Advertisement

ಭಕ್ತ ಸಾಗರದ ನಡುವೆ ಶುಕಮುನಿಸ್ವಾಮಿಗಳ ರಥೋತ್ಸವ, ತಾತನ ದರ್ಶನ ಪಡೆದ ಭಕ್ತರು

07:19 PM Mar 02, 2022 | Team Udayavani |

ದೋಟಿಹಾಳ: ಗ್ರಾಮದ ಶ್ರೀ ಅವಧೂತ ಶುಕಮುನಿಸ್ವಾಮಿಯವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಂಜೆ 6.30ಕ್ಕೆ ಮಹಾರಥೋತ್ಸವ ಸಾವಿರಾರು ಭಕ್ತರ ಜಯಕಾರದ ಮಧ್ಯೆ ವಿಜೃಂಬಣೆಯಿಂದ ಜರುಗಿತು.

Advertisement

ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ನಾನಾ ತರಹದ ಹರಕೆಯನ್ನು ತಾತನ ಭಕ್ತಿಗೆ ಸಮರ್ಪಿಸಿದರು. ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿದ ಧಾರ್ಮಿಕ ವಿಧಿ ವಿಧಾನಗಳನ್ನು, ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಬೆಳಿಗ್ಗೆ ರಥದ ಮುಂದೆ ಹೋಮ ಹವನಗಳು ನೆರವೇರಿದವು ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತರು ಉರುಳುಸೇವೆ, ದೀಡ್ ನಮಸ್ಕಾರ ಇನ್ನಿತರ ಧಾರ್ಮಿಕ ಮಾಡುತ್ತಿದ್ದ ಕಾರ್ಯಕ್ರಮಗಳು ಮಠದ ಅಂಗಳದಲ್ಲಿ ಕಂಡು ಬಂತು.

ರಥೋತ್ಸವ ಜರುಗುವ ಮುಂಚಿತವಾಗಿ ತಾತನವರ ಪಲ್ಲಕ್ಕಿ ಗ್ರಾಮದಲ್ಲಿ ಸಂಚರಿಸಿ ರಥದ ಬೀದಿಗೆ ಬಂದಿತು. ಭಲಿ ಅನ್ನದ ಸಮರ್ಪಣೆ ಮಾಡುವ ಮುಖಾಂತರ ರಥದ ಬೀದಿಯಲ್ಲಿ ಪಲ್ಲಕ್ಕಿಯು ಸಂಚರಿಸಿತು. ನಂತರ ಸಾವಿರಾರು ಭಕ್ತರ ಜಯ ಘೋಷಣೆಗಳೊಂದಿಗೆ ಸ್ವಾಮಿಗಳ ಮಹಾರಥವನ್ನು ಎಳೆದರು.

ಮಠಕ್ಕೆ ತಾಲೂಕಿನ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡಿ ತಾತನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಕಮೀಟಿಯ ಅಧ್ಯಕ್ಷ ತಹಶೀಲ್ದಾರ ಎಂ.ಸಿದ್ದೇಶ, ಕಂದಾಯ ಇಲಾಖೆಯ ಸಿಬ್ಬಂದಿಗಳು, ದೋಟಿಹಾಳ, ಕೇಸೂರ ಗ್ರಾಮಗಳ ಸುತ್ತಲಿನ ಗ್ರಾಮಗಳಿಂದ 25 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಈ ರಥೋತ್ಸವ ಸಂಧರ್ಭದಲ್ಲಿ ಕುಷ್ಟಗಿ ಸಿಪಿಐಯವರು ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದರು.

Advertisement

ಇದನ್ನೂ ಓದಿ : 750 ಅಭ್ಯರ್ಥಿಗಳಿಗೆ ಶಿಷ್ಯವೇತನದ ಜತೆಗೆ ಕೆಪಿಎಸ್‌ಸಿ- ಯುಪಿಎಸ್‌ಸಿ ತರಬೇತಿ

ಭಕ್ತರ ಗಮನ ಸೆಳೆದ ಉದಯವಾಣಿ ವಿಶೇಷ ಪುರವಣಿ: ಕುಷ್ಟಗಿ ತಾಲೂಕಿನಲ್ಲಿ ದೊಡ್ಡ ಜಾತ್ರೆ ಎಂದೇ ಖ್ಯಾತಿ ಪಡೆದ ದೋಟಿಹಾಳ ಗ್ರಾಮದ ಅವಧೂತ ಶುಕಮುನಿಸ್ವಾಮಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ‘ಉದಯವಾಣಿ’ಯು ಶುಕಮುನಿಸ್ವಾಮಿಗಳ ಇತಿಹಾಸ, ಪರಂಪರೆ ಹಾಗೂ ಪಲ್ಲಕ್ಕಿಯ ಗತವೈಭವ ಕುರಿತು ಬುಧವಾರ ಹೊರ ತಂದ ವಿಶೇಷ ಪುರಾವಣಿಯನ್ನು ದೋಟಿಹಾಳ ಗ್ರಾಪಂ ಸದಸ್ಯರು ಮತ್ತು ಪಿಡಿಒ ಅವರು ಬಿಡುಗಡೆ ಮಾಡಿದರು. ಇದೇ ವೇಳೆ ಮಠಕ್ಕೆ ಆಗಮೀಸಿದ ಭಕ್ತರಿಗೆ ಕಮೀಟಿಯವರು ವಿಶೇಷ ಪುರಾವಣಿಯ ಪ್ರತಿಕೆಗಳನ್ನು ವಿತರಣೆ ಮಾಡಲಾಯಿತು. ದೂರದ ಗ್ರಾಮಗಳಿಂದ ಆಗಮಿಸಿದ ಭಕ್ತರು ಪತ್ರಿಕೆಯನ್ನು ಆಸ್ತಕಿಯಿಂದ ಓದುವದ್ದು ಮಠದ ಹತ್ತಿರ ಕಂಡುಬಂತು.

ಜಾತ್ರೆಗೆ ಆಗಮೀಸಿದ ಭಕ್ತರಿಗೆ ಹಣ್ಣು-ಹಂಪಲ, ಮಜ್ಜಿಗೆ ವಿತರಣಿ: ದೂರದ ಊರುಗಳಿಂದ ಗ್ರಾಮದ ಆರಾಧ್ಯ ದೈವ ಶ್ರೀ ಅವಧೂತ ಶುಕಮುನಿಸ್ವಾಮಿಯವರ ಜಾತ್ರೆಗೆ ಬಂದ ಯಾತ್ರಿಕರಿಗೆ ಗ್ರಾಮದ ಯುವಕರು ಮಜ್ಜಿಗೆ, ಹಣ್ಣು-ಹಂಪಲ ನೀಡಿ ಬರಮಾಡಿಕೊಂಡರು.

ಸದ್ಯ ಬಿಸಿಲಿ ಹೆಚ್ಚಾಗಿದು ಬಿಸಿನಲ್ಲಿ ಬಂದ ಭಕ್ತರಿಗೆ ಗ್ರಾಮದ ಹಣ್ಣು-ಹಂಪಲ ನೀಡಿ ಜಾತ್ರೆಗೆ ಸ್ವಾಗತ ಮಾಡಿಕೊಳ್ಳುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಯುವಕರು ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next