸಲಹೆ ನೀಡಿದ ಶಿಖರ್ ಧವನ್, ಅವರು ರಿಲೇಶನ್ ಶಿಪ್ ಗೆ ಒಳಗಾದ ಅದನ್ನು ಅನುಭವಿಸಲು ಕಲಿಯಬೇಕು. ಅದು ಮುಖ್ಯ. ಅವರು ಯಾವುದೇ ಭಾವನೆಯ ತೀವ್ರತೆಗೆ ಒಳಗಾಗಿ ಮದುವೆಯಂತಹ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಆ ವ್ಯಕ್ತಿಯೊಂದಿಗೆ ಒಂದೆರಡು ವರ್ಷಗಳನ್ನು ಕಳೆಯಿರಿ ಮತ್ತು ನಿಮ್ಮ ಸಂಸ್ಕೃತಿಗಳು ಹೊಂದಿಕೆಯಾಗುತ್ತವೆಯೇ ಮತ್ತು ನೀವು ಪರಸ್ಪರರ ಸಹವಾಸವನ್ನು ಆನಂದಿಸುತ್ತೀರಾ ಎಂದು ನೋಡಿ” ಎಂದರು.

“ಇದು ಕೂಡ ಒಂದು ಹೊಂದಾಣಿಕೆಯಂತೆ; ಕೆಲವರಿಗೆ 4-5 ಸಂಬಂಧಗಳು ಬೇಕಾಗಬಹುದು, ಇತರರು ವಿಚಾರವನ್ನು ಮತ್ತಷ್ಟು ಅರಿಯಲು 8-9 ತೆಗೆದುಕೊಳ್ಳಬಹುದು. ಅದರಲ್ಲಿ ಕೆಟ್ಟದ್ದೇನೂ ಇಲ್ಲ. ನೀವು ಅದರಿಂದ ಕಲಿಯುವಿರಿ ಮತ್ತು ನೀವು ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಂಡಾಗ, ನೀವು ಸ್ವಲ್ಪ ಅನುಭವಿಯಾಗಿ ಇರುತ್ತೀರಿ,” ಎಂದು ಶಿಖರ್ ಧವನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next